ಬಾಗಲಗುಂಟೆ: ವರದಕ್ಷಿಣೆ ಹಣಕ್ಕಾಗಿ ಪತ್ನಿಯ ಖಾಸಗಿ ಅಂಗಕ್ಕೆ ಆಸಿಡ್ ಎರಚಿದ ಪತಿ
ವರದಕ್ಷಿಣೆ ಹಣಕ್ಕಾಗಿ ನನ್ನ ಪತಿ ನನ್ನ ಮೇಲೆ ಬಾತ್ ರೂಂ ಕ್ಲಿನ್ ಮಾಡಲು ಇಟ್ಟಿದ್ದ ಆಸಿಡನ್ನು ತೆಗೆದುಕೊಂಡು ಬೆನ್ನು, ಸೊಂಟದ ಭಾಗ ಹಾಗೂ ಖಾಸಗಿ ಅಂಗಕ್ಕೆ ಎಸೆದು ವಿಕೃತಿ ಮೆರೆದಿದ್ದಾನೆ ಎಂದು ಆರೋಪಿಸಿ ಮಹಿಳೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವರದಕ್ಷಿಣೆ ಕಿರುಕುಳ ಜೊತೆಗೆ ಹಲ್ಲೆ ಮಾಡಿರುವ ಬಗ್ಗೆ ಪತಿ ಹಾಗೂ ಪತಿಗೆ ಸಹಕಾರಿಯಾಗಿದ್ದ ಅತ್ತೆ ವಿರುದ್ಧ ದೂರು ನೀಡಿದ್ದಾರೆ.
ನೆಲಮಂಗಲ, ನ.23: ವರದಕ್ಷಿಣೆ (Dowry) ಹಣ ತಂದಿಲ್ಲವೆಂದು ಪತ್ನಿಯ ಖಾಸಗಿ ಅಂಗಕ್ಕೆ ಆಸಿಡ್ (Acid Attack) ಎರಚಿ ವಿಕೃತಿ ಮೆರೆದ ಹೀನಾಯ ಘಟನೆ ಬಾಗಲಗುಂಟೆ ಪೊಲೀಸ್ ಠಾಣೆ (Bagalgunte Police station) ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಸಂಬಂಧ ಪತಿ ಮತ್ತು ಅತ್ತೆ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದುವೆಯಾಗಿ ವರ್ಷ ಕಳೆಯುವ ಮುಂಚೆಯೇ ವರದಕ್ಷಿಣೆಗಾಗಿ ಪತಿ ಕಿರುಕುಳ ನೀಡಿದ್ದಾನೆ ಎಂದು ನೊಂದ ಮಹಿಳೆ ಕಣ್ಣೀರಿಟಿದ್ದಾರೆ.
ಮಂಡ್ಯದ ಸಂತೋಷ್ ಜೊತೆ 23 ವರ್ಷದ ಕಾವ್ಯಗೆ ಮೇ 19ರಂದು ಮದುವೆ ನಡೆದಿತ್ತು. 20ಗ್ರಾಂ ಚಿನ್ನಾಭರಣ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಮದುವೆ ನಂತರ ದಂಪತಿ ಬೆಂಗಳೂರಿನ ಕುರುಬರಹಳ್ಳಿಯಲ್ಲಿ 3 ತಿಂಗಳು ವಾಸವಾಗಿದ್ದರು. ಅಲ್ಲಿ ಸರಿಯಾಗಿ ಬಾಡಿಗೆ ಕಟ್ಟದ ಹಿನ್ನೆಲೆ ಮನೆ ಮಾಲೀಕ ಮನೆ ಖಾಲಿ ಮಾಡಿಸಿದ್ದ. ಬಳಿಕ ಮೈಸೂರಿನ ಯರಗನಹಳ್ಳಿಯಲ್ಲಿ ಬಾಡಿಗೆ ಮನೆಯನ್ನು ಮಾಡಿ ಅಲ್ಲಿಯೇ ವಾಸವಾಗಿದ್ದರು. ಪತಿ ಸಂತೋಷ ಕೆಲಸಕ್ಕೆ ಹೋಗದೆ ಪ್ರತಿ ದಿನ ಮದ್ಯಪಾನ ಮಾಡಿ ಅವಾಚ್ಯ ಶಬ್ದಗಳಿಂದ ಬೈಯೋದು, ಪ್ರಾಣ ಬೆದರಿಕೆ ಹಾಕಿ ಹಲ್ಲೆ ಮಾಡೋದಿ, ತಲೆ ಕೂದಲನ್ನು ಹಿಡಿದು ಎಳೆದಾಡಿ ದೊಡೆಯುವುದನ್ನೆಲ್ಲ ಮಾಡುತ್ತಿದ್ದ. ಹೀಗೆ ಒಮ್ಮೆ ಗಂಡ-ಹೆಂಡತಿ ನಡುವೆ ಜಗಳವಾಗಿದ್ದು ಮನೆಯ ಬಾತ್ ರೂಂ ಕ್ಲಿನ್ ಮಾಡಲು ಇಟ್ಟಿದ್ದ ಆಸಿಡನ್ನು ತೆಗೆದುಕೊಂಡು ಕಾವ್ಯ ಬೆನ್ನು, ಸೊಂಟದ ಭಾಗ ಹಾಗೂ ಖಾಸಗಿ ಅಂಗಕ್ಕೆ ಎಸೆದು ವಿಕೃತಿ ಮೆರೆದಿದ್ದಾನೆ. ಘಟನೆ ಸಂಬಂಧ ಪತಿ ಹಾಗೂ ಪತಿಗೆ ಸಹಕಾರಿಯಾಗಿದ್ದ ಅತ್ತೆ ಪುಟ್ಟಮ್ಮ ವಿರುದ್ಧ ಕಾವ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಜೊತೆಗೆ ಹಲ್ಲೆ ಮಾಡಿರುವ ಬಗ್ಗೆ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಚಾಕೊಲೇಟ್ ಕೊಡುವುದಾಗಿ ಹೇಳಿ 10 ವರ್ಷದ ಬಾಲಕಿ ಮೇಲೆ 76 ವರ್ಷದ ವೃದ್ಧನಿಂದ ಲೈಂಗಿಕ ದೌರ್ಜನ್ಯ, ಆರೋಪಿ ಅರೆಸ್ಟ್
ಡಿವೈಡರ್ಗೆ ಲಾರಿ ಡಿಕ್ಕಿ-ಅದೃಷ್ಟವಶಾತ್ ಚಾಲಕ, ನಿರ್ವಾಹಕ ಬಚಾವ್
ನಿದ್ರೆ ಮಂಪರಿನಲ್ಲಿ ಲಾರಿ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದು ಅದೃಷ್ಟವಶಾತ್ ಚಾಲಕ, ನಿರ್ವಾಹಕ ಬಚಾವ್ ಆದ ಘಟನೆ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ4 ರಲ್ಲಿ ನಡೆದಿದೆ. ಸಂಚಾರಿ ಪೊಲೀಸರು ಕ್ರೈನ್ ಬಳಸಿ ಲಾರಿ ತೆರವು ಕಾರ್ಯಾಚರಣೆ ಮಾಡಿದ್ದಾರೆ. ಸೋಲೂರಿನಿಂದ ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಬರುವಾಗ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಬೇರೊಂದು ಲಾರಿಗೆ ಸಿಲಿಂಡರ್ ಲೋಡ್ ಮಾಡಿಕೊಂಡು ಲಾರಿ ತೆರಳಿದ್ದು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ