ಆನೇಕಲ್: ಬನ್ನೇರುಘಟ್ಟ (Bannerghatta) ಸಮೀಪದ ಎಎಮ್ ಸಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಹಾಸ್ಟೆಲಿನಲ್ಲಿ ಕತ್ತು ಕೊಯ್ದುಕೊಂಡು ವಿದ್ಯಾರ್ಥಿಯೊಬ್ಬ (Engineering Student) ಆತ್ಮಹತ್ಯೆ (suicide) ಮಾಡಿಕೊಂಡಿದ್ದಾನೆ. ಹಾಸ್ಟೆಲ್ ಶೌಚಾಲಯದಲ್ಲಿ ಸಿಕ್ಕ ಶವ 19 ವರ್ಷದ ನಿತಿನ್ ಎಂಬಾತನದು ಎಂದು ಗುರುತಿಸಲಾಗಿದೆ. ನಿತಿನ್ ಕೇರಳ ಮೂಲದ ವಿದ್ಯಾರ್ಥಿ. ಇದೇ ತಿಂಗಳು ಡಿಸೆಂಬರ್ 1 ಕ್ಕೆ ಕಾಲೇಜು ಸೇರಿದ್ದ. ಸಿಇಎಸ್ ಪ್ರಥಮ ವರ್ಷಕ್ಕೆ ಅಡ್ಮಿಶನ್ ಆಗಿದ್ದ. ಚಾಕುವಿನಿಂದ ತಾನೇ ಚುಚ್ಚಿಕೊಂಡು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಭೇಟಿ ಕೊಟ್ಟ ಬನ್ನೇರುಘಟ್ಟ ಪೊಲೀಸರು (Bannerghatta Police) ಪರಿಶೀಲನೆ ನಡೆಸಿದ್ದಾರೆ.
ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ, ಕಾರಣವೇನು?
ಎಎಂಸಿ ಕಾಲೇಜಿನಲ್ಲಿ ಸ್ಟೂಡೆಂಟ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಬನ್ನೇರುಘಟ್ಟ ಪೊಲೀಸರು ತಂದೆ ತಾಯಿ ದೂರ ಇದ್ದರು ಅಂತ ನಿತಿನ್ ಬೇಸರಿಸಿಕೊಂಡಿದ್ದ. ಡಿಸೆಂಬರ್ 1 ಕ್ಕೆ ಕಾಲೇಜು ಸೇರಿದ್ದ ನಿತಿನ್ ಆದಾದ ಬಳಿಕ ಪದೇ ಪದೇ ತಂದೆ ತಾಯಿಗೆ ಕಾಲ್ ಮಾಡುತ್ತಿದ್ದನಂತೆ. ತಂದೆ ತಾಯಿ ದುಬೈನಲ್ಲಿ ವಾಸವಿದ್ದರು. ನಿತಿನ್ ಕುಟುಂಬದವರು ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಪದಿನಿ ಜರಿಯಾ ವಿಲೇಜ್ ಮೂಲದವರು. ಕೋಯಲಂಡಿ ಗ್ರಾಮದ ನಿವಾಸಿಗಳಾಗಿದ್ದರು.
Also Read:
ನಿತಿನ್ ಬೆಂಗಳೂರು ಆನೇಕಲ್ನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸಿಗೆ ಸಹೋದರನ ಮೂಲಕ ಅಡ್ಮಿಷನ್ ಆಗಿದ್ದ ವಿದ್ಯಾರ್ಥಿ. ತಂದೆ ತಾಯಿಯ ಪ್ರೀತಿಯ ಕೊರತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ತಂದೆ ತಾಯಿ ಬರಬೇಕು ಎಂದು ಕಾಲ್ ಮಾಡಿ, ಜಗಳವಾಡಿದ್ದನಂತೆ. ಇದೇ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಎಂದು ಹಾಸ್ಟೆಲ್ ನಲ್ಲಿ ರೂಮ್ ಮೇಟ್ ಆಗಿದ್ದ ಇನ್ನೊಬ್ಬ ವಿದ್ಯಾರ್ಥಿ ನಿಧಿನ್ ಮಾಹಿತಿ ಹಂಚಿಕೊಂಡಿದ್ದಾನೆ. ನಿತಿನ್ ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:39 pm, Thu, 15 December 22