Kalasipalya bus terminal: ಕಲಾಸಿಪಾಳ್ಯ ಬಸ್ ಟರ್ಮಿನಲ್‌ ಸಿದ್ಧವಾಗಿದೆ ಆದರೆ ಇನ್ನೂ ಒಪನ್ ಆಗಿಲ್ಲ! ಪ್ರಯಾಣಿಕರಿಗೆ ಪ್ರಯಾಸ ತಪ್ಪಿಲ್ಲ

ಕಲಾಸಿಪಾಳ್ಯ ಬಸ್ ಟರ್ಮಿನಲ್ Open ಮಾಡೋಕ್ಕೆ ಬಿಎಂಟಿಸಿ ಸಂಸ್ಥೆ ಗಮನ ಸೆಳೆದಿದ್ದರೂ ಇನ್ನೂ ಟರ್ಮಿನಲ್ ತೆರೆದಿಲ್ಲ ಎಂದು ಇಲ್ಲಿ ರೆಗ್ಯುಲರ್ ಆಗಿ ಸಂಚರಿಸುವ ಪ್ರಯಾಣಿಕರು ಮತ್ತು ಬಸ್ ಸಿಬ್ಬಂದಿ ಸಹ ಹೇಳಿದ್ದಾರೆ. ಇನ್ನು ಅಕ್ಕ-ಪಕ್ಕದ ರಸ್ತೆಗಳಲ್ಲಿ ಬಸ್‌ಗಳು ನಿಲುಗಡೆ ಮಾಡುವುದರಿಂದ ಕೆ.ಆರ್. ಮಾರುಕಟ್ಟೆ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Kalasipalya bus terminal: ಕಲಾಸಿಪಾಳ್ಯ ಬಸ್ ಟರ್ಮಿನಲ್‌ ಸಿದ್ಧವಾಗಿದೆ ಆದರೆ ಇನ್ನೂ ಒಪನ್ ಆಗಿಲ್ಲ! ಪ್ರಯಾಣಿಕರಿಗೆ ಪ್ರಯಾಸ ತಪ್ಪಿಲ್ಲ
ಕಲಾಸಿಪಾಳ್ಯ ಟರ್ಮಿನಲ್‌ ಸಿದ್ಧವಾಗಿದೆ ಆದರೆ ಇನ್ನೂ ಒಪನ್ ಆಗಿಲ್ಲ; ಬಸ್ ಪ್ರಯಾಣಿಕರಿಗೆ ಪ್ರಯಾಸ ತಪ್ಪಿಲ್ಲ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 30, 2022 | 11:49 AM

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ -ಬಿಎಂಟಿಸಿ (Bangalore Metropolitan Transport Corporation -BMTC) ನಿರ್ಮಿಸಿರುವ ಬಹುಕಾಲದಿಂದ ಬಾಕಿ ಉಳಿದಿದ್ದ ಕಲಾಸಿಪಾಳ್ಯ ಬಸ್ ಟರ್ಮಿನಲ್ (Kalasipalya bus terminal) ನಿರ್ಮಾಣ ಯೋಜನೆಯು 2018ರ ಡಿಸೆಂಬರ್‌ನಲ್ಲಿಯೇ ಪೂರ್ಣಗೊಳ್ಳಬೇಕಿತ್ತು. ತಡವಾಗಿ ಕೊನೆಗೂ 4 ವರ್ಷದ ಬಳಿಕ ಸಿದ್ಧವಾಗಿದೆ. ಆದರೆ ಕಳೆದ ಮೂರು ತಿಂಗಳಿಂದ ಅದಕ್ಕೆ ಬೀಗ ಹಾಕಲಾಗಿದೆ. ಇದರಿಂದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಅಂತಾರಾಜ್ಯ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ಪಕ್ಕದ ರಸ್ತೆಗಳಲ್ಲಿ ನಿಲುಗಡೆ ಮಾಡುತ್ತಿದ್ದು, ಬಸ್ ಪ್ರಯಾಣಿಕರು (Bus Passengers) ಮತ್ತಷ್ಟು ಪರದಾಡುವಂತಾಗಿದೆ.

ಕಲಾಸಿಪಾಳ್ಯ ಬಸ್ ಟರ್ಮಿನಲ್ Open ಮಾಡೋಕ್ಕೆ ಬಿಎಂಟಿಸಿ ಸಂಸ್ಥೆ ಗಮನ ಸೆಳೆದಿದ್ದರೂ ಇನ್ನೂ ಟರ್ಮಿನಲ್ ತೆರೆದಿಲ್ಲ ಎಂದು ಇಲ್ಲಿ ರೆಗ್ಯುಲರ್ ಆಗಿ ಸಂಚರಿಸುವ ಪ್ರಯಾಣಿಕರು ಮತ್ತು ಬಸ್ ಸಿಬ್ಬಂದಿ ಸಹ ಹೇಳಿದ್ದಾರೆ. ಇನ್ನು ಅಕ್ಕ-ಪಕ್ಕದ ರಸ್ತೆಗಳಲ್ಲಿ ಬಸ್‌ಗಳು ನಿಲುಗಡೆ ಮಾಡುವುದರಿಂದ ಕೆ.ಆರ್. ಮಾರುಕಟ್ಟೆ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಳಗೆ ಕಲಾಸಿಪಾಳ್ಯ ಬಸ್ ಟರ್ಮಿನಲ್‌ ನವನವೀನವಾಗಿದೆ; ಆದರೆ ಹೊರಗೆ ಸದ್ಯಕ್ಕೆ ಪ್ರಯಾಣಕರಿಗೆ ಕಂಟಕ:

ಪ್ರತಿ ದಿನ ನೂರಾರು ಬಸ್‌ಗಳು ಕಲಾಸಿಪಾಳ್ಯದಿಂದ ಹತ್ತಿರದ ನಗರಗಳು ಮತ್ತು ನೆರೆಯ ರಾಜ್ಯಗಳಿಗೆ ಸಂಚಾರಿಸುತ್ತವೆ. ಸ್ವಚ್ಛ ಶೌಚಾಲಯ, ಬಸ್​ಗೆ ಕಾಯುವ ನಿಲ್ದಾಣದಂತಹ ಮೂಲ ಸೌಕರ್ಯಗಳಿಲ್ಲ. ವಾಹನ ನಿಲುಗಡೆ ವ್ಯವಸ್ಥೆ, ಬಸ್ಸುಗಳನ್ನು ಹತ್ತಲು ಬಸ್ ಬೇ ಗಳು ಇಲ್ಲದೆ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ನಗರದೊಳಗಿನ ಮತ್ತು ಅಂತರ-ನಗರದ ಅನೇಕ ಬಸ್ ಬಳಕೆದಾರರು ಬಿಸಿಲು ಮತ್ತು ಮಳೆ ಭೀತಿಯ ಸಮ್ಮುಖದಲ್ಲಿ ಕಾಯಬೇಕಾದ ಅನಿವಾರ್ಯತೆ ಇದೆ.

ಬಸ್ಸುಗಳ ದಟ್ಟಣೆ, ದುರ್ವಾಸನೆ, ಕಳಪೆ ಬೆಳಕಿನ ಪ್ರದೇಶ ಇದಾಗಿದೆ:

ಕಲಾಸಿಪಾಳ್ಯಕ್ಕೆ ಒಂದು ಅಚ್ಚುಕಟ್ಟಾದ ಟರ್ಮಿನಲ್ ನಿರ್ಮಿಸಿಕೊಡಬೇಕೆಂಬ ಪ್ರಸ್ತಾವನೆ ಮತ್ತು ನಿರ್ಮಾಣಕ್ಕೆ ಹಲವು ದಶಕಗಳೇ ಬೇಕಾಯಿತು. ಈಗ ಕಾಮಗಾರಿ ಮುಗಿದರೂ ಇನ್ನೂ ಪ್ರಯಾಣಿಕರಿಗೆ ಮುಕ್ತವಾಗಿಲ್ಲ. ಈ ಭಾಗದಲ್ಲಿ ಚೈನ್ ಸ್ನ್ಯಾಚಿಂಗ್, ಜೇಬುಗಳ್ಳತನ, ಮಾದಕ ದ್ರವ್ಯ ದಂಧೆ, ಅದರಲ್ಲೂ ರಾತ್ರಿ ವೇಳೆ ಹಲವಾರ ಇನ್ನಿತರೆ ಅಪರಾಧ, ಅನೈತಿಕ ಚಟುವಟುಕೆ ಪ್ರಕರಣಗಳು ನಡೆಯುತ್ತಿವೆ. ಟರ್ಮಿನಲ್ ವ್ಯವಸ್ಥಿತವಾಗಿ ತೆರೆದರೆ ಅಗತ್ಯ ಶೌಚಾಲಯಗಳು ಮತ್ತು ಸಿಸಿಟಿವಿ ಸೌಲಭ್ಯಗಳೊಂದಿಗೆ ಮಹಿಳಾ ಪ್ರಯಾಣಿಕರು ಸುರಕ್ಷಿತವಾಗಿರುತ್ತಾರೆ ಎಂಬುದು ಪ್ರಯಾಣಿಕ ರಾಜ್ ಕುಮಾರ್ ಅವರ ಅನಿಸಿಕೆ.

ಈ ಮಧ್ಯೆ, ಬಿಎಂಟಿಸಿ ಅಧಿಕಾರಿಗಳು ಟರ್ಮಿನಲ್ ತೆರೆಯಲು ಡಿಸೆಂಬರ್ 2022 ರ ಗಡುವಿಗೆ ಬದ್ಧವಾಗಿರುತ್ತಾರೆ ಮತ್ತು ಮುಂದಿನ ತಿಂಗಳು ಟರ್ಮಿನಲ್ ಅನ್ನು ತೆರೆಯುತ್ತಾರೆ ಎಂದು ಸ್ಥಳಿಯ ಬಸ್​​ ಅಧಿಕಾರಿಗಳು ಹೇಳುತ್ತಾರೆ. ಒಟ್ಟಿಗೇ ಇದು 18 ಬಿಎಂಟಿಸಿ ಬಸ್‌ಗಳಿಗೆ ಅವಕಾಶ ಕಲ್ಪಿಸುತ್ತದೆ. ಜೊತೆಗೆ, ಒಂದೇ ಬಾರಿಗೆ 10 ಕೆಎಸ್‌ಆರ್‌ಟಿಸಿ ಬಸ್‌ಗಳು ಮತ್ತು ಎಂಟು ಅಂತರರಾಜ್ಯ ಸರ್ಕಾರಿ ಬಸ್‌ಗಳು, ಖಾಸಗಿ ಬಸ್‌ಗಳಿಗೆ ಇಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.

ಕಲಾಸಿಪಾಳ್ಯ ಬಸ್ ಟರ್ಮಿನಲ್‌ ನಲ್ಲಿ ವಾಣಿಜ್ಯ ಸಂಸ್ಥೆಗಳು, ಫುಡ್ ಕೋರ್ಟ್ ಮತ್ತು ಟೆರೇಸ್ ಪಾರ್ಕಿಂಗ್, ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯಗಳು, ಸಿಸಿಟಿವಿ ಕ್ಯಾಮೆರಾಗಳು, ಆಸನ ಸೌಲಭ್ಯಗಳು, ಆಟೋ ಸ್ಟ್ಯಾಂಡ್, ಕಿಯೋಸ್ಕ್ಗಳು, ಅಂಗಡಿಗಳನ್ನು ಹೊಂದಿರುತ್ತದೆ. ಲಿಫ್ಟ್, ಬಿಎಂಟಿಸಿ ಕಚೇರಿಗಳು, ನೌಕರರ ವಿಶ್ರಾಂತಿ ಕೊಠಡಿಗಳು ಮತ್ತು ಇತರ ಸೌಲಭ್ಯಗಳು.

ಕಲಾಸಿಪಾಳ್ಯದಲ್ಲಿ ಬಸ್ ಟರ್ಮಿನಲ್ ನಿರ್ಮಿಸುವ ಪ್ರಸ್ತಾವನೆಯನ್ನು 2002 ರಲ್ಲಿ ಮತ್ತು ನಂತರ 2010 ರಲ್ಲಿ ಮತ್ತೊಮ್ಮೆ ಪ್ರಸ್ತಾಪಿಸಲಾಯಿತು. ಕಲಾಸಿಪಾಳ್ಯದಲ್ಲಿರುವ ನಾಲ್ಕು ಎಕರೆಯಲ್ಲಿ BMTC ಕೊನೆಗೂ 63 ಕೋಟಿ ರೂ ವೆಚ್ಚದ ಬಸ್ ಟರ್ಮಿನಲ್ ಕಾಮಗಾರಿಯನ್ನು 2016 ರಲ್ಲಿ ಪ್ರಾರಂಭಿಸಿತು. ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ವಾಗ್ದಾನ ನೀಡಿತ್ತು. ಆದಾಗ್ಯೂ, ಗಡುವನ್ನು ಡಿಸೆಂಬರ್ 2019 ಕ್ಕೆ ಮತ್ತು ಮತ್ತೆ ಡಿಸೆಂಬರ್ 2021 ಕ್ಕೆ ಮುಂದೂಡಲಾಯಿತು. ವಿನ್ಯಾಸ ಬದಲಾವಣೆಗಳು, ಕೋವಿಡ್ -19 ಮತ್ತು ನಗದು ಕೊರತೆ ನಿರ್ಮಾಣ ಕೆಲಸದ ಮೇಲೆ ಪರಿಣಾಮ ಬೀರಿದೆ ಎಂದು BMTC ಅಧಿಕಾರಿಗಳು ಸಿದ್ಧ ಉತ್ತರ ನೀಡುತ್ತಾರೆ ಎಂದು timesofindia.indiatimes.com ವರದಿ ಮಾಡಿದೆ.

ಗುತ್ತಿಗೆದಾರರಿಗೆ ಬಿಎಂಟಿಸಿ ಹಣ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ ಎಂದೂ ಮೂಲಗಳು ತಿಳಿಸಿವೆ. ಬಿಎಂಟಿಸಿಯಿಂದ ನಾವು ಇನ್ನೂ ಸುಮಾರು 15 ಕೋಟಿ ರೂ. ಪಡೆಯಬೇಕಾಗಿದೆ, ಇದರಲ್ಲಿ ಬಾಕಿ ಇರುವ ಬಿಲ್, ಸೇವಾ ಶುಲ್ಕ ಮತ್ತು ವೆಚ್ಚ ಹೆಚ್ಚಳ ಸೇರಿವೆ. ಟರ್ಮಿನಲ್ ಸಿದ್ಧವಾಗಿದೆ ಮತ್ತು ಕೆಲವು ಸಣ್ಣ ಕೆಲಸಗಳು ಮಾತ್ರವೇ ಬಾಕಿ ಉಳಿದಿವೆ. ಒಂದು ವೇಳೆ ಬಾಕಿಯಿರುವ ಹಣವನ್ನು ಪಾವತಿಸಿಬಿಟ್ಟರೆ ಟರ್ಮಿನಲ್ ಅನ್ನು ಇನ್ನೊಂದು ವಾರದಲ್ಲಿ ತೆರೆಯಬಹುದು. ಆದರೆ ಬಿಎಂಟಿಸಿ ಅಧಿಕಾರಿಗಳು ತಮ್ಮ ಬಳಿ ಹಣವಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಕಾಮಗಾರಿ ಕೆಲಸ ನಿರ್ವಹಿಸಿದ ಸಂಸ್ಥೆಯ ಉದ್ಯೋಗಿಯೊಬ್ಬರು ಹೇಳುತ್ತಾರೆ.

ಇದಕ್ಕೆ ಉತ್ತರವಾಗಿ ಹಣ ಪಾವತಿ ಸಮಸ್ಯೆಗಳನ್ನು ಪರಿಹರಿಸಿ ಡಿಸೆಂಬರ್‌ನಲ್ಲಿ ಟರ್ಮಿನಲ್ ತೆರೆಯುವುದಾಗಿ ಬಿಎಂಟಿಸಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ನಾವು ರಾಜ್ಯ ಸರ್ದಕಾರದಿಂದ ಅಂತಿಮ ಅನುಮೋದನೆಗಾಗಿ ಕಾಯುತ್ತಿದ್ದೇವೆ. ಕಡತವನ್ನು ಶೀಘ್ರವೇ ಸಿಎಂ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಇಡಲಾಗುವುದು. ನಾವು ಮುಖ್ಯಮಂತ್ರಿಯವರ ದಿನಾಂಕವನ್ನು ಸಹ ಪಡೆದಿದ್ದೇವೆ. ಮುಂದಿನ ತಿಂಗಳು ಟರ್ಮಿನಲ್ ಉದ್ಘಾಟನೆಯಾಗಲಿದೆ ಎಂದು ಖಚಿತ ದನಿಯಲ್ಲಿ ಅಧಿಕಾರಿಯೊಬ್ಬರು ಹೇಳಿದರು.

ಮೆಟ್ರೋ ನಿಲ್ದಾಣಕ್ಕೆ ಕನೆಕ್ಟಿಂಗ್​ ಸಬ್‌ವೇ ಇಲ್ಲ!

ನಮ್ಮ ಮೆಟ್ರೋ ಗ್ರೀನ್ ಲೈನ್‌ ರೈಲು ಸಮೀಪದಲ್ಲಿಯೇ ಹಾದುಹೋಗುತ್ತದೆ. ಬಸ್ ಟರ್ಮಿನಲ್ ಮತ್ತು ಕೆಆರ್ ಮಾರ್ಕೆಟ್ ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸಲು ಸುರಂಗಮಾರ್ಗ ನಿರ್ಮಿಸುವ ಪ್ರಸ್ತಾವನೆ ಮುಂದಿಡಲಾಗಿತ್ತು. ಆದರೆ ಅದಿನ್ನೂ ಟೇಕ್ ಆಫ್ ಆಗಿಲ್ಲ. ಗಮನಾರ್ಹಯವೆಂದರೆ ಟರ್ಮಿನಲ್‌ನಿಂದ ಸುರಂಗ ಮಾರ್ಗ ನಿರ್ಮಿಸಲು ಅವಕಾಶವಿದೆ ಎಂದು ಬಿಎಂಟಿಸಿ ಹೇಳಿದೆ.

ಆದರೆ ಇದರ ವೆಚ್ಚವನ್ನು ಬಿಎಂಆರ್‌ಸಿಎಲ್‌ (BMRCL) ಭರಿಸಬೇಕಾಗುತ್ತದೆ ಎಂಬುದು BMTC ಅಧಿಕಾರಿಗಳ ಅಂಬೋಣ. ನಾವು ಮೆಟ್ರೋ ನಿಲ್ದಾಣಕ್ಕೆ ಸುರಂಗಮಾರ್ಗವನ್ನು ನಿರ್ಮಿಸಲು ಅವಕಾಶವನ್ನು ನೀಡಿದ್ದೇವೆ ಮತ್ತು ಮುಂದೆ ಅದನ್ನು ಕಾರ್ಯಗೊಳಿಸುವುದು BMRCL ಗೆ ಬಿಟ್ಟದ್ದು. ಆದರೆ ಸದ್ಯಕ್ಕೆ ಅಂತಹ ಯಾವುದೇ ಯೋಜನೆ ಹೊಂದಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಕಡ್ಡಿಮುರಿದ ಹಾಗೆ ಹೇಳುತ್ತಾರೆ.

ಇದನ್ನೂ ಓದಿ:

ದೂರು ಬಂದರೂ ರೌಡಿಶೀಟರ್ ವಿರುದ್ಧ ಕ್ರಮ ಜರುಗಿಸದ ಕಲಾಸಿಪಾಳ್ಯ ಇನ್ಸ್ಪೆಕ್ಟರ್ ಸಸ್ಪೆಂಡ್

ಇದನ್ನೂ ಓದಿ:

Samantha: ಭಾರತದಲ್ಲಿ ವಾಸಿ ಆಗಲಿಲ್ಲ ಸಮಂತಾ ಕಾಯಿಲೆ; ಸೌತ್​ ಕೊರಿಯಾದಲ್ಲಿ ನಟಿಗೆ ಹೆಚ್ಚಿನ ಚಿಕಿತ್ಸೆ?

Published On - 11:44 am, Wed, 30 November 22

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!