ಪೀಣ್ಯ ಫ್ಲೈಓವರ್ ಘನ ವಾಹನ ಸಂಚಾರಕ್ಕೂ ಶೀಘ್ರ ಮುಕ್ತ: ಶುಕ್ರವಾರ ಅಧಿಕಾರಿಗಳ ಸಭೆ

ತಜ್ಞರ ಸಮಿತಿಯ ಸದಸ್ಯರು ಮತ್ತು ಎನ್‌ಎಚ್‌ಎಐ ಅಧಿಕಾರಿಗಳು ಫೆಬ್ರವರಿ 2 ರಂದು ಸಭೆ ಸೇರಿ ವರದಿಯ ಬಗ್ಗೆ ಚರ್ಚಿಸಲು ಮತ್ತು ಘನ ವಾಹನಗಳ ಸಂಚಾರಕ್ಕೆ ಫ್ಲೈಓವರ್‌ನಲ್ಲಿ ಅವಕಾಶ ನೀಡುವ ಬಗ್ಗೆ ನಿರ್ಧರಿಸುವ ಸಾಧ್ಯತೆಯಿದೆ. ಈ ಬಗ್ಗೆ ತಜ್ಞರ ಸಮಿತಿಯ ಮುಖ್ಯಸ್ಥರೂ ಆಗಿರುವ ಐಐಎಸ್‌ಸಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಚಂದ್ರ ಕಿಶನ್ ಜೆಎಂ ಮಾಹಿತಿ ನೀಡಿದ್ದಾರೆ.

ಪೀಣ್ಯ ಫ್ಲೈಓವರ್ ಘನ ವಾಹನ ಸಂಚಾರಕ್ಕೂ ಶೀಘ್ರ ಮುಕ್ತ: ಶುಕ್ರವಾರ ಅಧಿಕಾರಿಗಳ ಸಭೆ
ಪೀಣ್ಯ ಫ್ಲೈಓವರ್
Follow us
Ganapathi Sharma
|

Updated on: Jan 31, 2024 | 8:11 AM

ಬೆಂಗಳೂರು, ಜನವರಿ 31: ಉತ್ತರ ಬೆಂಗಳೂರಿನ ಪೀಣ್ಯ ಮೇಲ್ಸೇತುವೆ (Peenya flyover) ಎರಡು ವರ್ಷಗಳ ನಂತರ ಫೆಬ್ರವರಿಯಲ್ಲಿ ಘನ ವಾಹನಗಳ (Heavy Vehicles) ಸಂಚಾರಕ್ಕೆ ಮತ್ತೆ ತೆರೆಯುವ ಸಾಧ್ಯತೆಯಿದೆ. ತುಮಕೂರು ರಸ್ತೆಯಲ್ಲಿರುವ 15 ಮೀಟರ್ ಅಗಲದ, 4.2 ಕಿಮೀ ಉದ್ದದ ಫ್ಲೈಓವರ್ ಅನ್ನು 2021 ರ ಡಿಸೆಂಬರ್ ತಿಂಗಳಿನಿಂದ ಬಸ್ಸುಗಳು ಮತ್ತು ಟ್ರಕ್​ಗಳ ಸಂಚಾರಕ್ಕೆ ನಿಷೇಧಿಸಲಾಗಿತ್ತು. ಫ್ಲೈಓವರ್​ನ ಮೂರು ವ್ಯಾಪ್ತಿಯಲ್ಲಿರುವ ಪ್ರಿಸ್ಟ್ರೆಸ್ಡ್ ಕೇಬಲ್​​ಗಳು ತುಕ್ಕು ಹಿಡಿದಿರುವುದು ಬೆಳಕಿಗೆ ಬಂದು ಘನ ವಾಹನ ಸಂಚಾರ ಅಸಾಧ್ಯವಾದ ಕಾರಣ ನಿಷೇಧ ನಿರ್ಧಾರ ಕೈಗೊಳ್ಳಲಾಗಿತ್ತು. ಇದು ಸರ್ವೀಸ್ ರಸ್ತೆಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗಿತ್ತು.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕಳೆದ ವರ್ಷ 38.5 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಕೇಬಲ್‌ಗಳನ್ನು ಹೆಚ್ಚುವರಿಯಾಗಿ ಸೇರಿಸಲು ಮತ್ತು ಫ್ಲೈಓವರ್ ಅನ್ನು ಬಲಪಡಿಸಲು ಕಾಮಗಾರಿ ಆರಂಭಿಸಿತ್ತು. ಫ್ಲೈಓವರ್‌ನಲ್ಲಿ 120 ಸ್ಪ್ಯಾನ್‌ಗಳೊಂದಿಗೆ, ಎನ್‌ಎಚ್‌ಎಐ 240 ಪ್ರಿಸ್ಟ್ರೆಸ್ಡ್ ಕೇಬಲ್‌ಗಳನ್ನು ಸೇರಿಸಿದ್ದು, ಅದನ್ನು ಬಲಪಡಿಸಿದೆ.

240 ಪ್ರಿಸ್ಟ್ರೆಸ್ಡ್ ಕೇಬಲ್‌ಗಳಲ್ಲಿ ಲೋಡ್ ಪರೀಕ್ಷೆಗಳನ್ನು ನಡೆಸಲು ಜನವರಿ 16 ರಂದು ರಾತ್ರಿ 11 ರಿಂದ ಜನವರಿ 19 ರಂದು ಬೆಳಿಗ್ಗೆ 11 ರವರೆಗೆ ಫ್ಲೈಓವರ್‌ನಲ್ಲಿ ಎಲ್ಲಾ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಲೋಡ್ ಪರೀಕ್ಷೆಯ ಸಮಯದಲ್ಲಿ, 105-106 ಮತ್ತು 117-118 ಕಂಬಗಳನ್ನು ಸಂಪರ್ಕಿಸುವ ಎರಡು ಸ್ಪ್ಯಾನ್‌ಗಳಲ್ಲಿ ತಲಾ 32 ಟನ್‌ಗಳನ್ನು ಹೊತ್ತ ಎಂಟು ಟ್ರಕ್‌ಗಳನ್ನು ನಿಲ್ಲಿಸಿ ಪರೀಕ್ಷೆ ನಡೆಸಲಾಗಿತ್ತು.

ತಜ್ಞರ ಸಮಿತಿ ಹೇಳಿದ್ದೇನು?

ಲೋಡ್ ಟೆಸ್ಟಿಂಗ್ ಫಲಿತಾಂಶಗಳು ತೃಪ್ತಿಕರವಾಗಿವೆ ಮತ್ತು ಮುಂದಿನ ಅಗತ್ಯ ಕ್ರಮಕ್ಕಾಗಿ ವರದಿಯನ್ನು ಎನ್‌ಎಚ್‌ಎಐ ಪ್ರಧಾನ ಕಚೇರಿಗೆ ಕಳುಹಿಸಲಾಗಿದೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಚಂದ್ರ ಕಿಶನ್ ಜೆಎಂ ಹೇಳಿದ್ದಾರೆ. ಇವರು ಮೇಲ್ಸೇತುವೆ ಕುರಿತು ರಚಿಸಲಾಗಿರುವ ನಾಲ್ಕು ಸದಸ್ಯರ ತಜ್ಞರ ಸಮಿತಿಯ ಮುಖ್ಯಸ್ಥರೂ ಆಗಿದ್ದಾರೆ.

ಪ್ರೊ ಕಿಶನ್ ಪ್ರಕಾರ, ಸಮಿತಿಯ ಸದಸ್ಯರು ಮತ್ತು ಎನ್‌ಎಚ್‌ಎಐ ಅಧಿಕಾರಿಗಳು ಫೆಬ್ರವರಿ 2 ರಂದು ಸಭೆ ಸೇರಿ ವರದಿಯ ಬಗ್ಗೆ ಚರ್ಚಿಸಲು ಮತ್ತು ಘನ ವಾಹನಗಳ ಸಂಚಾರಕ್ಕೆ ಫ್ಲೈಓವರ್‌ನಲ್ಲಿ ಅವಕಾಶ ನೀಡುವ ಬಗ್ಗೆ ನಿರ್ಧರಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಪೀಣ್ಯ ಫ್ಲೈಓವರ್ ರಿ ಓಪನ್; ಭಾರಿ ಗಾತ್ರದ ವಾಹನಗಳ ಸಂಚಾರಕ್ಕೂ ಅವಕಾಶ ನೀಡುವ ಸಾಧ್ಯತೆ

ಘನ ವಾಹನ ಸಂಚಾರಕ್ಕೆ ದಿನಾಂಕವನ್ನು ನಿಗದಿಪಡಿಸಲಾಗಿಲ್ಲವಾದರೂ, ಫೆಬ್ರವರಿ ಆರಂಭದಲ್ಲಿ ಭಾರೀ ವಾಹನಗಳು ಫ್ಲೈಓವರ್ ಅನ್ನು ಬಳಸಲು ಪ್ರಾರಂಭಿಸಬಹುದು ಎಂದು ಅವರು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಈಗಿರುವ ಕೇಬಲ್‌ಗಳ ಬದಲಾವಣೆಯನ್ನು ಪರಿಶೀಲಿಸಿದ ನಂತರ ಘನ ವಾಹನಗಳ ಸಂಚಾರಕ್ಕೆ ಅನುಮತಿ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಎನ್‌ಎಚ್‌ಎಐನ ಬೆಂಗಳೂರು ಯೋಜನಾ ನಿರ್ದೇಶಕ ಕೆ.ಬಿ.ಜಯಕುಮಾರ್ ಕೂಡ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ