AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Devanahalli: ಕಾಲೇಜಿನಲ್ಲಿ ಯುವತಿಯ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಪಾಗಲ್ ಪ್ರೇಮಿ ಚೇತರಿಕೆ, ಕೊಲೆಗೆ ಮುನ್ನ ನಡೆದಿತ್ತು ಮಾಸ್ಟರ್ ಪ್ಲಾನ್

ಯಲಹಂಕದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಲಯಸ್ಮಿತ ಎನ್ನುವ ಯುವತಿ ಪ್ರೀತಿಗೆ ಒಪ್ಪಲಿಲ್ಲ ಎಂದು ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಪವನ್ ಚೇತರಿಕೆ ಕಂಡಿದ್ದಾನೆ.

Devanahalli: ಕಾಲೇಜಿನಲ್ಲಿ ಯುವತಿಯ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಪಾಗಲ್ ಪ್ರೇಮಿ ಚೇತರಿಕೆ, ಕೊಲೆಗೆ ಮುನ್ನ ನಡೆದಿತ್ತು ಮಾಸ್ಟರ್ ಪ್ಲಾನ್
ಪಾಗಲ್​ ಪ್ರೇಮಿ ಪವನ್​
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jan 04, 2023 | 12:30 PM

Share

ಬೆಂಗಳೂರು ಗ್ರಾಮಾಂತರ: ಯಲಹಂಕದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಲಯಸ್ಮಿತ ಎನ್ನುವ ಯುವತಿಯನ್ನ ಪ್ರೀತಿಸುತ್ತಿದ್ದ ಪವನ್​ ಆಕೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿದ್ದು ಜೊತೆಗೆ ತಾನು ಆತ್ಮಹತ್ಯೆಗೆ ಯತ್ನಿಸಿದ್ದ, ಕೂಡಲೇ ಪೊಲೀಸರು ಆತನನ್ನ ಬೋರಿಂಗ್ ಆಸ್ವತ್ರೆಗೆ ದಾಖಲಿಸಿದ್ದರು. ಇದೀಗ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಕುರಿತು ಮೃತಳ ತಾಯಿ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸದ್ಯ ದೊಡ್ಡಬಳ್ಳಾಪುರ ಉಪವಿಭಾಗದ ರಾಜಾನುಕುಂಟೆ ಠಾಣೆಯಲ್ಲಿ ಪವನ್ ಮತ್ತು ಕಾಲೇಜು ವಿರುದ್ದ ದೂರು ದಾಖಲಾಗಿದ್ದು, ಕಾಲೇಜು ಸಿಬ್ಬಂದಿ ನಿರ್ಲಕ್ಷ್ಯದಿಂದ ಕೊಲೆಯಾಗಿದೆ ಎಂದು ದೂರು ನೀಡಿದ್ದಾರೆ. ರಾಜಾನುಕುಂಟೆ ಪೊಲೀಸರು ಇದೀಗ ಪವನ್ ವಿಚಾರಣೆಗೆ ಮುಂದಾಗಿದ್ದಾರೆ. ಕೊಲೆ ಮಾಡಲೇಬೇಕು ಎಂದು ನಿರ್ಧರಿಸಿದ್ದ ಪವನ್ ಪಕ್ಕಾ ಪ್ಲಾನ್ ಮಾಡಿದ್ದ. ಪಾಗಲ್ ಪ್ರೇಮಿ ಪವನ್ ಲಯಸ್ಮಿತಾಳನ್ನ ಹುಚ್ಚನಂತೆ ಪ್ರೀತಿಸುತ್ತಿದ್ದು, ಇನ್​ಸ್ಟಾಗ್ರಾಮ್, ಫೇಸ್ಬುಕ್​ಗಳಲ್ಲಿ ಲಯಸ್ಮಿತಾಳ ಫೋಟೋವನ್ನ ವಾಲ್ ಫೇಪರ್ ಹಾಕಿದ್ದ. ಕೇವಲ ಸೋಷಿಯಲ್ ಮೀಡಿಯಾ ಮಾತ್ರವಲ್ಲ ತನ್ನ ಎದೆಯ ಮೇಲು ಲಯಸ್ಮಿತಾಳ ಹೆಸರನ್ನ ಟ್ಯಾಟೂ ಹಾಕಿಸಿದ್ದ ಪಾಗಲ್ ಪ್ರೇಮಿ. ಇನ್ನು ಈ ಕೃತ್ಯಕ್ಕೂ ಒಂದು ಗಂಟೆ ಮೊದಲು ಸೋಶಿಯಲ್ ಮೀಡಿಯಾದಲ್ಲಿದ್ದ ಎಲ್ಲಾ ಫೋಟೋಗಳನ್ನ ಡಿಲೀಟ್‌ ಮಾಡಿದ್ದಾನೆ.

ಆರೋಪಿ ಪವನ್​ಗೆ ಸಾಥ್​ ಕೊಟ್ಟರಾ ಅದೇ ಕಾಲೇಜು ವಿದ್ಯಾರ್ಥಿಗಳು

ಆರೋಪಿ ಪವನ್ ಕಲ್ಯಾಣ್​ಗೆ ಅದೇ ಕಾಲೇಜ್ ಸ್ಟೂಡೆಂಟ್ಸ್ ಸಾಥ್ ಕೊಟ್ರಾ.? ಬೇರೆ ವಿದ್ಯಾರ್ಥಿಗಳ ಐಡಿ ಕಾರ್ಡ್ ಬಳಸಿ ಕಾಲೇಜಿಗೆ ಎಂಟ್ರಿಕೊಟ್ಟಿದ್ದ ಪವನ್ ಕಲ್ಯಾಣ್. ಮಧ್ಯಾಹ್ನ 12:30 ರ ಸುಮಾರಿಗೆ ಊಟದ ಸಮಯದಲ್ಲಿ ಪ್ರೆಸಿಡೆನ್ಸಿ ಯೂನಿವರ್ಸಿಟಿಗೆ ಆಗಮಿಸಿದ್ದ ಆರೋಪಿ. ಮೊದಲಿಗೆ ಪಾರ್ಕಿಂಗ್ ಗೇಟ್ ಬಳಿ ಬೇರೊಬ್ಬ ವಿದ್ಯಾರ್ಥಿಯ ಐಡಿ ಕಾರ್ಡ್ ಪಡೆದಿದ್ದಾನೆ. ನಂತರ ನೇರವಾಗಿ ಲಯಸ್ಮಿತಾಳ ಮೊದಲ ವರ್ಷ ಬಿಇ ಕ್ಲಾಸ್ ರೂಂ ಬಳಿ ತೆರಳಿದ್ದಾನೆ. ತರಗತಿಯಲ್ಲಿದ್ದ ಲಯಸ್ಮಿತಾಳನ್ನ ಕಾರಿಡಾರ್ ಬಳಿ ಕರೆದಿರುವ ಆರೋಪಿ. ಲಯಸ್ಮಿತಾ ಬರುತ್ತಿದ್ದಂತೆ ಕತ್ತು ಎದೆ ಹೊಟ್ಟೆ ಸೇರಿ ಹತ್ತು ಕಡೆ ಚಾಕು ಇರಿದಿದ್ದಾನೆ.

ಆರೋಪಿ ಪವನ್ ಕಲ್ಯಾಣ್​ಗೆ ಐಡಿ ಕಾರ್ಡ್ ಕೊಟ್ಟವರು ಯಾರು ಎಂದು ಕಾಲೇಜಿನ ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿಯ ಚಲನವಲನ ಪತ್ತೆ ಹಚ್ಚುತ್ತಿದ್ದಾರೆ. ಹಾಗೂ ಸೆಕ್ಯೂರಿಟಿ ಗಾರ್ಡ್ ಸೇರಿ ಕಾಲೇಜು ಆಡಳಿತ ಮಂಡಳಿಯನ್ನ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನ ಕಾಲೇಜೊಂದರಲ್ಲಿ ಹಾಡಹಗಲೇ ಯುವತಿಗೆ ಚಾಕು ಇರಿದು ಕೊಲೆ ಮಾಡಿದ ಯುವಕ: ಪ್ರೀತಿ ಪ್ರೇಮದ ಶಂಕೆ

ಪ್ರೆಸಿಡೆನ್ಸಿ ವಿವಿ ವಿರುದ್ದ ನಾಳೆ ಬೃಹತ್‌ ಪ್ರತಿಭಟನೆ

ಪ್ರೆಸಿಡೆನ್ಸಿ ವಿಶ್ವ ವಿದ್ಯಾಲಯದಲ್ಲಿ ಪದೇ ಪದೇ ಆಗುತ್ತಿರುವ ಅಹಿತಕರ ಘಟನೆಗಳನ್ನ ತಡೆಯುವಂತೆ ಒತ್ತಾಯಿಸಿ ನಾಳೆ ಪ್ರತಿಭಟನೆ ನಡೆಸಲು ಮುಂದಾದ ಸ್ಥಳಿಯ ಸಂಘ-ಸಂಸ್ಥೆ ಮತ್ತು ಗ್ರಾಮಸ್ಥರು. ನಾಳೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆಗೆ ಅನುಮತಿ ಕೇಳಿ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿಗೆ ಪತ್ರ ಕೊಡಲಾಗಿದೆ.

ಮೊನ್ನೆ ದೊಣ್ಣೆಗಳನ್ನ ಹಿಡಿದು ಹೊಡೆದಾಟ ಜೊತೆಗೆ ಕುಡಿದು ರಸ್ತೆಯಲ್ಲಿ ದಾಂದಲೆ ಸೇರಿದಂತೆ ವಿದ್ಯಾರ್ಥಿನಿ ಕೊಲೆ ಇಂತಹ ಘಟನೆಗಳು ನಡೆಯುತ್ತಿದರು ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲವೆಂದು ರಾಜಾನುಕುಂಟೆ ಪೊಲೀಸರ ವಿರುದ್ದವು ಸ್ಥಳಿಯರು ಗರಂ ಆಗಿದ್ದು, ನಾಳೆ ವಿವಿ ಮುಂದೆ ಬೃಹತ್ ಹೋರಾಟ ಮಾಡಲು ನಿರ್ಧರಿಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:29 pm, Wed, 4 January 23

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್