ದೇವನಹಳ್ಳಿ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟ: ಮುನಿಯಪ್ಪಗೆ ಟಿಕೆಟ್ ನೀಡುವಂತೆ ಒಂದು ಬಣ ಪರ ಮತ್ತೊಂದು ಬಣ ವಿರೋಧ
ದೇವನಹಳ್ಳಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಕೆಹೆಚ್ ಮುನಿಯಪ್ಪಗೆ ಟಿಕೆಟ್ ನೀಡುವಂತೆ ಒಂದು ಬಣ ಬೆಂಬಲಿಸಿದರೆ, ಮತ್ತೊಂದು ಬಣ ವಿರೋಧ ವ್ಯಕ್ತಪಡಿಸುತ್ತಿದೆ.
ದೇವನಹಳ್ಳಿ: ರಾಜ್ಯ ವಿಧಾನಸಭಾ ಚುನಾವಣೆ(Karnataka Assembly Elections 2023) ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನೂ ಕಾಂಗ್ರೆಸ್ ಟಿಕೆಟ್ ಪಟ್ಟಿ ಕೂಡ ಸದ್ಯದಲ್ಲೇ ರಿಲೀಸ್ ಆಗಲಿದೆ. ಹೀಗಾಗಿ ಪಟ್ಟಿಯಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟನ್ನು ಮಾಜಿ ಕೇಂದ್ರ ಸಚಿವ ಕೆಹೆಚ್ ಮುನಿಯಪ್ಪಗೆ(KH Muniyappa) ಫೈನಲ್ ಆಗಿದೆ ಎನ್ನಲಾಗಿದೆ. ಹೀಗಾಗಿ ನೆನ್ನೆಯಷ್ಟೆ(ಮಾರ್ಚ್ 23) ಮಾಜಿ ಕೇಂದ್ರ ಸಚಿವ ಕೆಹೆಚ್ ಮುನಿಯಪ್ಪಗೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡದಂತೆ ಒಂದು ಬಣ ಸಾಮೂಹಿಕ ರಾಜಿನಾಮೆ ನೀಡಿತ್ತು. ಈ ಬೆನ್ನಲ್ಲೆ ಇಂದು ಕಾಂಗ್ರೆಸ್ನ ಮಾಜಿ ಜಿಲ್ಲಾ ಪಂ ಅಧ್ಯಕ್ಷ ರಾಜಣ್ಣ ನೇತೃತ್ವದ ಗುಂಪು ಮುನಿಯಪ್ಪ ಪರ ಬ್ಯಾಟ್ ಬೀಸಿದ್ದು ದೇವನಹಳ್ಳಿ ಟಿಕೆಟ್ ಕೆ.ಹೆಚ್ ಮುನಿಯಪ್ಪಗೆ ನೀಡಿದ್ರೆ ಗೆಲ್ಲಲಿದೆ ಅಂತ ವಿರೋಧಿ ಬಣಕ್ಕೆ ಟಾಂಗ್ ನೀಡಿದ್ದಾರೆ.
ಪಟ್ಟಣದ ಯುವ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸ್ಥಳೀಯ ಕಾಂಗ್ರೆಸ್ ಮುಖಂಡರು ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಶಾಸಕರು ಗೆಲ್ಲದೆ ಕಾರ್ಯಕರ್ತರು, ಮುಖಂಡರು ಸಾಕಷ್ಟು ನೋವುಂಡಿದ್ದಾರೆ. ಈ ಬಾರಿ ಬಲಿಷ್ಠ ನಾಯಕರು ರಾಜ್ಯ ರಾಜಕಾರಣಕ್ಕೆ ನಮ್ಮ ಕ್ಷೇತ್ರದಿಂದ ಇಳಿಯಲು ಬರ್ತಿದ್ದು ಅವರು ಸ್ವರ್ದಿಸಿದ್ದಲ್ಲಿ ಗೆಲುವು ಸಾಧಿಸಲಿದ್ದಾರೆ. ಅಲ್ಲದೆ ಇದೀಗ ವಿರೋಧ ಮಾಡ್ತಿರುವವರು ಸಹ ನಮ್ಮ ಪಕ್ಷದ ಮುಖಂಡರೆ ನಾವು ಅವರ ಜೊತೆಗೂಡಿ ಭಿನ್ನಮತವನ್ನ ಶಮನಗೊಳಿಸುತ್ತೇವೆ.
ಇದನ್ನೂ ಓದಿ: ನೀತಿ ಸಂಹಿತೆ ಸಿದ್ದತೆಗೆ ಜಿಲ್ಲಾಧಿಕಾರಿಗಳಿಗೆ ತುರ್ತು ಸಂದೇಶ, ಚುನಾವಣೆ ದಿನಾಂಕ ಘೋಷಣೆ ಸುಳಿವು ಕೊಟ್ಟ ಆಯೋಗ
ಕೆಹಚ್ ಮುನಿಯಪ್ಪ ಸೇರಿದಂತೆ ಯಾರೆ ಗೆಲ್ಲುವ ಅಭ್ಯರ್ಥಿಗೆ ಹೈಕಮಾಂಡ್ ಟಿಕೆಟ್ ನೀಡಿದಲ್ಲಿ ನಾವು ಅವರ ಪರ ಕೆಲಸ ಮಾಡಿ ಗೆಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ. ಅಲ್ಲದೆ ಈಗಾಗಲೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ನಾಯಕರು ರಾಜೀನಾಮೆ ಹಿಂಪಡೆದುಕೊಳ್ಳುವ ವಿಶ್ವಾಸವಿದೆ ಈ ಭಾರಿ ಕ್ಷೇತ್ರದಲ್ಲಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲ್ಲಿದ್ದಾರೆ ಅಂತ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಪರ ಬ್ಯಾಟ್ ಬೀಸಿದ್ದಾರೆ. ಇನ್ನೂ ಕ್ಷೇತ್ರದ ಟಿಕೆಟ್ ಘೋಷಣೆಯಾಗುವ ಮುನ್ನವೇ ದೇವನಹಳ್ಳಿ ಕಾಂಗ್ರೆಸ್ನಲ್ಲಿ ಎರಡು ಗುಂಪುಗಳು ರಚನೆಯಾಗಿದ್ದು ಮುಂದೆ ಹೈಕಮಾಂಡ್ ಯಾವ ರೀತಿ ಕ್ಷೇತ್ರದ ಮುಖಂಡರ ಮನವೊಲಿಸಿ ಯಾರಿಗೆ ಟಿಕೆಟ್ ಘೋಷಣೆ ಮಾಡುತ್ತೆ ಎಂಬುವುದನ್ನು ನೋಡಬೇಕು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:27 am, Fri, 24 March 23