ನಿರಂತರ ಮಳೆಯಿಂದಾಗಿ ಸೋರುತ್ತಿರುವ ಸರ್ಕಾರಿ ಆಸ್ಪತ್ರೆ; ರೋಗಿಗಳ ಪರದಾಟ
ರೋಗಿಗಳ ಬೆಡ್, ಡಯಾಲಿಸಿಸ್ ಸೆಂಟರ್ ಸೇರಿದಂತೆ ಆಸ್ಪತ್ರೆಯ ಬಹುತೇಕ ಎಲ್ಲಾ ಕಡೆ ಸೋರುತ್ತಿದೆ. ಈ ನಿಟ್ಟಿನಲ್ಲಿ ನೀರು ಸೋರುತ್ತಿರುವ ಕಡೆ ಆಸ್ವತ್ರೆಯ ಸಿಬ್ಬಂದಿಗಳು ಬಕೆಟ್ಗಳನ್ನು ಇಟ್ಟಿದ್ದಾರೆ.
ಬೆಂಗಳೂರು: ನಿರಂತರ ಮಳೆಯಿಂದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸರ್ಕಾರಿ ಆಸ್ಪತ್ರೆ (Government hospital) ಸಂಪೂರ್ಣವಾಗಿ ಸೋರುತ್ತಿದೆ. ಇದರಿಂದಾಗಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರೋಗಿಗಳ ಬೆಡ್, ಡಯಾಲಿಸಿಸ್ ಸೆಂಟರ್ ಸೇರಿದಂತೆ ಆಸ್ಪತ್ರೆಯ ಬಹುತೇಕ ಎಲ್ಲಾ ಕಡೆ ಸೋರುತ್ತಿದೆ. ಈ ನಿಟ್ಟಿನಲ್ಲಿ ನೀರು ಸೋರುತ್ತಿರುವ ಕಡೆ ಆಸ್ವತ್ರೆಯ ಸಿಬ್ಬಂದಿಗಳು ಬಕೆಟ್ಗಳನ್ನು ಇಟ್ಟಿದ್ದಾರೆ. ಆದರೆ ರೋಗಿಗಳು ( patients) ಮಾತ್ರ ಯಾವಾಗ ಏನಾಗುತ್ತದೋ ಎನೋ ಎಂಬ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಕೊಠಡಿಗಳಲ್ಲೆಲ್ಲ ನೀರು ನಿಂತು ಕೆರೆಯಂತಾಗಿದೆ. ಮೇಲ್ಛಾವಣಿ ಸೋರುತ್ತಿರುವ ಹಿನ್ನೆಲೆ ಕಟ್ಟಡ ಗ್ರೌಂಡಿಗ್ ಭೀತಿ ಎದುರಾಗಿದೆ. ಕಳೆದ ತಿಂಗಳು ತರಾತುರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ನೂತನ ಆಸ್ಪತ್ರೆ ಉದ್ಘಾಟನೆ ಮಾಡಿದ್ದರು. ಗುತ್ತಿಗೆದಾರರಿಗೆ ಬಿಲ್ ಮಾಡಿಕೊಡಲು ಕಾಮಗಾರಿ ಮುಕ್ತಾಯವಾಗಿದೆ ಅಷ್ಟೇ. ಆದರೆ ನೂತನ ಆಸ್ಪತ್ರೆಯಲ್ಲಿ ಕಾಮಗಾರಿ ಬಾಕಿ ಇರುವ ಕಾರಣ ಹಳೆ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ.
ಇನ್ಫೋಸಿಸ್ ಫೌಂಡೇಷನ್ನಿಂದ ಜಯದೇವ ಆಸ್ಪತ್ರೆ ಆವರಣದಲ್ಲಿ ಹೊಸ ಕಟ್ಟಡ ನಿರ್ಮಾಣ ಇನ್ಫೋಸಿಸ್ ಫೌಂಡೇಷನ್ನಿಂದ ನೂತನ ಆಸ್ಪತ್ರೆ ನಿರ್ಮಾಣವಾಗಿದೆ. ಜಯದೇವ ಆಸ್ಪತ್ರೆ ಆವರಣದಲ್ಲಿ 103 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣವಾಗಿದ್ದು, ಈ ಬಗ್ಗೆ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಮಾಹಿತಿ ನೀಡಿದ್ದಾರೆ. ನೂತನ ಆಸ್ಪತ್ರೆ 350 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. ನವೆಂಬರ್ 17ರಂದು ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆಯಾಗಲಿದೆ.
ಜಯದೇವ ಆಸ್ಪತ್ರೆ ಒಟ್ಟು 1,050 ಹಾಸಿಗೆ ಸಾಮರ್ಥ್ಯವನ್ನು ಹೊಂದಿದೆ. ನಗರದ ಪ್ರತಿಷ್ಠಿತ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ 350 ಹಾಸಿಗೆಗಳ ಸಾಮರ್ಥ್ಯದ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ದಕ್ಷಿಣ ಏಷ್ಯಾದ ಅತಿ ದೊಡ್ಡ ಹೃದ್ರೋಗ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಸ್ಪತ್ರೆ ಒಮ್ಮೆ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿಯವರು ಭೇಟಿ ನೀಡಿ, ರೋಗಿಗಳ ಊರು ಮತ್ತು ಆರ್ಥಿಕ ಸ್ಥಿತಿ ಗತಿ ತಿಳಿದುಕೊಂಡು ಹೋಗಿದ್ದರು ಅಂತ ಟಿವಿ9ಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಸೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ತಿಳಿಸಿದರು.
ಭೇಟಿ ನೀಡಿದ್ದಾಗ ಕಡು ಬಡವರಿಗೂ ಇಲ್ಲಿ ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ಸಿಗುತ್ತಿರುವುದನ್ನು ಹಾಗೂ ಇಲ್ಲಿ ಹಾಸಿಗೆಗಳ ಕೊರತೆ ಇರುವುದನ್ನು ಗಮನಿಸಿದರು. ಇದಾದ ಮರು ದಿನವೇ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಕರೆ ಮಾಡಿ ಆಸ್ಪತ್ರೆಗೆ ಹೊಸ ಕಟ್ಟಡ ಕಟ್ಟಿಸಿಕೊಡುವ ವಿಚಾರ ತಿಳಿಸಿದರು. ನಾವು 200 ಹಾಸಿಗೆ ಆಸ್ಪತ್ರೆಗೆ ಮನವಿ ಮಾಡಿದ್ದೆವು. ಆದರೆ ಅವರು 350 ಹಾಸಿಗೆ ಆಸ್ಪತ್ರೆ ಕಟ್ಟುತ್ತೇವೆ ಎಂದು ಹೇಳಿ ಆಸ್ಪತ್ರೆ ನಿರ್ಮಿಸಿದ್ದಾರೆ. ಜಯದೇವ ಆಸ್ಪತ್ರೆಯ ಇನ್ಫೋಸಿಸ್ ಸಂಕೀರ್ಣವು ದೇವರೇ ಕಳುಹಿಸಿದ ಕೊಡುಗೆ. ಇದನ್ನು ಸಿಮೆಂಟ್ ಉಕ್ಕಿನಿಂದ ನಿರ್ಮಿಸಿಲ್ಲ, ಬದಲಾಗಿ ಮಾನವೀಯತೆ ಮತ್ತು ಹೃದಯವಂತಿಕೆಯಿಂದ ನಿರ್ಮಿಸಲಾಗಿದೆ ಎಂದು ಮಂಜುನಾಥ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಕೊಡುಗೈ ದಾನಿ ಸುಧಾ ಮೂರ್ತಿ ಹೃದಯ ವೈಶಾಲ್ಯ: ಜಯದೇವ ಆಸ್ಪತ್ರೆ ನೂತನ ಘಟಕ ನಿರ್ಮಾಣದ ಸಂಗತಿಯೇ ರೋಚಕ!
ಇನ್ಫೋಸಿಸ್ ಫೌಂಡೇಷನ್ನಿಂದ ಜಯದೇವ ಆಸ್ಪತ್ರೆ ಆವರಣದಲ್ಲಿ ಹೊಸ ಕಟ್ಟಡ ನಿರ್ಮಾಣ; ನವೆಂಬರ್ 17ಕ್ಕೆ ಉದ್ಘಾಟನೆ
Published On - 2:46 pm, Mon, 15 November 21