ದೊಡ್ಡಬಳ್ಳಾಪುರ: ಕೈಗಾರಿಕಾ ಪ್ರದೇಶದ ಕೆಮಿಕಲ್​ನಿಂದ ಐತಿಹಾಸಿಕ ಕೆರೆ ಮಲೀನ. ಕೆರೆಯನ್ನ ಉಳಿಸಲು ಕಾಲುವೆಗೆ ಮಣ್ಣು ಸುರಿದು ರೈತರ ಆಕ್ರೋಶ

ಅದು ಆ ಭಾಗದ ಜನರಿಗೆ ಒಂದು ಕಾಲದಲ್ಲಿ ಜೀವನಾಡಿಯಾಗಿ ಅಮೃತವಾಗಿದ್ದ ಕೆರೆ, ಆದರೆ ಇತ್ತೀಚೆಗೆ ಅದೆ ಕೆರೆ ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ವಿಷವಾಗಿ ಪರಿಣಮಿಸಿದೆ. ಈ ಕಾರಣಕ್ಕೆ ಹಲವು ಹೋರಾಟಗಳನ್ನ ನಡೆಸಿಕೊಂಡು ಬಂದರು, ಎಷ್ಟೇ ಹೋರಾಟ ನಡೆಸಿದರು ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ರೈತರೆ ಹೋರಾಟಕ್ಕಿಳಿದಿದ್ದು ವಿಷಕಾರಿ ನೀರಿಗೆ ಮಣ್ಣು ಸುರಿಯುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ದೊಡ್ಡಬಳ್ಳಾಪುರ: ಕೈಗಾರಿಕಾ ಪ್ರದೇಶದ ಕೆಮಿಕಲ್​ನಿಂದ ಐತಿಹಾಸಿಕ ಕೆರೆ ಮಲೀನ. ಕೆರೆಯನ್ನ ಉಳಿಸಲು ಕಾಲುವೆಗೆ ಮಣ್ಣು ಸುರಿದು ರೈತರ ಆಕ್ರೋಶ
ವಿಷಮುಕ್ತ ನೀರು ನಿಲ್ಲಿಸುವಂತೆ ರೈತರ ಧರಣಿ
Follow us
|

Updated on:Mar 23, 2023 | 8:02 AM

ಬೆ.ಗ್ರಾಮಾಂತರ: ನೋಡುವುದಕ್ಕೆ ಸುತ್ತಾಮುತ್ತ ಹಚ್ಚ ಹಸಿರಿನ ಪರಿಸರದ ಜೊತೆಗೆ ನೀರಿನಿಂದ ತುಂಬಿ ತುಳುಕುತ್ತಿರುವ ಕೆರೆ, ಸುತ್ತಮುತ್ತಲಿನ ಅನೇಕ ಜನ ಜಾನುವಾರು ಸೇರಿದಂತೆ ಹಲವು ಜಲಚರಗಳಿಗೂ ಇದೇ ಕೆರೆ ಜೀವನಾಡಿಯಾಗಬೇಕಿತ್ತು. ಆದರೆ ಇದೀಗ ಅಮೃತದಂತಿದ್ದ ಕೆರೆ ಸಂಪೂರ್ಣ ವಿಷಕಾರಿಯಾಗಿದ್ದು, ಕೆರೆಯನ್ನ ಉಳಿಸಿಕೊಳ್ಳಲು ರೈತರೆ ಟ್ರಾಕ್ಟರ್ ಮೂಲಕ ಮಣ್ಣು ತುಂಬಿಕೊಂಡು ಬಂದು ಸುರಿದು ಮೂಗು ಮುಚ್ಚಿಕೊಂಡು ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೌದು ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೇಟ್ಟಹಳ್ಳಿ ಕೈಗಾರಿಕಾ ಪ್ರದೇಶದ ಬಳಿಯಿರುವ ಚಿಕ್ಕ ತುಮಕೂರು ಗ್ರಾಮದ ಕೆರೆ ಇದು. ಕಳೆದ ಹಲವು ದಶಕಗಳಿಂದ ಅರ್ಕಾವತಿ ನದಿ ನೀರಿನಿಂದ ತುಂಬಿ ತುಳುಕುತ್ತಿದ್ದ ಈ ಕೆರೆ, ನದಿ ಬತ್ತಿದಂತೆ ಕೆರೆಯು ಸಹ ಬತ್ತಿ ಹೋಗಿದ್ದು ಇದೀಗ ಕೈಗಾರಿಕಾ ಪ್ರದೇಶದ ಕೆಮಿಕಲ್ ನೀರು ಬಂದು ಸೇರುತ್ತಿದೆ. ಹೀಗಾಗಿ ಕೈಗಾರಿಕಾ ಪ್ರದೇಶದಿಂದ ಬರುತ್ತಿರುವ ವಿಷಕಾರಿ ನೀರಿನ ವಿರುದ್ದ ಕಳೆದ ಹಲವು ದಿನಗಳಿಂದ ಸ್ಥಳಿಯ ರೈತರು ಕೆರೆ ಉಳಿಸುವಂತೆ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ.

ಆದರೆ ರೈತರು ಪ್ರತಿಭಟನೆ ನಡೆಸಿದಾಗ ಕೆರೆಗೆ ಬರುವ ವಿಷಕಾರಿ ನೀರನ್ನ ನಿಲ್ಲಿಸಿ ಕೆರೆ ಶುದ್ದಗೊಳಿಸುವುದಾಗಿ ಹೇಳುತ್ತಿರುವ ಅಧಿಕಾರಿಗಳು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಊರಿನ ಕೆರೆಯನ್ನ ನಾವೆ ಉಳಿಸಿಕೊಳ್ಳುತ್ತೆವೆ ಎಂದು ರೈತರು ಹೋರಾಟಕ್ಕೆ ಇಳಿದಿದ್ದು, ಕೆರೆಗೆ ಹರಿದು ಬರುತ್ತಿರುವ ವಿಷಕಾರಿ ನೀರಿನ ಕಾಲುವೆಗೆ ಅಡ್ಡಲಾಗಿ ಟ್ರಾಕ್ಟರ್​ನಲ್ಲಿ ಮಣ್ಣು ತಂದು ಸುರಿದು ನೀರನ್ನ ತಡೆಯುವ ಮೂಲಕ ಆಕ್ರೋಶ ಹೊರ ಹಾಕಿದ್ರು. ಆದರೆ ಈ ವೇಳೆ ಮತ್ತೊಂದು ತಿಂಗಳಲ್ಲಿ ಕೆರೆ ಸಮಸ್ಯೆ ಬಗೆ ಹರಿಸುವುದಾಗಿ ರೈತರ ಮನವೊಲಿಸಿದ್ದ ಅಧಿಕಾರಿಗಳು ಈವರೆಗೂ ಕೆರೆ ಸ್ವಚ್ಚಗೊಳಿಸುವ ಕೆಲಸ ಮಾಡಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ:ಇದನ್ನು ತಿಂದ್ರೆ ಅಪಾಯ ಗ್ಯಾರಂಟಿ.. ಬೆಂಗಳೂರು ಕೆರೆ ನೀರು ಬಳಕೆ ಮಾಡಿದ ಬೆಳೆಯಲ್ಲಿ ಭಾರ ಲೋಹದ ಅಂಶ ಪತ್ತೆ

ಕೆರೆಯಲ್ಲಿ ಈಗಾಗಲೆ ಸಾಕಷ್ಟು ಕೆಮಿಕಲ್ ತುಂಬಿಕೊಂಡಿರುವ ಕಾರಣ ಕೆರೆಯಿಂದ ದುರ್ವಾಸನೆ ಬರುತ್ತಿದ್ದು, ಕೆರೆಯಲ್ಲಿ ನೀರು ಕುಡಿಯಲು ಹೋದ ಜಾನುವಾರುಗಳು ಕೆರೆಯ ದಡದಲ್ಲಿಯೇ ನೀರು ಕುಡಿದು ಸಾವನ್ನಪ್ಪಿವೆಯಂತೆ. ಅಲ್ಲದೆ ಕತ್ತಲಾಗುತ್ತಿದ್ದಂತೆ ಗಾಳಿಯಲ್ಲಿ ಕೆರೆಯ ನೀರಿನ ದುರ್ವಾಸನೆ ಸುತ್ತಾಮುತ್ತಲಿನ ಗ್ರಾಮಗಳಿಗೆ ಬರುವ ಕಾರಣ ಜನರಿಗೂ ಉಸಿರಾಟ ಅಲರ್ಜಿ ಸೇರಿದಂತೆ ಹಲವು ರೋಗಗಳು ಬರುತ್ತಿವೆಯಂತೆ. ಇನ್ನು ಕೃಷಿ ಮಾಡುವ ಬೋರ್ವೆಲ್​ಗಳಲ್ಲೂ ಇದೇ ಕೆಮಿಕಲ್ ನೀರು ಬರುತ್ತಿದ್ದು ಹಲವು ಭಾರಿ ಹೋರಾಟ ನಡೆಸಿದ್ರು ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.

ಅಲ್ಲದೆ ಇದೀಗ ರೈತರ ಕಣ್ತಪ್ಪಿಸಿ ಕೆರೆಯ ಕೋಡಿಗೆ ಅಡ್ಡಲಾಗಿದ್ದ ತಡೆಗೋಡೆಯನ್ನ ರಾತ್ರೋ ರಾತ್ರಿ ಒಡೆದು ಹಾಕಿದ್ದು ಕೆಮಿಕಲ್ ಮಿಶ್ರಿತ ನೀರನ್ನ ಹೊರಗಡೆ ಬಿಟ್ಟಿದ್ದಾರೆ. ಹೀಗಾಗಿ ಇಷ್ಟುದಿನ ಕೆರೆಯಲ್ಲಿದ್ದ ನೀರು ಕಾಲುವೆ ಮೂಲಕ ಬೇರೆಡೆಗೆ ಹರಿದು ಹೋಗಿ ಇತರೆ ಕೆರೆಗಳನ್ನು ಮಲೀನ ಮಾಡುತ್ತಿದೆ. ಆದರೆ ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಸ್ಥಳಿಯರು ಗರಂ ಆಗಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ-ಬೆಂಗಳೂರು ಪ್ರಯಾಣಿಕರಿಗೆ ಸಿಹಿ ಸುದ್ದಿ: ಇನ್ಮುಂದೆ ಅರಸೀಕೆರೆಯಲ್ಲೂ ಎಕ್ಸಪ್ರೆಸ್​ ರೈಲನ್ನು ಹತ್ತಬಹುದು

ಒಟ್ಟಾರೆ ಒಂದೆಡೆ ಕೆರೆ ಕುಂಟೆ ಸೇರಿದಂತೆ ಜಲ ಮೂಲಗಳನ್ನ ಉಳಿಸುವಂತೆ ಸರ್ಕಾರವೆ ಜಾಗೃತಿ ಮೂಡಿಸುತ್ತಿದ್ದರು. ಇಲ್ಲಿ ಮಾತ್ರ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆ ಕಲುಷಿತವಾಗಿ ವಿಷಕಾರಿಯಾಗುತ್ತಿರುವುದು ನಿಜಕ್ಕೂ ದುರಂತ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಕೆರೆಗೆ ಬರುತ್ತಿರುವವ ವಿಷಕಾರಿ ನೀರನ್ನ ನಿಲ್ಲಿಸಿ ಕೆರೆ ಶುದ್ದಗೊಳಿಸುವ ಮೂಲಕ ಸ್ಥಳಿಯರ ಸಮಸ್ಯೆಗೆ ಸ್ವಂದಿಸುವ ಕೆಲಸ ಮಾಡಬೇಕಿದೆ.

ವರದಿ: ನವೀನ್ ಟಿವಿ9 ದೇವನಹಳ್ಳಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:02 am, Thu, 23 March 23

ತಾಜಾ ಸುದ್ದಿ