AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಗ್ರಾಮದಲ್ಲಿ ಸರಣಿ ಮನೆಗಳ್ಳತನಕ್ಕೆ ಬೆಚ್ಚಿಬಿದ್ದ ಜನತೆ; ಗ್ರಾಮದ ಸುತ್ತಲೂ ಕೊಲಿಡಿದು ನಿಂತ ಯುವಕರು

ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದಲ್ಲಿ ಜನ ಇಷ್ಟು ದಿನ ನೆಮ್ಮದಿಯಿಂದ ಬದುಕುತ್ತಿದ್ದರು. ಆದ್ರೆ, ಇತ್ತೀಚೆಗೆ ಒಂದು ವಾರದಿಂದ ಗ್ರಾಮದಲ್ಲಿ ಜನ ನಿದ್ದೆ ಮಾಡಿದ್ರೆ, ರಾತ್ರಿ ವೇಳೆ ಮನೆಗೆ ಯಾರು ಕನ್ನ ಹಾಕುತ್ತಾರೋ ಎನ್ನುವ ಭಯ ಶುರುವಾಗಿದೆ. ಜೊತೆಗೆ ನಿರಂತರ ಸರಣಿ ಮನೆಗಳ್ಳತನ, ಜಾನುವಾರು, ವಾಹನಗಳ ಕಳ್ಳತನದಿಂದ ಇಡೀ ರಾತ್ರಿ ಕೆಲಸ ಕಾರ್ಯ ಬಿಟ್ಟು ಯುವಕರು ಗ್ರಾಮ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಒಂದೇ ಗ್ರಾಮದಲ್ಲಿ ಸರಣಿ ಮನೆಗಳ್ಳತನಕ್ಕೆ ಬೆಚ್ಚಿಬಿದ್ದ ಜನತೆ; ಗ್ರಾಮದ ಸುತ್ತಲೂ ಕೊಲಿಡಿದು ನಿಂತ ಯುವಕರು
ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದಲ್ಲಿ ಸರಣಿ ಕಳ್ಳತನ
ನವೀನ್ ಕುಮಾರ್ ಟಿ
| Edited By: ಕಿರಣ್ ಹನುಮಂತ್​ ಮಾದಾರ್|

Updated on: Mar 01, 2024 | 8:57 PM

Share

ಬೆಂಗಳೂರು ಗ್ರಾಮಾಂತರ, ಮಾ.01: ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ(Rajaghatta) ಗ್ರಾಮದಲ್ಲಿ ಕಳೆದೊಂದು ವಾರದಿಂದ ಗ್ರಾಮದಲ್ಲಿ ಮನೆಗಳ್ಳತನ, ದೇವಾಲಯ, ಕುರಿ ಕಳ್ಳತನ ಪ್ರಕರಣಗಳಿಂದ ಜನ ಆತಂಕಕ್ಕೊಳಗಾಗಿದ್ದಾರೆ. ಈ ಗ್ರಾಮದ ರಾಜಣ್ಣ ಹಾಗೂ ಅನಿಲ್ ಎಂಬುವವರ ಮನೆಗೆ ಖದೀಮರು ಕನ್ನ ಹಾಕಿದ್ದು, ರಾಜಣ್ಣ ಎಂಬುವವರ ಮನೆಯ ಬಾಗಿಲು ಮುರಿದು ಚಿನ್ನಾಭರಣ ಖದ್ದು ಎಸ್ಕೇಪ್ ಆಗಿದ್ದಾರೆ. ಜೊತೆಗೆ ಕಳೆದ ಮೂರು ದಿನಗಳಿಂದೆ ಅನಿಲ್ ಎಂಬುವವರ ಮನೆಯಲ್ಲೂ ಇದೇ ರೀತಿ ಮಕ್ಕಳ ಸಾವಿರಾರು ಬೆಲೆ ಬಾಳುವ ಚಿನ್ನದ ಎರಡು ಸರ ಹಾಗೂ 3 ಸಾವಿರ ನಗದು ದೋಚಿ ಎಸ್ಕೆಪ್ ಆಗಿದ್ದು, ಸರಣಿ ಮನೆಗಳ್ಳತನದಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಇನ್ನು ಒಂದ್ಕಡೆ ಮನೆಗೆ ಕನ್ನ ಹಾಕಿರುವ ಖದೀಮರು, ದಿನ ಬಿಟ್ಟಂತೆ ಗ್ರಾಮದ ಮುನೇಶ್ವರ ದೇವಾಲಯಕ್ಕೂ ಲಗ್ಗೆ ಇಟ್ಟಿದ್ದು, ಹುಂಡಿಯಲ್ಲಿದ್ದ ಹಣವನ್ನ ದೋಚಿದ್ದಾರೆ. ಇತ್ತ ದೇವಾಲಯದ ಮುಂದೆ ಇದ್ದ ಹೊಂಡಾ ಬೈಕ್ ಕದ್ದೋಗಲು ಯತ್ನಿಸಿರುವ ಖದೀಮರು, ಬೈಕ್​ನಲ್ಲಿ ಪೆಟ್ರೋಲ್ ಖಾಲಿಯಾಗುತ್ತಿದ್ದಂತೆ ಗ್ರಾಮದ ಹೊರವಲಯದಲ್ಲಿ ಬೈಕ್ ಬಿಟ್ಟು ಎಸ್ಕೆಪ್ ಆಗಿದ್ದಾರೆ. ಅಲ್ಲದೆ ಗ್ರಾಮದ ರಸ್ತೆಯ ಪಕ್ಕದಲ್ಲಿದ್ದ ಎರಡು ಮನೆಗಳಲ್ಲಿ ಎರಡು ಕುರಿಗಳನ್ನ ತುಂಬಿಕೊಂಡು ಮತ್ತೊಂದು ಭಾರಿ ಖದೀಮರು ಎಸ್ಕೆಪ್ ಆಗಿದ್ದಾರೆ.

ಇದನ್ನೂ ಓದಿ: ತುಳಸಿಗೇರಿ ಗ್ರಾಮದ 7 ಮನೆಗಳಲ್ಲಿ ಸರಣಿ ಕಳ್ಳತನ; ನಗದು, ಚಿನ್ನಾಭರಣ, ಬೆಳ್ಳಿ ವಸ್ತುಗಳ ದೋಚಿ ಪರಾರಿ

ಒಂದು ವಾರದಿಂದ ಆದಂತಹ ಕಳ್ಳತನದಿಂದ ಇಡೀ ಗ್ರಾಮದಲ್ಲೆ ರಾತ್ರಿಯಾದ್ರೆ ಮಹಿಳೆಯರು ಮಕ್ಕಳು ಹೊರಗಡೆ ಬರಲು ಹೆದುರುತ್ತಿದ್ದಾರೆ. ಜೊತೆಗೆ ನಿರಂತರ ಕಳ್ಳತನಕ್ಕೆ ಗ್ರಾಮದಲ್ಲಿ ಕೆಲಸಕ್ಕೆ ಹೋಗುವ ಯುವಕರು, ಮೂರು ಪಾಳೆಯಲ್ಲಿ ತಂಡವನ್ನ ರಚಿಸಿಕೊಂಡು ಕೋಲಿಡಿದುಕೊಂಡು ಗ್ರಾಮವನ್ನ ಕಾಯುವ ಪರಿಸ್ಥಿತಿ ಎದುರಾಗಿದೆ. ಈ ಗ್ರಾಮದಲ್ಲಿ ಎಲ್ಲಿಯೂ ಸಿಸಿಟಿವಿಯಿಲ್ಲ, ಜೊತೆಗೆ ಬೀದಿ ದೀಪಗಳು ಸರಿಯಾಗಿ ಕೆಲಸ ಮಾಡದೇ ಕಳ್ಳತನಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಜನ ತಮ್ಮ ಅಳಲನ್ನ ತೋಡಿಕೊಳ್ಳುತ್ತಿದ್ದಾರೆ.

ಒಟ್ಟಾರೇ ರಾಜಘಟ್ಟ ಗ್ರಾಮದಲ್ಲಿ ಸರಣಿ ಕಳ್ಳತನದಿಂದ ನೆಮ್ಮದಿಯೇ ಇಲ್ಲದಂತಾಗಿದೆ. ಇನ್ನೂ ಪೊಲೀಸರು ಕೂಡ ರಾತ್ರಿವೇಳೆ ಗಸ್ತು ಹೆಚ್ಚು ಮಾಡುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆದಷ್ಟು ಬೇಗ ಗ್ರಾಮದ ನಿದ್ದೆಗೇಡಿಸಿರೋ ಖದೀಮರಿಗೆ ಎಡೆಮುರಿ ಕಟ್ಟುವ ಕೆಲಸ ಪೊಲೀಸರು ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Naveen Kumar
Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More