ನೆಲಮಂಗಲದಲ್ಲಿ ನೌಕರಿ ಆಮಿಷ: APMC ಉದ್ಯೋಗದ ಕಾಪಿ ತೋರಿಸಿ ಯಾಮಾರಿಸಿದ ಒಂದೇ ಕುಟುಂಬದ ನಾಲ್ವರು! ಇಬ್ಬರು ಅರೆಸ್ಟ್

ಹುಚ್ಚವೀರಯ್ಯನಪಾಳ್ಯದ ಲಕ್ಷ್ಮಣ, ಶ್ರೀನಿವಾಸಪುರದ ಕಾವ್ಯ, ವೆಂಕಟೇಶ್, ಶರತ್, ಹನುಮಂತರಾಜು ಅವರುಗಳು ವಂಚನೆಗೊಳಗಾದವರು. 20 ಲಕ್ಷ ರೂಪಾಯಿಗೂ ಹೆಚ್ಚು ಹಣ ಪಡೆದು ವಂಚಿಸಲಾಗಿದೆ. ಅರೋಪಿ ಮಂಜ @ 420 ಮಂಜನ ವಿರುದ್ಧ ಹೆಬ್ಬಗೋಡಿ ಠಾಣೆ ವ್ಯಾಪ್ತಿಯಲ್ಲಿ ಈಗಾಗಲೆ 65 ಲಕ್ಷ ರೂಪಾಯಿ ವಂಚನೆ ಕೇಸ್ ಇದೆ. ಮಂಜ @ 420 ಮಂಜ ಮತ್ತು ಪತ್ನಿ ಲಲಿತ @ ಗೀತಾರನ್ನು ಅರೆಸ್ಟ್ ಮಾಡಲಾಗಿದೆ. 

ನೆಲಮಂಗಲದಲ್ಲಿ ನೌಕರಿ ಆಮಿಷ: APMC ಉದ್ಯೋಗದ ಕಾಪಿ ತೋರಿಸಿ ಯಾಮಾರಿಸಿದ ಒಂದೇ ಕುಟುಂಬದ ನಾಲ್ವರು! ಇಬ್ಬರು ಅರೆಸ್ಟ್
APMC ಉದ್ಯೋಗದ ಕಾಪಿ ತೋರಿಸಿ ಯಾಮಾರಿಸಿದ ಒಂದೇ ಕುಟುಂಬದ ನಾಲ್ವರು!
Follow us
ಬಿ ಮೂರ್ತಿ, ನೆಲಮಂಗಲ
| Updated By: ಸಾಧು ಶ್ರೀನಾಥ್​

Updated on:Sep 05, 2023 | 1:43 PM

ನೆಲಮಂಗಲ, ಸೆಪ್ಟೆಂಬರ್​ 5: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನ ಎರಡು ಗ್ರಾಮಗಳಲ್ಲಿ ಪರಿಚಯಸ್ಥರಿಗೇ ಸರ್ಕಾರಿ ನೌಕರಿ ಕೊಡಿಸೋದಾಗಿ (Job lure) ಲಕ್ಷಾಂತರ ಹಣ ಪಡೆದು ಹಲವರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನೆಲಮಂಗಲ ತಾಲೂಕು ಹುಚ್ಚವೀರಯ್ಯನಪಾಳ್ಯ ಮತ್ತು ಶ್ರೀನಿವಾಸಪುರ ಗ್ರಾಮದ ಜನರಿಗೆ ಮಕ್ಮಲ್​ ಟೋಪಿ ಹಾಕಲಾಗಿದೆ. ಫ್ರಾಡ್ ಫ್ಯಾಮಿಲಿಯೊಂದರ ನಾಲ್ಕು ಮಂದಿ ವಿರುದ್ಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ (fraud) ದಾಖಲು ಮಾಡಿದ್ದಾರೆ. ಮಂಜ @ 420 ಮಂಜ, ಆತನ ಪತ್ನಿಯರಾದ ಮಂಜುಳ ಮತ್ತು ಲಲಿತಾ @ ಗೀತಾ ಹಾಗೂ ಬಾವಮೈದುನ ಬಸವರಾಜ್ ವಿರುದ್ಧ ಮೊಕದ್ದಮೆ ದಾಖಲು ಮಾಡಲಾಗಿದೆ.

ಹುಚ್ಚವೀರಯ್ಯನಪಾಳ್ಯದ ಲಕ್ಷ್ಮಣ, ಶ್ರೀನಿವಾಸಪುರದ ಕಾವ್ಯ, ವೆಂಕಟೇಶ್, ಶರತ್, ಹನುಮಂತರಾಜು ಅವರುಗಳು ವಂಚನೆಗೊಳಗಾದವರು. 20 ಲಕ್ಷ ರೂಪಾಯಿಗೂ ಹೆಚ್ಚು ಹಣ ಪಡೆದು ವಂಚಿಸಲಾಗಿದೆ. ಅರೋಪಿ ಮಂಜ @ 420 ಮಂಜನ ವಿರುದ್ಧ ಹೆಬ್ಬಗೋಡಿ ಠಾಣೆ ವ್ಯಾಪ್ತಿಯಲ್ಲಿ ಈಗಾಗಲೆ 65 ಲಕ್ಷ ರೂಪಾಯಿ ವಂಚನೆ ಕೇಸ್ ಇದೆ. ಮಂಜ @ 420 ಮಂಜ ಮತ್ತು ಪತ್ನಿ ಲಲಿತ @ ಗೀತಾರನ್ನು ಅರೆಸ್ಟ್ ಮಾಡಲಾಗಿದೆ.

ಇನ್ನೋರ್ವ ಪತ್ನಿ ಮಂಜುಳಾ ಮತ್ತು ಬಾಮೈದ ಬಸವರಾಜ್ ಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಫೇಕ್ APMC ನೌಕರರ ಆರ್ಡರ್ ಕಾಪಿ ತೋರಿಸಿ, ಅರೋಪಿಗಳು ವಂಚನೆ ಮಾಡಿದ್ದಾರೆ. ವಂಚಕ ಕುಟುಂಬ ಸದಸ್ಯರ ವಿರುದ್ಧ IPC 1860 ರೀತ್ಯಾ 406, 468, 420 ಜೊತೆಗೆ 34 ಪ್ರಕರಣ ಸಹ ದಾಖಲಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನಿಧಿ ಆಸೆ ತೋರಿಸಿ ಮಗಳು-ಅಳಿಯನಿಂದ ತಂದೆ-ತಾಯಿಗೆ ವಂಚನೆ: ನಡುರಾತ್ರಿ ಪೂಜೆ ಮಾಡಿಸಿ, ಎಣ್ಣೆ ಶಾಸ್ತ್ರವನ್ನೂ ಮಾಡಿದ ಆರೋಪಿಗಳು!

ಆನೇಕಲ್: ನಿಧಿ ಆಸೆ ತೋರಿಸಿ ಮಕ್ಕಳಿಂದಲೇ ತಂದೆ ಹಾಗೂ ಸಹೋದರನಿಗೆ ಭಾರಿ ವಂಚನೆ ಎಸಗಲಾಗಿದೆ. ನಿಧಿ ಆಸೆ ತೋರಿಸಿ ಮಗಳು ಅಳಿಯನಿಂದಲೇ ತಂದೆಗೆ 50 ಲಕ್ಷ ಪಂಗನಾಮ ಹಾಕಿರುವ ಪ್ರಕರಣ ವರದಿಯಾಗಿದೆ. ದಂಪತಿ ಮೋಸದ ಬಲೆಗೆ ಸಿಲುಕಿ 50 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ನಿಧಿಗಾಗಿ ಮನೆಯಲ್ಲಿ ಎರಡು ಮೇಕೆಗಳನ್ನು ಬಲಿ ನಿಡಲಾಗಿದೆ. ಮನೆಯ ಯಜಮಾನ ಮಕ್ಕಳ ಕುತಂತ್ರದಿಂದ 50 ಲಕ್ಷ ಹಣ ಕಳೆದುಕೊಂಡಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬಂಡಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡಾಪುರ ತಿಮ್ಮರಾಯಪ್ಪ ಎಂಬುವವರ ಮನೆಯಲ್ಲಿ ನಿಧಿ ಆಸೆ ತೋರಿಸಿ ವಂಚನೆ ಎಸಗಲಾಗಿದೆ. ಮಗಳು-ಅಳಿಯ ನಿಧಿ ಆಸೆ ತೋರಿಸಿ ಜಮೀನನ್ನು ಲಪಟಾಯಿಸಿದ್ದಾರೆ. ಮಗಳು ಮಂಜುಳ ಹಾಗೂ ಅಳಿಯ ಮಂಜುನಾಥ್ ರಿಂದ ತಂದೆ ಹಾಗೂ ಸಹೋರನಿಗೆ ವಂಚನೆ ನಡೆದಿದೆ. ಮನೆಯಲ್ಲಿ ನಿಧಿ ಇದೆ ಅಂತ ತಮಿಳುನಾಡು ಮೂಲದ ನವೀನ್ ಎಂಬ ಕಳ್ಳ ಪೂಜಾರಿ ನಂಬಿಸಿದ್ದ.

ಇನ್ನು, ಬಂಡಾಪುರದ ಒಂಟಿ ಮನೆಯಲ್ಲಿ ರಾತ್ರಿ ಎಲ್ಲಾ ಹೋಮಹವನ ಪೂಜೆ ಮಾಡಿಸಿ, ಬಳಿಕ ಆರೋಪಿಗಳು ಎಣ್ಣೆ ಪಾರ್ಟಿ ಶಾಸ್ತ್ರವನ್ನೂ ಮಾಡಿದ್ದಾರೆ! ಹೋಮ ಹವನ‌ ಮಾಡಿದ ಬಳಿಕ ಆರೋಪಿಗಳು ಆರು ಅಡಿ ಗುಂಡಿ ತೋಡಿದ್ದರು. ಬಳಿಕ ಏನೂ ಸಿಗದಿದ್ದಾಗ ತೋಡಿದ್ದ ಗುಂಡಿ ಮುಚ್ಚಿದ್ದರು! ತಿಮ್ಮರಾಯಪ್ಪಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನಿದ್ದಾನೆ. ಮಗಳು ಮಂಜುಳ ಹಾಗೂ ಅಳಿಯ ಮಂಜುನಾಥ್, ಪೂಜಾರಿ ನವೀನ್ ವಂಚಿಸಿದ ಕಿರಾತಕರು.

ಮನೆಯಲ್ಲಿ ಇರಲು ಭಯಪಟ್ಟು ಮನೆ ಬಿಟ್ಟು ಹೋದ ವೃದ್ದ ತಿಮ್ಮರಾಯಪ್ಪ ದಂಪತಿ ಹಾಗೂ ಪುತ್ರ ಪ್ರದೀಪ್ ಕುಮಾರ್. ಹಣ ಕಳೆದುಕೊಂಡ ದಂಪತಿ ಈಗ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಜಮೀನು ಲಪಟಾಯಿಸಲು ಮಗಳು ಅಳಿಯ ನಿಧಿ ಆಸೆ ಹುಟ್ಟಿಸಿದ್ದರು ಎಂದು ತಿಳಿದುಬಂದಿದೆ.

ಅಳಿಯ ಮತ್ತು ಇಬ್ಬರ ಹೆಣ್ಣುಮಕ್ಕಳು ಜಮೀನು ಮಾರಾಟ ಮಾಡಲು ಮಾಡಿದ್ದ ಪ್ಲಾನ್ ಇದಾಗಿದೆ. ಜಮೀನು ಮಾರಾಟ ಮಾಡಿ ಹಣ ಹೊಡೆಯಲು ಮಗಳು ಅಳಿಯ ನಿಧಿ ನಾಟಕವಾಡಿದ್ದರು. ನಿಧಿ ಆಸೆಗೆ ಈಗ ಇಡೀ ಕುಟುಂಬ ಬೀದಿಗೆ ಬಿದ್ದಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:07 pm, Tue, 5 September 23