AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವನಹಳ್ಳಿ: ಜನರನ್ನ ಕಂಡು ಕದ್ದಿದ್ದ ದೇಗುಲದ ಹಣ ಬಿಟ್ಟು ಕಳ್ಳರು ಪರಾರಿ

ಸಿಲಿಕಾನ್​ ಸಿಟಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಇದಕ್ಕೆ ಬ್ರೇಕ್​ ಹಾಕಲು ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಯಾವುದೇ ಪ್ರಯೋಜನವಾಗಿಲ್ಲ. ಅದರಂತೆ ದೇವನಹಳ್ಳಿ ತಾಲೂಕಿನ ಗೋಪಸಂದ್ರ ಗ್ರಾಮದ ಮಾರಮ್ಮ ಬಳಿಯಿರುವ ಪೂಜಮ್ಮ ದೇವಾಲಯ (Temple)ವನ್ನ ಕಳ್ಳತನ ಮಾಡಲು ಖದೀಮರು ಎಂಟ್ರಿಕೊಟ್ಟು, ಕದ್ದಿದ್ದ ಹಣವನ್ನು ಕೂಡ ಬಿಟ್ಟು ಹೋಗಿದ್ದಾರೆ.

ನವೀನ್ ಕುಮಾರ್ ಟಿ
| Edited By: |

Updated on:Feb 07, 2024 | 3:51 PM

Share

ಬೆಂಗಳೂರು ಗ್ರಾಮಾಂತರ, ಫೆ.07: ಮಧ್ಯರಾತ್ರಿ ಬೇರೆಡೆ ದೇವಸ್ಥಾನದ ಹಣ ಕದ್ದು ದೇವನಹಳ್ಳಿ (Devanahalli) ತಾಲೂಕಿನ ಗೋಪಸಂದ್ರ ಗ್ರಾಮದ ಮಾರಮ್ಮ ಬಳಿಯಿರುವ ಪೂಜಮ್ಮ ದೇವಾಲಯ(Temple)ವನ್ನ ಕಳ್ಳತನ ಮಾಡಲು ಖದೀಮರು ಎಂಟ್ರಿಕೊಟ್ಟಿದ್ದಾರೆ. ಈ ವೇಳೆ ಜನರು ಬರುತ್ತಿದ್ದನ್ನು ಕಂಡು ಕದ್ದಿದ್ದ ದೇಗುಲದ ಬಳಿಯೇ 20 ಸಾವಿರಕ್ಕೂ ಅಧಿಕ ಹಣ ಹಾಗೂ ಚಿಲ್ಲರೆ, ಜೊತೆಗೆ ಬೈಕ್​ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ಪಲ್ಸರ್​ ಬೈಕ್​ನಲ್ಲಿ ದೇವಸ್ಥಾನಕ್ಕೆ ಬಂದಿದ್ದ ಖದೀಮರು, ಸ್ಥಳದಲ್ಲಿಯೇ ಹಣ ಬಿಟ್ಟು ಪರಾರಿಯಾಗಿದ್ದು, ಸ್ಥಳೀಯರು ನಗದು ಹಾಗೂ ಬೈಕ್​ನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಚನ್ನರಾಯಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಯುವಕನ ಮೇಲೆ ಚಿರತೆ ದಾಳಿ; ಕೂದಲೆಳೆ ಅಂತರಲ್ಲಿ ಪಾರಾದ ಯುವಕ

ಗದಗ: ರಾಜ್ಯದ ಕೆಲ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಲವು ಕಡೆಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಜೊತೆಗೆ ಕೆಲವು ಜನ ಸಾವನ್ನಪ್ಪಿದ್ದಾರೆ. ವನ್ಯ ಜೀವಿಗಳು ನಾಡಿಗೆ ಬರದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಪ್ರಯತ್ನಿಸುತ್ತಿದ್ದಾರೆ. ಆದರೆ, ಆಗಾಗ ಚಿರತೆ, ಆನೆ, ಕರಡಿ ಸೇರಿದಂತೆ ಅನೇಕ ಪ್ರಾಣಿಗಳು ಗ್ರಾಮಕ್ಕೆ ನುಗ್ಗುತ್ತಿವೆ. ಅದರಂತೆ ಇದೀಗ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಜಿಗೇರಿ ಗ್ರಾಮದ ಬಳಿ ಯುವಕನ ಮೇಲೆ ಚಿರತೆ ದಾಳಿ ಮಾಡಿದೆ. ಸರಿಯಾಗಿ ಆತನ ಗಂಟಲು ಹಿಡಿದಿದ್ದು, ಯುವಕ ಕೂದಲೆಳೆ ಅಂತರಲ್ಲಿ ಪಾರಾಗಿದ್ದಾನೆ.

ಇದನ್ನೂ ಓದಿ:ಬೆಂಗಳೂರು: ಕಳ್ಳತನಕ್ಕಾಗಿಯೇ ಹೈದರಾಬಾದ್​ನಿಂದ ಬಂದು ಮನೆಗಳನ್ನು ದೋಚುತ್ತಿದ್ದ ಖದೀಮರು ಅರೆಸ್ಟ್

ಸ್ಥಳಕ್ಕೆ ಕಾರ್ಮಿಕರು ಓಡಿ ಬಂದಾಗ ಓಡಿ ಹೋದ ಚಿರತೆ

ಇನ್ನು ಚಿರತೆ ದಾಳಿಗೆ ಒಳಗಾದ ಜೀಗೇರಿ ಗ್ರಾಮದ 18 ವರ್ಷದ ಉದಯ ನಿಡಶೇಸಿ (18), ಶರಣಪ್ಪ ಆವಾರಿ ಎಂಬುವವರ ಜಮೀನಿನಲ್ಲಿ ಬಾಳೆಗೋಣಿ ಕತ್ತರಿಸುವಾಗ ಚಿರತೆ ದಾಳಿ ಮಾಡಿದೆ. ಗಂಟಲು, ಎದೆಗೆ ಬಾಯಿ ಹಾಕಿ ಮೈ ಹಾಗೂ ಬೆನ್ನಿನ ಮೇಲೆ ದಾಳಿ ಮಾಡಿದೆ. ಕೂಡಲೇ ಯುವಕ ಕೂಗಾಟ, ಚಿರಾಟ ನಡೆಸಿದ್ದಾನೆ. ಇದರಿಂದ ಎಚ್ಚೆತ್ತ ಇತರ ಕಾರ್ಮಿಕರು, ಸ್ಥಳಕ್ಕೆ ಓಡಿ ಬಂದಾಗ ಚಿರತೆ ಓಡಿ ಹೋಗಿದೆ. ಗಾಯಾಳು ಯುವಕನಿಗೆ ಗಜೇಂದ್ರಗಡ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಉಪ ವಲಯ ಅರಣ್ಯಧಿಕಾರಿ ಪ್ರವೀಣಕುಮಾರ ಸಾಸಿವಹಳ್ಳಿ ಭೇಟಿ ನೀಡಿ ಗಾಯಾಳು ಆರೋಗ್ಯವನ್ನು ಪರೀಶಿಲಿಸಿದ್ದಾರೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:29 pm, Wed, 7 February 24

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ