ಆನೇಕಲ್, ಸೆ.24: ತಮಿಳುನಾಡಿಗೆ ಕಾವೇರಿ ನೀರು (Cauvery Water Dispute) ಹರಿಸಿದನ್ನ ಖಂಡಿಸಿ ಆನೇಕಲ್ ಪಟ್ಟಣದಲ್ಲಿ ಕರವೇ (Karave) ಶಿವರಾಮೇಗೌಡ ಬಣದಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಇದೇ ಮೊದಲ ಬಾರಿ ತಮಿಳುನಾಡು ಗಡಿ ಸೋಲೂರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ (Protest) ನಡೆಸಲು ನಿರ್ಧರಿಸಲಾಗಿದೆ. ಆನೇಕಲ್ ಪಟ್ಟಣದಿಂದ ಸೋಲೂರು ಗಡಿವರೆಗೂ ಕರವೇ ರ್ಯಾಲಿ ಮಾಡಿ ಹೆದ್ದಾರಿ ಬಂದ್ ಮಾಡಲು ಮುಂದಾಗಿದ್ದು ರಸ್ತೆಯಲ್ಲಿ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಷ್ಟು ದಿನ ಅತ್ತಿಬೆಲೆ ಗಡಿ ಬಂದ್ ಮಾಡಲಾಗುತ್ತಿತ್ತು. ಈ ಬಾರಿ ಸೋಲೂರು ಗಡಿ ಬಂದ್ ಮಾಡಲು ಕರವೇ ಸಿದ್ಧತೆ ಮಾಡಿಕೊಂಡಿತ್ತು. 6 ಕಿ.ಮೀ ಪ್ರತಿಭಟನಾ ರ್ಯಾಲಿ ನಡೆಸಿ ತಮಿಳುನಾಡಿಗೆ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸುವಂತೆ ಕರವೇ ಆಗ್ರಹಿಸಿದೆ. ಇನ್ನು ಕರವೇ ಪ್ರತಿಭಟನೆ ಹಿನ್ನೆಲೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ 2 ಕೆಎಸ್ಆರ್ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ.
ರಾಜ್ಯದ ಗಡಿ ಸೋಲೂರು ಬಳಿ ಪ್ರತಿಭಟನೆ ಹಿನ್ನೆಲೆ ತಮಿಳುನಾಡು ಪೊಲೀಸರಿಂದಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಗಡಿ ಗೇಟ್ ಬಳಿ ತಮಿಳುನಾಡು ಪೊಲೀಸರ ನಿಯೋಜನೆ ಮಾಡಲಾಗಿದೆ. ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಎರಡು ಗಡಿಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಪೊಲೀಸರು ಅಲರ್ಟ್ ಆಗಿದ್ದಾರೆ. ಬ್ಯಾರಿಕೇಡ್ ಹಾಕಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಮತ್ತೊಂದೆಡೆ ಗಡಿ ರಸ್ತೆಯಲ್ಲಿ ಕರವೇ ಕಾರ್ಯಕರ್ತರು ಉರುಳು ಸೇವೆಗೆ ಮಾಡಿ ಆಕ್ರೋಶ ಹೊರ ಹಾಕಿದ್ದು 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಟ್ರಾಕ್ಟರ್ ಚಾಲಕನ ಮೇಲೆ ಪಿಎಸ್ಐ ಹಲ್ಲೆ ಕೇಸ್: ಠಾಣೆ ಎದುರು ಪ್ರತಿಭಟನೆ, ಅಮಾನತಿಗೆ ಪಟ್ಟು
ಕಾವೇರಿ ನೀರು ಸಂಬಂಧ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ವಿರೋಧಿಸಿ ರಾಜ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಮಂಡ್ಯ, ಬೆಂಗಳೂರು ಸೇರಿ ಹಲವೆಡೆ ಕಾವೇರಿ ನೀರಿನ ವಿಷಯವಾಗಿ ರೈತರು, ಸಂಘಟನೆಗಳು ರಸ್ತೆಗಳಿದಿವೆ. ನಿನ್ನೆ ಮಂಡ್ಯ, ಮದ್ದೂರು ಬಂದ್ ಮಾಡಲಾಗಿತ್ತು. ಶ್ರೀರಂಗಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಪಂಜು ಹಿಡಿದು ಬಂದ ಅನ್ನದಾತರು, ಸಾಲಾಗಿ ನಿಂತು ಹೋರಾಟ ಮಾಡಿದ್ರು. ಶಿವಮೊಗ್ಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಪಂಜಿನ ಮೆರವಣಿಗೆ ಮಾಡಿದ್ರು. ತಮಿಳುನಾಡಿಗೆ ನೀರು ಹರಿಸುತ್ತಿರೋದನ್ನ ಖಂಡಿಸಿ ಗೋಪಿ ವೃತ್ತದಿಂದ ಮಹಾವೀರ ವೃತ್ತದವರೆಗೆ ಹೆಜ್ಜೆ ಹಾಕಿದ್ರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ