ಅಸ್ಪೃಶ್ಯ ಪದ ಬಳಕೆ ವಿವಾದ: ಯಾವ ಕಾರಣಕ್ಕೆ ನಾನು ಕ್ಷಮೆ ಕೇಳಬೇಕು, ಸಿದ್ದರಾಮಯ್ಯ ಕೂಡ ಬಳಸಿದ್ದರು -ಹೆಚ್ಡಿ ಕುಮಾರಸ್ವಾಮಿ
ಯಾವ ಕಾರಣಕ್ಕೆ ನಾನು ಕ್ಷಮೆ ಕೇಳಬೇಕು? ಮೊನ್ನೆ ಸಿದ್ದರಾಮಯ್ಯನವರು ಶಿವಕುಮಾರ್ ಕುಳಿತುಕೊಳ್ಳೋ ವಿಚಾರಕ್ಕೆ ಅಸ್ಪೃಶ್ಯ ಅಂದಿದ್ದಾರೆ. ಅವರು ಕ್ಷಮೆ ಕೇಳಿದ್ದಾರ? ಎಂದು ಹೆಚ್ಡಿಕೆ ಪ್ರಶ್ನಿಸಿದ್ದಾರೆ.
ನೆಲಮಂಗಲ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ(HD Kumaraswamy) ನೀಡಿದ ಅಸ್ಪೃಶ್ಯ(Untouchability) ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಒತ್ತಾಯ ಕೇಳಿಬರುತ್ತಿರುವ ವಿಚಾರಕ್ಕೆ ಸಂಬಂಧಿಸಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಯಾವ ಕಾರಣಕ್ಕೆ ನಾನು ಕ್ಷಮೆ ಕೇಳಬೇಕೆಂದು ಪ್ರಶ್ನಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಲಕ್ಕೂರು ಗ್ರಾಮದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಯಾವ ಕಾರಣಕ್ಕೆ ನಾನು ಕ್ಷಮೆ ಕೇಳಬೇಕು? ಮೊನ್ನೆ ಸಿದ್ದರಾಮಯ್ಯನವರು ಶಿವಕುಮಾರ್ ಕುಳಿತುಕೊಳ್ಳೋ ವಿಚಾರಕ್ಕೆ ಅಸ್ಪೃಶ್ಯ ಅಂದಿದ್ದಾರೆ. ಅವರು ಕ್ಷಮೆ ಕೇಳಿದ್ದಾರ? ಯಾರೋ ನಾಲ್ವರು ರಾಜಕೀಯವಾಗಿ ನನ್ನ ಬಗ್ಗೆ ಮಾತಾಡಬಹುದು. ಯಾರು ಅಸ್ಪೃಶ್ಯರು, ಯಾವ ಕಾರಣಕ್ಕಾಗಿ ಹೋರಾಟ ಮಾಡುತ್ತಾರೆ ಅಂಬೇಡ್ಕರ್ ತಮಗಾದ ಅವಮಾನ ಮರೆಸಲು ಕಾನೂನು ನೀಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ, ಯಾರು ಅಸ್ಪೃಶ್ಯರು. ನಾನು ಹೇಳಿದ್ದು ಬಿಜೆಪಿ ಪಕ್ಷದವರು ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಓಡಿಸಬೇಕು ಅಂತ ಚರ್ಚೆ ಮಡ್ತಾ ಇದಾರೆ. ಇವ್ರು ಏತಕ್ಕೆ ನಾವು ಅಸ್ಪಶ್ಯರು ಅಂತ ಹೇಳಿಕೊಳ್ಳಬೇಕು. ಹಾಗಿದ್ರೆ ಹೋರಾಟ ಮಾಡ್ತಾ ಇರೋರು ಅಸ್ಪಶ್ಯರು ಅಂತಾ ಭಾವನೆ ಇದ್ಯ. ಅಂಬೇಡ್ಕರ್ ಇವರಿಗೆ ಶಕ್ತಿ ಕೊಟ್ಟಿದ್ದು ಹೀಗೆ ನಾವು ಅಸ್ಪಶ್ಯರು ಅನ್ನೋಕ. ನಾನು ಯಾರಿಗೂ ಅಗೌರವ ತೋರಿಸೋ ಕೆಲಸ ಮಾಡಿಲ್ಲ. ದಲಿತ ಸಮುದಾಯದ ಹೆಣ್ಣು ಮಗಳನ್ನ ಮೂರು ದಿನ ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದೇನೆ. ಅವರಿಗೆ ಆರೋಗ್ಯ ಸರಿ ಇಲ್ಲದಿದ್ದಾಗ ನನ್ನ ಮನೆಯಲ್ಲಿ ಇರಿಸಿಕೊಂಡಿದ್ದೇನೆ. ಇದು ನನ್ನ ಬದುಕು, ಇವರ ಹೋರಾಟಗಳಿಗೆಲ್ಲ ನಾನು ಹೆದರುವುದಿಲ್ಲ ಎಂದರು.
ಇದನ್ನೂ ಓದಿ: ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಹಿಳೆಗೆ ಡಿಸಿಎಂ ಸ್ಥಾನ ಕೊಡುವುದಾಗಿ ಘೋಷಿಸಿದ ಹೆಚ್ಡಿ ಕುಮಾರಸ್ವಾಮಿ
ಈ ವೇಳೆ ಹೆಚ್ಡಿಕೆ ಅವರು ಪಂಚರತ್ನ ಯಾತ್ರೆ ಯಶಸ್ಸಿನ ಬಗ್ಗೆ ಮಾತನಾಡಿದ್ರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಕೊನೆಯಾಗಿದೆ. ಇಂದು ಹಲವಾರು ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಪ್ರತಿಯೊಂದು ಕಡೆಯು ಜನರ ವಿಶ್ವಾಸ ಕಂಡಿದ್ದೇನೆ. ಸಭೆಗಳಲ್ಲಿ ಜನರು ನಮ್ಮ ಮೇಲೆ ವಿಶ್ವಾಸ ಮೂಡಿಸಿದ್ದಾರೆ. ಜನರ ಮನಸಿನಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಮೇಲೆ ವಿಶ್ವಾಸ ಕಡಿಮೆ ಆಗಿದೆ. 13 ದಿನಗಳ ಪ್ರವಾಸದಲ್ಲಿ ಜನರ ನಾಡಿ ಮೀಡಿತ ನನಗೆ ಗೊತ್ತಾಗಿದೆ ಎಂದು ತಿಳಿಸಿದರು.
ನನಗೆ ಮಾಡಲು ಬೇರೆ ಕೆಲಸವಿದೆ, ಅವರು ರೌಡಿಶೀಟರ್ಸ್ ಏನೋ ಅನ್ನೋದು ನನಗ್ಯಾಕೆ
ಬಿಜೆಪಿ ನಾಯಕರ ಜೊತೆ ಹಲವು ರೌಡಿಶೀಟರ್ಗಳ ಸಂಪರ್ಕ ವಿಚಾರಕ್ಕೆ ಸಂಬಂಧಿಸಿ ಹೆಚ್ಡಿ ಕುಮಾರಸ್ವಾಮಿ ಮಾತನಾಡಿದ್ದು, ಅದನ್ನೆಲ್ಲ ಕಟ್ಟಿಕೊಂಡು ನನಗೇನು ಆಗಬೇಕು. ನನಗೆ ಮಾಡಲು ಬೇರೆ ಕೆಲಸವಿದೆ. ಅವರು ರೌಡಿಶೀಟರ್ಸ್ ಏನೋ ಅನ್ನೋದು ನನಗ್ಯಾಕೆ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ನಮ್ಮ ಪಕ್ಷದ ಸಿ.ಎಂ. ಇಬ್ರಾಹಿಂ ಏಕೆ ಮುಖ್ಯಮಂತ್ರಿ ಆಗಬಾರದು? ಅವರೇನು ಅಸ್ಪೃಶ್ಯರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದರು. ಈ ಸಂಬಂಧ ಹೆಚ್ಡಿಕೆ ವಿರುದ್ಧ ಛಲವಾದಿ ಮಹಾಸಭಾ ಮಂಗಳವಾರ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:58 am, Thu, 1 December 22