ಹೆಬ್ಬಗೋಡಿಯ‌ ಮನೆಯೊಂದರಲ್ಲಿ ಯುವಕ-ಯುವತಿ ಶವ ಪತ್ತೆ; ಸಾವಿನ ಸುತ್ತ ಅನುಮಾನದ ಹುತ್ತ

| Updated By: ಆಯೇಷಾ ಬಾನು

Updated on: Sep 21, 2022 | 8:02 PM

ಮಲ್ಲಿಕಾರ್ಜುನ್ ಆಗಾಗ ನೇತ್ರ ಭೇಟಿ ಆಗಲು ಮನೆಗೆ ಬರ್ತಿದ್ದ. ಇದೇ ತಿಂಗಳ 19 ರಂದು ಇಬ್ಬರ ಮಧ್ಯೆ ಜಗಳ ನಡೆದಿತ್ತು. ಪ್ರೀತಿಗಾಗಿ ಶುರುವಾದ ಜಗಳ ಸಾವಿನಲ್ಲಿ‌ ಅಂತ್ಯವಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಮಲ್ಲಿಕಾರ್ಜುನ್ ಮತ್ತು ನೇತ್ರಾವತಿ ಶವ ಪತ್ತೆಯಾಗಿದೆ.

ಹೆಬ್ಬಗೋಡಿಯ‌ ಮನೆಯೊಂದರಲ್ಲಿ ಯುವಕ-ಯುವತಿ ಶವ ಪತ್ತೆ; ಸಾವಿನ ಸುತ್ತ ಅನುಮಾನದ ಹುತ್ತ
ಮಲ್ಲಿಕಾರ್ಜುನ್, ನೇತ್ರಾವತಿ
Follow us on

ಆನೇಕಲ್: ಹೆಬ್ಬಗೋಡಿಯ‌ ಮನೆಯೊಂದರಲ್ಲಿ ಯುವಕ-ಯುವತಿ ಶವ ಪತ್ತೆಯಾಗಿದೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯ ಚೌಡ ಸಮುದ್ರದ ನಿವಾಸಿಗಳಾದ ಮಲ್ಲಿಕಾರ್ಜುನ್ (27),‌ ನೇತ್ರಾವತಿ (23)‌ಮೃತ ದುರ್ದೈವಿಗಳು.

ಹಲವು ವರ್ಷಗಳಿಂದ ಸ್ನೇಹಿತರಾಗಿದ್ದ ಮಲ್ಲಿಕಾರ್ಜುನ್, ನೇತ್ರಾವತಿ 4 ವರ್ಷ‌ದಿಂದ ಪ್ರೀತಿಯಲ್ಲಿ ಬಿದ್ದಿದ್ದರು. ಖಾಸಗೀ ಕಂಪನಿಯಲ್ಲಿ ಕೆಲಸ‌ ಮಾಡುತ್ತಿದ್ದ ನೇತ್ರಾವತಿ ಹೆಬ್ಬಗೋಡಿ ಸಮೀಪದ ‌ಮನೆಯಲ್ಲಿ ಬಾಡಿಗೆಗಿದ್ದರು. ಮಲ್ಲಿಕಾರ್ಜುನ್ ಆಗಾಗ ನೇತ್ರ ಭೇಟಿ ಆಗಲು ಮನೆಗೆ ಬರ್ತಿದ್ದ. ಇದೇ ತಿಂಗಳ 19 ರಂದು ಇಬ್ಬರ ಮಧ್ಯೆ ಜಗಳ ನಡೆದಿತ್ತು. ಪ್ರೀತಿಗಾಗಿ ಶುರುವಾದ ಜಗಳ ಸಾವಿನಲ್ಲಿ‌ ಅಂತ್ಯವಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಮಲ್ಲಿಕಾರ್ಜುನ್ ಮತ್ತು ನೇತ್ರಾವತಿ ಶವ ಪತ್ತೆಯಾಗಿದೆ.

ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ತಂದೆ ಆತ್ಮಹತ್ಯೆ

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬಾಚಹಳ್ಳಿಯಲ್ಲಿ ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮನೆಯಲ್ಲಿ ನೇಣು ಬಿಗಿದುಕೊಂಡು ರವಿ(47) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 5 ದಿನದ ಹಿಂದೆ ರವಿ ಅವರ ಮಗಳು ಪ್ರಿಯಕರನ ಜೊತೆ ಓಡಿಹೋಗಿದ್ದಳು. ಹೀಗಾಗಿ ಮೃತ ರವಿ ಅಪ್ರಾಪ್ತ ಮಗಳನ್ನ ಹುಡುಕಿಕೊಡಿ ಎಂದು ಕೆ.ಆರ್​.ಪೇಟೆ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಕ್ರಮಕ್ಕೆ ಮುಂದಾಗದಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರವಿ ಕುಟುಂಬಸ್ಥರು ಮತ್ತು ಸಂಬಂಧಿಕರು ಕೆ.ಆರ್​.ಪೇಟೆ ಠಾಣೆ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿದ್ರು. ಇದನ್ನೂ ಓದಿ: ಕಂದಾಯ ಇಲಾಖೆಯ ದಾಖಲೆಗಳನ್ನು ತಿದ್ದಿ ಅಧಿಕಾರಿಗಳ ಮೇಲೆ ಕ್ರಿಮಿನಲ್‌ ಕೇಸ್‌: ಗೋವಿಂದ ಕಾರಜೋಳ

ಲಂಚ ಸ್ವೀಕರಿಸುತ್ತಿದ್ದಾಗ ಕೆಎಎಸ್‌ ಅಧಿಕಾರಿ ಲೋಕಾಯುಕ್ತ ಬಲೆಗೆ

ಬೆಂಗಳೂರಿನ KIADB ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಕೆಎಎಸ್‌ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. KAS ಅಧಿಕಾರಿ ರಘುನಾಥ್‌, ಭೂಸ್ವಾಧೀನ ಅಧಿಕಾರಿ ವಿಜಯ್ ಬಲೆಗೆ ಬಿದ್ದಿದ್ದಾರೆ. ಜಮೀನು ಸಂಬಂಧ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಅಧಿಕಾರಿಗಳಾದ ರಘುನಾಥ್, ವಿಜಯ್‌ ಕುಮಾರ್‌ ಅವರನ್ನು ಬಂಧಿಸಿ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಲೋಕಾಯುಕ್ತ ಡಿವೈಎಸ್‌ಪಿ ಪ್ರದೀಪ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

Published On - 7:12 pm, Wed, 21 September 22