ಬೆಂಗಳೂರು: ಅಭಿನಯದ ವೇಳೆ ವೇದಿಕೆ ಮೇಲೆ‌ ಕುಸಿದು ಬಿದ್ದು ಕಲಾವಿದ ಸಾವು

ಆ ಕಲಾವಿದ ನೂರಾರು ನಾಟಕಗಳಲ್ಲಿ ಅಭಿನಯಿಸಿ ಒಳ್ಳೆಯ ಹೆಸರು ಮಾಡಿದ್ದ. ನೂರಾರು ಜನ ಕಲಾವಿದರಿಗೆ ಅಭಿನಯ ಪಾತ್ರದಲ್ಲಿ ತಮ್ಮನ್ನ ತಾವು ಹೇಗೆ ತೋಡಗಿಸಿಕೊಳ್ಳಬೇಕು ಎಂದು ಹೇಳಿಕೊಟ್ಟಿದ್ದ. ಇಂತಹ ಕಲಾವಿದನಿಗೆ ನಟನೆ ಮಾಡುತ್ತಿರುವಾಗಲೇ ಸಾವು ಬಂದಿದೆ. ಅಭಿನಯ ಮಾಡುತ್ತಿದ್ದ ವೇಳೆ ಕಲಾವಿದ ಸಾವನ್ನಪ್ಪಿದ್ದಾನೆ. ಯಾರಿ ಕಲಾವಿದ, ಆತ ಸಾವನ್ನಪ್ಪಿದ್ದಾದರೂ ಹೇಗೆ ಅಂತೀರಾ? ಈ ಸ್ಟೋರಿ ಓದಿ.

ಬೆಂಗಳೂರು: ಅಭಿನಯದ ವೇಳೆ ವೇದಿಕೆ ಮೇಲೆ‌ ಕುಸಿದು ಬಿದ್ದು ಕಲಾವಿದ ಸಾವು
ಎನ್ ಮುನಿಕೆಂಪಣ್ಣ
Updated By: ಕಿರಣ್ ಹನುಮಂತ್​ ಮಾದಾರ್

Updated on: May 05, 2024 | 2:39 PM

ಬೆಂಗಳೂರು, ಮೇ.05: ಯಲಹಂಕ ತಾಲೂಕಿನ ಸಾತನೂರು ಗ್ರಾಮದಲ್ಲಿ ಅಭಿನಯದ ವೇಳೆ ವೇದಿಕೆ ಮೇಲೆ‌ಯೇ ಕುಸಿದು ಬಿದ್ದು ಕಲಾವಿದನೊಬ್ಬ ಸಾವನ್ನಪ್ಪಿದ ಘಟನೆ ನಿನ್ನೆ(ಮೇ.04) ನಡೆದಿದೆ. ಅಂದಹಾಗೆ ಯಲಹಂಕದ ಸುರಭಿ ಲೇಔಟ್​ನ ನಿವಾಸಿ ಒಳ್ಳೆಯ ಹೆಸರು ಮಾಡಿರುವ ಕಲಾವಿದ ಎನ್ ಮುನಿಕೆಂಪಣ್ಣ((N. Munikempanna). ಮುನಿಕೆಂಪಣ್ಣ ಸಾತನೂರು ಗ್ರಾಮದಲ್ಲಿ ಕುರುಕ್ಷೇತ್ರ ನಾಟಕದಲ್ಲಿ ಶಕುನಿ ಪಾತ್ರವನ್ನ ನಿರ್ವಹಿಸಿದ್ದು, ಅದ್ಬುತವಾಗಿ ಶಕುನಿಪಾತ್ರವನ್ನ ಮಾಡುತ್ತಾ ಎಲ್ಲರ ಗಮನ ಸೆಳೆದಿದ್ದರು. ಆದ್ರೆ, ವಿಧಿ ಹಿರಿಯ ಕಲಾವಿದ ಮುನಿಕೆಂಪಣ್ಣ ಜೊತೆ ಆಟವಾಡಿಬಿಟ್ಟಿದೆ.

ನೂರಾರು ನಾಟಕಗಳಲ್ಲಿ ಅಭಿನಯಿಸಿ ದೇವನಹಳ್ಳಿ ಸೇರಿದಂತೆ ಯಲಹಂಕ ಹಾಗೂ ರಾಜ್ಯದ ನಾನಾ ಭಾಗದಲ್ಲಿ ಮುನಿಕೆಂಪಣ್ಣ ತನ್ನದೆಯಾದ ಹೆಸರು ಮಾಡಿಕೊಂಡಿದ್ದರು. ಜೊತೆಗೆ ದೇವನಹಳ್ಳಿಯಲ್ಲಿ ಇತ್ತೀಚೆಗೆ 28 ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು ಸಹ ಆಗಿದ್ದರು. ಇದೀಗ ಇದೇ ಕುರುಕ್ಷೇತ್ರ ನಾಟಕ ನನ್ನ ಕೊನೆಯದ್ದು, ಇದನ್ನ ವಿಡಿಯೋ ಮಾಡಿ ಯೂ ಟ್ಯೂಬ್​ನಲ್ಲಿ ಹಾಕಿ ಎಂದು ತನ್ನ ಶಿಷ್ಯಂದರಿಗೆ ಹೇಳಿಕೊಂಡು ಬಂದಿದ್ದರಂತೆ. ಈ ಮಧ್ಯೆ ನಾಟಕದಲ್ಲಿ ಅಭಿನಯ ಮಾಡುತ್ತಿದ್ದ ವೇಳೆಯೆ ಕುಸಿದು ಬಿದ್ದು ಕಲಾವಿದ ಮುನಿಕೆಂಪಣ್ಣ ಹೃದಾಯಘಾತದಿಂದ ಮೃತಪಟ್ಟಿದ್ದಾರೆ.

ಇದನ್ನೂ ಓದಿ:ಹಾವು ಕಚ್ಚಿ ಯುವಕ ಸಾವು,  ಬದುಕಬಹುದು ಎಂದು ಶವವನ್ನು ಗಂಗಾ ನದಿಗೆ ಮುಳುಗಿಸಿದ ಕುಟುಂಬ 

ಇನ್ನು ಈ ಹಿರಿಯ ಕಲಾವಿದ ಸಾವಿಗೆ ನೂರಾರು ಕಲಾವಿದರು ದುಖಃದಲ್ಲಿ ಮುಳುಗಿದ್ದಾರೆ. ಮೃತ ಮುನಿಕೆಂಪಣ್ಣ ಮರಣೋತ್ತರ ಪರೀಕ್ಷೆಯನ್ನ ಯಲಹಂಕದಲ್ಲಿ ಮಾಡಲಾಗಿದ್ದು, ತಮ್ಮ ಹುಟ್ಟೂರು ಅರದೇಶನಹಳ್ಳಿಯಲ್ಲಿ ಅಂತ್ಯಕ್ರಿಯೆ ನೇರವೇರಿಸಲಾಗಿದೆ. ಒಟ್ಟಾರೆ ಉಪನ್ಯಾಸಕರಾಗಿ ಹಿರಿಯ ಕಲಾವಿದರಾಗಿದ್ದ ಮೃತ ಮುನಿಕೆಂಪಣ್ಣ, ನೂರಾರು ಜನರಿಗೆ ತನ್ನದೆಯಾದ ಕಲೆಯನ್ನ ಧಾರೆ ಎರೆದು ಹೆಸರು ಮಾಡಿದ್ದಾರೆ. ಕಲೆಯ ತನ್ನ ಸ್ವತ್ತು, ಕಲೆಯಿಂದ ಎಲ್ಲರನ್ನ ಮೇಲೆತ್ತುವ ಸಮಾಜಮುಖಿ ಕೆಲಸ ಮಾಡಿಕೊಂಡು ಬಂದ ಮುನಿಕೆಂಪಣ್ಣ ಅಭಿನಯ ಮಾಡುವಾಗಲೇ ಜೀವವನ್ನ ತೊರೆದಿದ್ದು ನಿಜಕ್ಕೂ ದುರಂತ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:35 pm, Sun, 5 May 24