ದೇವನಹಳ್ಳಿ, ಫೆಬ್ರವರಿ 23: ಒಂದೇ ರಾತ್ರಿಯಲ್ಲಿ 8 ಲಾರಿಗಳ 16 ಬ್ಯಾಟರಿ ಸೇರಿದಂತೆ 150 ಲೀ. ಡೀಸೆಲ್ (Diesel) ಕಳವು ಮಾಡಿ ಕಳ್ಳರು ತಮ್ಮ ಕೈಚಳಕ ತೋರಿಸಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ರಾತ್ರಿ ವೇಳೆ ಬ್ಯಾಟರಿ, ಡೀಸೆಲ್ ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸ್ಕಾರ್ಪಿಯೊ ಕಾರಿನಲ್ಲಿ ಬಂದಿದ್ದ ಮೂವರಿಂದ ರೈಲು ನಿಲ್ದಾಣದ ಬಳಿ 12 ಬ್ಯಾಟರಿ, ಹಳೆ ಬಸ್ ನಿಲ್ದಾಣದ 4 ಬ್ಯಾಟರಿ ಮತ್ತು ಪಾಲನಜೋಗನಹಳ್ಳಿ ಬಳಿ ನಿಲ್ಲಿಸಿದ್ದ ಲಾರಿಗಳಿಂದ 150 ಲೀ. ಡೀಸೆಲ್ ಕಳವು ಮಾಡಿದ್ದಾರೆ. ಕಳ್ಳರು ಬ್ಯಾಟರಿ, ಡೀಸಲ್ ಟಾರ್ಗೆಟ್ನಿಂದ ಚಾಲಕರು ಬೆಚ್ಚಿಬಿದಿದ್ದಾರೆ.
ನಾಮಕರಣಕ್ಕೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿ ಆಗಿ ಮೂವರ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಬಳಿ ಅಪಘಾತ ಸಂಭವಿಸಿದೆ. ತುಮಕೂರು ಜಿಲ್ಲೆಯ ಶಿರಾದಿಂದ ಯಲಹಂಕಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ.
ಇದನ್ನೂ ಓದಿ: ದೇವನಹಳ್ಳಿ: ತಹಶೀಲ್ದಾರ್ ಸಹಿ ನಕಲು ಮಾಡಿ ಮುಜರಾಯಿ ಇಲಾಖೆಯ 63 ಲಕ್ಷ ರೂ. ಲಪಟಾಯಿಸಿದ ಆರ್ಐ!
ಮಿನಿ ಬಸ್ನಲ್ಲಿ 25 ಜನ ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸರ್ಕಾರಿ ಜಾಗದಿಂದ ಹಾಡಹಗಲೇ ಮರಗಳ್ಳತನ ಮಾಡಿರುವಂತಹ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಅತ್ತೂರು ನಲ್ಲೂರು ಗ್ರಾಮದಲ್ಲಿ ನಡೆದಿದೆ. ಆರು ಎಕರೆ ಜಾಗ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿಗೆ ಸೇರಿದ ಪಂಚಾಯಿತಿಗೆ ಸೇರಿದೆ.
ಇದನ್ನೂ ಓದಿ: ರೀಲ್ಸ್ ಮಾಡುವಾಗ ರೈಲು ಡಿಕ್ಕಿಯಾಗಿ ಯುಪಿ ಮೂಲದ ಮೂವರು ಕಾರ್ಮಿಕರು ಸಾವು
ಸರ್ಕಾರಿ ಜಾಗದಲ್ಲಿದ್ದ ಸಿಲ್ವರ್ ಓಕ್ ಮರಗಳನ್ನು ಟಿಂಬರ್ಗಾಗಿ ಲಕ್ಷಾಂತರ ರೂ ಮೌಲ್ಯದ 50ಕ್ಕೂ ಅಧಿಕ ಮರಗಳ ಹನನ ಮಾಡಲಾಗಿದೆ. ಅರಣ್ಯ ಇಲಾಖೆ ಮಿಂಚಿನ ಕಾರ್ಯಾಚರಣೆ ಮಾಡಿ ಮರಗಳ ಸಮೇತ ಎರಡು ಲಾರಿ ಮತ್ತು ಎರಡು ಕ್ರೇನ್ ವಶಕ್ಕೆ ಪಡೆಯಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.