ದೂರು ಬಂದರೂ ರೌಡಿಶೀಟರ್ ವಿರುದ್ಧ ಕ್ರಮ ಜರುಗಿಸದ ಕಲಾಸಿಪಾಳ್ಯ ಇನ್ಸ್ಪೆಕ್ಟರ್ ಸಸ್ಪೆಂಡ್

ರೌಡಿಶೀಟರ್ನಿಂದ ತೊಂದರೆಯಾಗುತ್ತಿರುವ ಬಗ್ಗೆ ಪೊಲೀಸ್ ಠಾಣೆಗೆ ವ್ಯಕ್ತಿ ದೂರು ನೀಡಿದ್ದರೂ ಕ್ರಮಕೈಗೊಂಡಿರಲಿಲ್ಲ ಹೀಗಾಗಿ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಚೇತನ್ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ದೂರು ಬಂದರೂ ರೌಡಿಶೀಟರ್ ವಿರುದ್ಧ ಕ್ರಮ ಜರುಗಿಸದ ಕಲಾಸಿಪಾಳ್ಯ ಇನ್ಸ್ಪೆಕ್ಟರ್ ಸಸ್ಪೆಂಡ್
ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ
TV9kannada Web Team

| Edited By: Ayesha Banu

Jul 07, 2022 | 5:41 PM

ಬೆಂಗಳೂರು: ನಗರದ ಕಲಾಸಿಪಾಳ್ಯ ಠಾಣೆ ಪಿಐ ಚೇತನ್(Kalasipalya inspector Chethan) ಅಮಾನತುಗೊಳಿಸಿ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ(DCP Lakshman Nimbargi) ಆದೇಶ ಹೊರಡಿಸಿದ್ದಾರೆ. ರೌಡಿಶೀಟರ್ನಿಂದ ತೊಂದರೆಯಾಗುತ್ತಿರುವ ಬಗ್ಗೆ ಪೊಲೀಸ್ ಠಾಣೆಗೆ ವ್ಯಕ್ತಿ ದೂರು ನೀಡಿದ್ದರೂ ಕ್ರಮಕೈಗೊಂಡಿರಲಿಲ್ಲ ಹೀಗಾಗಿ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಚೇತನ್ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ವ್ಯಕ್ತಿಯೊಬ್ಬರು ರೌಡಿಶೀಟರ್ ನಿಂದ ತೊಂದರೆ ಆಗಿರುವ ಬಗ್ಗೆ ಠಾಣೆಗೆ ದೂರು ನೀಡಿದ್ದರು. ಆದರೆ ಇನ್ಸ್ಪೆಕ್ಟರ್ ಚೇತನ್, ರೌಡಿಶೀಟರ್ ವಿರುದ್ಧ ಯಾವುದೇ ಕ್ರಮ ಜರುಗಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಆರೋಪದಡಿ ಇನ್ಸ್ಪೆಕ್ಟರ್ ಚೇತನ್ ಅಮಾನತುಗೊಳಿಸಿ ಇತ್ತೀಚೆಗೆ ವರ್ಗಾವಣೆಯಾದ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಬರ್ತ್​ಡೇ ದಿನ ಪತ್ನಿ ಪ್ರಗತಿ ಹಾಗೂ ಆಪ್ತರ ಜತೆ ಕೇಕ್ ಕತ್ತರಿಸಿ ಸಂಭ್ರಮಿಸಿದ ರಿಷಬ್ ಶೆಟ್ಟಿ

ನೆಲಮಂಗಲ ಟೌನ್​ ಇನ್ಸ್​ಪೆಕ್ಟರ್ A.V.ಕುಮಾರ್​​ ಮೇಲೆ ಹಲ್ಲೆ ಇಸ್ಪಿಟ್​ ಅಡ್ಡೆ ಮೇಲೆ ದಾಳಿ ಮಾಡಿದ್ದಾಗ ನೆಲಮಂಗಲ ಟೌನ್​ ಇನ್ಸ್​ಪೆಕ್ಟರ್ A.V.ಕುಮಾರ್​​ ಮೇಲೆ ಜೂಜುಕೋರರು ಹಲ್ಲೆ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಕೋಟೆ ಮಾರಮ್ಮ ದೇಗುಲದ ಬಳಿ ನಡೆದಿದೆ.ನೆಲಮಂಗಲ ಪೊಲೀಸರು ಇಸ್ಪಿಟ್ ಅಡ್ಡೆ ಮೇಲೆ ದಾಳಿ ನಡೆಸಿದ್ದರು. ರೇಡ್​ ವೇಳೆ ಇನ್ಸ್​ಪೆಕ್ಟರ್ A.V.ಕುಮಾರ್​​ ಮೇಲೆ ಜೆಡಿಎಸ್ ಮುಖಂಡ ಹನುಮಂತರಾಜು, ಬೇವಿನಗುಡ್ಡೆಗೌಡ, ಜಗದೀಶ್, ಉಮೇಶ್​​, ರಾಜೇಂದ್ರ ಕುಮಾರ್, ಶೇಖರ್, ರಂಗಣ್ಣ, ಗಂಗರಾಜು, ಮುನಿರಾಜು, ಗೀರಿಶ್‌ ಎಂಬುವವರು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಎಲ್ಲಾ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಇನ್ಸ್​​​ಪೆಕ್ಟರ್​​ಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಎಸ್​​ಪಿ ಕೋನವಂಶಿ ಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆಲಮಂಗಲ ಟೌನ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada