ಬಸ್ಸ್ಲ್ಲಿ ಪರಿಚಯ, ಪರಿಚಯದಿಂದ ಪ್ರೀತಿ; ಆ ಪ್ರೀತಿಯ ಹೆಸರಲ್ಲೇ ಮೋಸವೂ ಮಾಡಿದ: ಸಾಲದು ಅಂತಾ ಯುವಕನ ಮನೆಯಿಂದ ಜೀವ ಬೆದರಿಕೆ
ಬೆಂಗಳೂರಿನ ಲಗ್ಗೆರೆ ಯುವತಿಗೆ ದಾಸರಹಳ್ಳಿಯ ಯುವಕ ಅನಿಲ್ ಕುಮಾರ್ ನಿಂದ ಮೋಸ ಆಗಿದೆ. ಪಾವಗಡದಿಂದ ಬಸ್ಸಿನಲ್ಲಿ ಬರುವಾಗ ಯುವಕ ಯುವತಿಗೆ ಪರಿಚಯವಾಗಿದ್ದು ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು.
ನೆಲಮಂಗಲ: ಬಸ್ಸಿನಲ್ಲಿ ಪರಿಚಯವಾದ ಯುವಕ ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ದೈಹಿಕ ಸಂಪರ್ಕ ಹೊಂದಿ ಯುವತಿಗೆ ವಂಚನೆ ಮಾಡಿದ ಮತ್ತೊಂದು ಘಟನೆ ನಡೆದಿದೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಲಗ್ಗೆರೆ ಯುವತಿಗೆ ದಾಸರಹಳ್ಳಿಯ ಯುವಕ ಅನಿಲ್ ಕುಮಾರ್ ನಿಂದ ಮೋಸ ಆಗಿದೆ. ಪಾವಗಡದಿಂದ ಬಸ್ಸಿನಲ್ಲಿ ಬರುವಾಗ ಯುವಕ ಯುವತಿಗೆ ಪರಿಚಯವಾಗಿದ್ದು ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. ಮದುವೆಯಾಗಲು ಯುವಕನ ಮನೆ ಬಳಿ ಹೋಗಿ ಕೇಳಿದ್ದಕ್ಕೆ ಯುವತಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.
ಯುವತಿ ನೀಡಿದ ದೂರಿನಲ್ಲೇನಿದೆ? ಪಿರ್ಯಾದುದಾರರು ಠಾಣೆಗೆ ಹಾಜಾರಾಗಿ ನೀಡಿದ ದೂರಿನ ಸಾರಂಶವೆನೆಂದರೆ ನನಗೆ ಈಗೆ ಸುಮಾರು ದಿನಗಳ ಹಿಂದೆ ಪಾವಗಡದಿಂದ ಬಸ್ಸಿನಲ್ಲಿ ಬರುವಾಗ ಅನಿಲ್ ಕುಮಾರ್ ಎಂಬಾತನು ನನಗೆ ಪರಿಚಯವಾಗಿದ್ದು ನಾವುಗಳು ಪರಸ್ಪರ ಪ್ರೀತಿಸುತ್ತಿದೆವು ಹಾಗೂ ನನಗೆ ಅನಿಲ್ ಕುಮಾರ್ ಮನೆಯವರು ಸಹ ತುಂಬಾ ಹತ್ತಿರವಾಗಿದ್ದಲ್ಲದೆ ನನ್ನನ್ನು ಮದುವೆಯಾಗುವುದಾಗಿ ತಿಳಿಸಿ ನನ್ನಿಂದ ಸುಮಾರು 2,00,000/- ರೂ ಹಣವನ್ನು ಸಹ ಅನಿಲ್ ಕುಮಾರ್ ಪಡೆದುಕೊಂಡಿದನು. ಹೀಗಿರುವಾಗ ದಿನಾಂಕ:-24/11/2021 ರಂದು ಬೆಳಿಗೆ ಸುಮಾರು 09-30 ಗಂಟೆಯಲ್ಲಿ ನಾನು ಟಿ.ದಾಸರಹಳ್ಳಿಯ ಮೆಟ್ರೋ ನಿಲ್ದಾಣದ ಹಿಂಭಾಗವಿರುವ ಅನಿಲ್ ಕುಮಾರ್ ಮನೆಯ ಹತ್ತಿರ ಹೋಗಿ ಅನಿಲ್ ಕುಮಾರ್ ನನ್ನು ನನ್ನನ್ನು ಮದುವೆಯಾಗು ಎಂದು ಕೇಳಿದ್ದಕ್ಕೆ ಅಲ್ಲಿದ್ದ ಅನಿಲ್ ಕುಮಾರ್ ನನಗೆ ನಿನ್ನನ್ನು ಯಾರು ಮನೆಯ ಹತ್ತಿರ ಬರಲು ಹೇಳಿದ್ದು ಸೂಳೆಮುಂಡೆ ನಾನು ನಿನ್ನನ್ನು ಮದುವೆಯಾಗುವುದಿಲ್ಲವೆಂದು ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದು ನಂತರದಲ್ಲಿ, ಅನಿಲ್ ಕುಮಾರ್ ತಮ್ಮ ಸುನಿಲ್, ತಾಯಿ ಮೀನಾಕ್ಷಿ, ಅಕ್ಕ ಉಮಾ ನಾಲ್ಕು ಜನರು ಸೇರಿಕೊಂಡು ನನ್ನನ್ನು ಹಿಡಿದು ಕೈಗಳಿಂದ ನನ್ನ ತಲೆಗೆ ಮುಖಕ್ಕೆ ಒದ್ದು ಕೆಳಗೆ ಬೀಳಿಸಿ ಕಾಲಿನಿಂದ ನನ್ನ ಹೊಟ್ಟೆಗೆ ತುಳಿದರು, ನಂತರ ಮೀನಾಕ್ಷಿಯು ನನಗೆ ಇನ್ನೊಂದು ಬಾರಿ ನೀನು ನನ್ನ ಮಗನನ್ನು ಮದುವೆಯಾಗು ಎಂದು ಬಂದರೆ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಬೆದರಿಕೆ ಹಾಕಿರುತ್ತಾರೆ. ನಾನು ಈ ವಿಷಯದ ಬಗ್ಗೆ ನಮ್ಮ ಮನೆಯಲ್ಲಿ ಚರ್ಚಿಸಿ ತಡವಾಗಿ ಬಂದು ದೂರು ನೀಡುತ್ತಿದ್ದು ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮೋಸಮಾಡಿ, ಆವಾಚ್ಯ ಶಬ್ದಗಳಿಂದ ಬೈದು, ಕೈ ಹಾಗೂ ಕಾಲಿನಿಂದ ಹಲ್ಲೆಮಾಡಿ, ಜೀವ ಬೆದರಿಕೆ ಹಾಕಿದ ಮೇಲ್ಕಂಡವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಯುವತಿ ಮನವಿ ಮಾಡಿದ್ದಾಳೆ.
ಇದನ್ನೂ ಓದಿ: ಪ್ರೀತಿಸಿ ನಂಬಿಸಿ ಗರ್ಭಿಣಿ ಮಾಡಿ ಕೈ ಬಿಟ್ಟ ಯುವಕ; ನ್ಯಾಯಕ್ಕಾಗಿ ಯುವತಿ ಕಣ್ಣೀರು, ಆರೋಪಿಗೆ ಬಲೆ ಬೀಸಿದ ಪೊಲೀಸ್
Published On - 3:42 pm, Tue, 30 November 21