ಬೆಂಗಳೂರು: ಕಳ್ಳತನಕ್ಕಾಗಿಯೇ ಹೈದರಾಬಾದ್ನಿಂದ ಬಂದು ಮನೆಗಳನ್ನು ದೋಚುತ್ತಿದ್ದ ಖದೀಮರು ಅರೆಸ್ಟ್
ಕಳವು ಮಾಡಲೆಂದೇ ಹೈದರಾಬಾದ್ ನಿಂದ ಬೆಂಗಳೂರಿಗೆ ಬಂದು ಮಾರುತಿನಗರದ 7ನೇ ಕ್ರಾಸ್ ನ ಮನೆಯೊಂದರ ಡೋರ್ ಅನ್ನು ರಾಡ್ನಿಂದ ಮುರಿದು 3 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಹೊಸ ವರ್ಷಕ್ಕೆ ಮೋಜು ಮಸ್ತಿ ಮಾಡಿದ್ದ ಕುಖ್ಯಾತ ಅಂತರಾಜ್ಯ ಮನೆ ಕಳವು ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರು, ಜ.31: ಹಾಡಹಗಲೇ ಮನೆಕಳವು ಮಾಡ್ತಿದ್ದ ಮನೆಗಳ್ಳರನ್ನ (Theft) ಮಡಿವಾಳ ಪೊಲೀಸರು ಬಂಧಿಸಿದ್ದಾರೆ (Madiwala Police). ಬೆಂಗಳೂರಿನಲ್ಲಿ ಮನೆಡೋರ್ ಮುರಿದು ಚಿನ್ನಾಭರಣ ಕಳವು ಮಾಡಿದ್ದ ಕುಖ್ಯಾತ ಅಂತರಾಜ್ಯ ಮನೆ ಕಳವು ಆರೋಪಿಗಳನ್ನು ಬಂಧಿಸಲಾಗಿದೆ. ಹೈದರಾಬಾದ್ ಮೂಲದ ಐವರು ಆರೋಪಿಗಳು ಮಡಿವಾಳ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಬುದ್ ಅಲಿ, ಶೇಕ್ ಫಯಾಜ್, ಅಯೈಜ್ ಅಹ್ಮದ್, ರಿಯಾಜ್ ಬಂಧಿತ ಆರೋಪಿಗಳು
ಡಿಸೆಂಬರ್ನಲ್ಲಿ ಮಡಿವಾಳ ಠಾಣಾ ವ್ಯಾಪ್ತಿಯ ಮಾರುತಿನಗರದ 7ನೇ ಕ್ರಾಸ್ ನ ಮನೆಯೊಂದರ ಡೋರ್ ಅನ್ನು ರಾಡ್ನಿಂದ ಮುರಿದು ಮನೆಕಳವು ಮಾಡಿ ಖದೀಮರು ಎಸ್ಕೇಪ್ ಆಗಿದ್ದರು. 3 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರು. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಳ್ಳತನ ಮಾಡಲೆಂದೇ ಹೈದರಾಬಾದ್ನಿಂದ ಬರುತ್ತಿದ್ದ ಖದೀಮರು
ಈ ಆರೋಪಿಗಳು ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಕಳವು ಮಾಡಿ ಒಂದೂವರೆ ಕಿ.ಮೀ. ನಡೆದು ಕಾರ್ ಹತ್ತಿದ್ದರು. ಕಳ್ಳರ ಜಾಡು ಹಿಡಿದು ಸಿಸಿ ಕ್ಯಾಮರಾ ಆಧರಿಸಿ ಟ್ರೇಸ್ ಮಾಡಿದಾಗ ಈ ಖದೀಮರು ಹೊಸ ಕ್ರೆಟಾ ಕಾರ್ ನಲ್ಲಿ ಹೈದರಾಬಾದ್ ನಿಂದ ಕಳವು ಮಾಡಲೆಂದೆ ಬರ್ತಿದ್ದರು ಎಂದು ತಿಳಿದುಬಂದಿದೆ. ಖತರ್ನಾಕ್ ಕಳ್ಳರ ಚಲನವಲನ ಏರಿಯಾದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಕಳ್ಳರು ನಡೆದು ಬರ್ತಿದ್ದ, ಕಳವು ಮಾಡಿ ಹೋಕ್ತಿರು ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್ ಮೂಲಕ ಹೆಚ್ಚು ಹಣ ಗಳಿಸಬಹುದೆಂದು ಆಸೆ ತೋರಿಸಿ 158 ಕೋಟಿ ರೂ. ವಂಚಿಸಿದ್ದ ಆರೋಪಿಗಳು ಅರೆಸ್ಟ್
ಬಂಧಿತ ಅಯೈದ್ ಅಹ್ಮದ್ ಮೇಲಿದೆ 101 ಮನೆಕಳವು ಕೇಸ್
ಇನ್ನು ಬಂಧಿತ ಆರೋಪಿಗಳ ಮೇಲೆ ನೂರಾರು ಕೇಸ್ಗಳು ದಾಖಲಾಗಿರುವುದು ಪತ್ತೆಯಾಗಿದೆ. MBA ಪದವೀಧರನಾಗಿರುವ ಅಯೈದ್ ಅಹ್ಮದ್ ಮೇಲೆ 101 ಮನೆಕಳವು ಕೇಸ್ಗಳಿವೆ. ಅಬುದ್ ಅಲಿ ಮೇಲೆ 50 ಕ್ಕೂ ಹೆಚ್ಚು ಮನೆಕಳವು ಕೇಸ್ಗಳಿವೆ. ಹೈದರಾಬಾದ್ ನಿಂದ ಬಂದು ಲಾಕ್ ಆಗಿದ್ದ ಮನೆಗಳನ್ನು ರೌಂಡಪ್ ಮಾಡಿ ಹಾಡಹಗಲೇ ಮನೆ ಡೋರ್ ಲಾಕ್ ಹೊಡೆದು ಕಳವು ಮಾಡುತ್ತಿದ್ದರು. ನ್ಯೂಇಯರ್ ಸೆಲೆಬ್ರೆಷನ್ ಗೆ ಕಳವು ಮಾಡಿ ಸಿಕ್ಕ ಹಣದಲ್ಲಿ ಎಂಜಾಯ್ ಮಾಡಿದ್ದರು. ಗೋವಾದ ಕೆಸಿನೋದಲ್ಲಿ ಮೋಜು-ಮಸ್ತಿ ಮಾಡಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ