ಕರವೇ ಅಧ್ಯಕ್ಷ ನಾರಾಯಣ ಗೌಡಗೆ ಇನ್ನೂ 4 ದಿನ ಜೈಲು ಫಿಕ್ಸ್; ಶಕ್ತಿ ದೇವತೆ ಬನಶಂಕರಿಯ ಮೊರೆ ಹೋದ ಕಾರ್ಯಕರ್ತರು
ಕರವೇ ಅಧ್ಯಕ್ಷ ನಾರಾಯಣಗೌಡ(Narayana Gowda)ಗೆ ಇನ್ನೂ 4 ದಿನ ಜೈಲು ಫಿಕ್ಸ್ ಆಗಿದೆ. ಇಂದು(ಜ.02) ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೇವನಹಳ್ಳಿ(Devanahalli)ಯ 5ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.
ಬೆಂಗಳೂರು, ಜ.02: ಕರವೇ ಅಧ್ಯಕ್ಷ ನಾರಾಯಣ ಗೌಡ(Narayana Gowda)ಗೆ ಇನ್ನೂ 4 ದಿನ ಜೈಲು ಫಿಕ್ಸ್ ಆಗಿದೆ. ಇಂದು(ಜ.02) ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೇವನಹಳ್ಳಿ(Devanahalli)ಯ 5ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶವನ್ನು ಕಾಯ್ದಿರಿಸಿದ್ದು, ಜನವರಿ 6ರಂದು ಜಾಮೀನು ಬಗ್ಗೆ ಆದೇಶ ಪ್ರಕಟಿಸಲಿದೆ. ಪ್ರಸ್ತುತ ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿ ಕರವೇಯ 32 ಕಾರ್ಯಕರ್ತರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಕರವೇ ಅಧ್ಯಕ್ಷ ನಾರಾಯಣಗೌಡ ಬಿಡುಗಡೆಗಾಗಿ ಶಕ್ತಿ ದೇವತೆ ಮೊರೆ
ಕರವೇ ಅಧ್ಯಕ್ಷ ನಾರಾಯಣಗೌಡ ಅವರ ಬಿಡುಗಡೆಗಾಗಿ ಶಕ್ತಿ ದೇವತೆ ಬನಶಂಕರಿಯ ಮೊರೆ ಹೋಗಿದ್ದಾರೆ. ಕರವೇ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ ನೇತೃತ್ವದಲ್ಲಿ ಪೂಜೆ ತಾಯಿ ಬನಶಂಕರಿಗೆ ಪೂಜೆ ನೆರವೇರಿಸಿ ಪ್ರಸಾದ ತೆಗೆದುಕೊಂಡು ಕಾರಾಗೃಹಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಅಶ್ವಿನಿ ಗೌಡ ‘ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರವೇ ಮಹಿಳಾ ಹೋರಾಟಗಾರರ ಕುಟುಂಬದವರಿಗೆ ಕಿರುಕುಳ ನೀಡುತ್ತಿದ್ದು, ಪೊಲೀಸರ ಕುಮ್ಮಕ್ಕಿನಿಂದ ಹೋರಾಟ ಹತ್ತಿಕ್ಕುವ ಕೆಲಸ ನಡೀತಿದೆ ಎಂದರು.
ಇದನ್ನೂ ಓದಿ:ಸ್ವಪಕ್ಷದ ಕಾರ್ಯಕರ್ತರಿಂದಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ: ಕರವೇ ನಾಯರಾಣಗೌಡ ಬಂಧನಕ್ಕೆ ಬೇಸರ
ಇಂದು ಸಹ ಮಹಿಳಾ ಕಾರ್ಯಕರ್ತರ ಬಂಧನಕ್ಕೆ ಯತ್ನಿಸಿದ್ದಾರೆ. ಸರ್ಚ್ ವಾರಂಟ್ ಇಲ್ಲದೆ ಮಹಿಳಾ ಶೌಚಾಲಯಗಳಿಗೆ ನುಗ್ಗುತ್ತಿದ್ದು, ಕರವೇ ಮಹಿಳಾ ಹೋರಾಟಗಾರರನ್ನು ಈಗ ಟಾರ್ಗೆಟ್ ಮಾಡ್ತಿದ್ದಾರೆ. ನಿಮಗೆ ಕನ್ನಡಿಗರ ವೋಟ್ ಬೇಕು, ನಿಮ್ಮ ಮಾತನ್ನು ನಾವು ಆಲಿಸಬೇಕು. ಕೇಸ್ ವಾಪಸ್ ಹಿಂಪಡೆಯುವುದಾಗಿ ಹೇಳಿ ಅಧಿಕಾರಕ್ಕೆ ಬಂದಿದ್ದೀರಿ. ಇದೀಗ ಕನ್ನಡಪರ ಹೋರಾಟಗಾರರ ಮೇಲೆ ಸುಳ್ಳು ಕೇಸ್ಗಳು ದಾಖಲಿಸಿದ್ದಾರೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ