ವಿದ್ಯಾರ್ಥಿನಿಗೆ ಬಾಸುಂಡೆ ಬರುವಂತೆ ಹೊಡೆದ ಪ್ರಾಂಶುಪಾಲೆ, ಪೋಷಕರ ಆಕ್ರೋಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಖಾಸಗಿ ಶಾಲೆಯ ಪ್ರಾಂಶುಪಾಲೆ ವಿದ್ಯಾರ್ಥಿನಿಗೆ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ಪ್ರಾಂಶುಪಾಲೆ ಉಷಾ ಕಿರಣ್ ವಿದ್ಯಾರ್ಥಿನಿಗೆ ಬೆತ್ತದಿಂದ ಕೈ ಮತ್ತು ಕಾಲುಗಳ ಮೇಲೆ‌ ಬಾಸುಂಡೆ ಬರುವಂತೆ ಹೊಡೆದಿದ್ದಾರೆ.

ವಿದ್ಯಾರ್ಥಿನಿಗೆ ಬಾಸುಂಡೆ ಬರುವಂತೆ ಹೊಡೆದ ಪ್ರಾಂಶುಪಾಲೆ, ಪೋಷಕರ ಆಕ್ರೋಶ
ವಿದ್ಯಾರ್ಥಿನಿ ಕೈ, ಕಾಲಿನ ಮೇಲೆ ಬಾಸುಂಡೆ
Edited By: ವಿವೇಕ ಬಿರಾದಾರ

Updated on: Nov 14, 2024 | 12:30 PM

ದೇವನಹಳ್ಳಿ, ನವೆಂನರ್​ 14: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ (Devanhalli) ತಾಲೂಕಿನ ವಿಜಯಪುರ ಪಟ್ಟಣದ ಖಾಸಗಿ ಶಾಲೆಯ ಪ್ರಾಂಶುಪಾಲೆ ವಿದ್ಯಾರ್ಥಿನಿಗೆ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ವಿಶೇಷ ಚೇತನ ವಿದ್ಯಾರ್ಥಿಯ ಸಹಾಯಕ್ಕೆ ಧಾವಿಸಲಿಲ್ಲ ಅಂತ ಪ್ರಾಂಶುಪಾಲೆ ಉಷಾ ಕಿರಣ್ ವಿದ್ಯಾರ್ಥಿನಿಗೆ ಬೆತ್ತದಿಂದ ಕೈ ಮತ್ತು ಕಾಲುಗಳ ಮೇಲೆ‌ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಮಗಳಿಗೆ ಹಿಗ್ಗಾಮುಗ್ಗ ಹೊಡೆದಿರುವುದನ್ನು ಖಂಡಿಸಿ ಪ್ರಾಂಶುಪಾಲೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ವಿಜಯಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಕರಣ ಸಂಬಂಧ ಪ್ರಾಂಶುಪಾಲೆ ಉಷಾ ಕಿರಣ್ ಮಾತನಾಡಿ, ತರಗತಿಯಲ್ಲಿ ನಡೆಯಲು ಆಗದ ವಿಶೇಷ ಚೇತನ ಮಗು ಇದೆ. ವಿಶೇಷ ಚೇತನ ಮಗುವಿನ ಬಳಿ ಯಾರು ಹೋಗಬಾರದು, ಮಾತನಾಡಬಾರದು ಅಂತ ಕೆಲ ಮಕ್ಕಳು ಹೇಳುತ್ತಿದ್ದರಂತೆ. ಆ ಮಗುವಿಗೆ ಸಹಾಯಕ್ಕೆ ಆಯಾ ಇದ್ದಾರೆ. ಆದರೆ ಕೆಲವೊಮ್ಮೆ ಮಕ್ಕಳ ಸಹಾಯ ಬೇಕಾಗುತ್ತದೆ. ಮಗುವಿನ ಸಹಾಯಕ್ಕೆ ಕರೆದಾಗ “ನಾವು ಆಳುಗಳಾ” ಎಂದು ಇತರ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಶಾಲೆಗೆ ಬೀಗ ಹಾಕಿ ಪೋಷಕರ ಆಕ್ರೋಶ

ಕಳೆದ ಮೂರು ತಿಂಗಳಿನಿಂದ ಇದೇ ರೀತಿ ನಡೆಯುತ್ತಿದ್ದು, ನಿನ್ನೆಯೂ ಹೀಗೆ ಆಗಿದೆ. ಹೀಗಾಗಿ, ನಾನು ಆ ಮಗುವಿನ ಕೈ ಮತ್ತು ಕಾಲಿಗೆ ಹೊಡೆದಿದ್ದೇನೆ. ನಾನು ಆ ರೀತಿ ಹೊಡೆಯಬಾರದಿತ್ತು ತಪ್ಪಾಗಿದೆ. ವಿಶೇಷಚೇತನ ಮಗುವಿಗೆ ಹೀಗಾಗುತ್ತಿದೆ ಅಂತ ಹೊಡೆದೆ. ವಿದ್ಯಾರ್ಥಿನಿಯ ಪೋಷಕರಿಗೆ ನಾನು ಹೇಳಬೇಕಿತ್ತು, ಆದರೆ ಆ ಕ್ಷಣದಲ್ಲಿ ಆ ರೀತಿ ಮಾಡಿದ್ದೇನೆ ಎಂದು ವಿಷಾಧ ವ್ಯಕ್ತಪಡಿಸಿದರು.

ಶಾಲೆಗೆ ಹೋಗಲು ಇಷ್ಟ ಇಲ್ಲದೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಮಕ್ಕಳ ರಕ್ಷಣೆ

ಶಿವಮೊಗ್ಗ: ನಗರದ ರೈಲು ನಿಲ್ದಾಣದಲ್ಲಿ ಶಾಲೆಯಿಂದ ತಪ್ಪಿಸಿಕೊಂಡು ಬಂದಿದ್ದ ನಾಲ್ವರು ಮಕ್ಕಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಶಾಲೆಗೆ ಹೋಗಲು ಇಷ್ಟವಿಲ್ಲದೆ ಶಿವಮೊಗ್ಗದ ಗಾಡಿಕೊಪ್ಪ ಗ್ರಾಮದ ಒಂದು ಮಗು, ಬೆಂಗಳೂರಿನ ಕಾಮಾಕ್ಷಿಪುರದ ಮೂರು ಮಕ್ಕಳು ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ರೈಲ್ವೆ ಪ್ಲಾಟ್ ಫಾರಂನಲ್ಲಿ ಕುಳಿತಿದ್ದ ಮಕ್ಕಳನ್ನು ಗಮನಿಸಿದ ಪೊಲೀಸರು, ರಕ್ಷಣೆ ಮಾಡಿ ಮಕ್ಕಳ ‌ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More
Loading...
Unable to load recommendations.
Follow Us