AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಬಳಿ ಕೆಲಸ ಕಲಿತು ನನ್ನ ವಿರುದ್ಧವೆ ಕ್ಯಾಟರಿಂಗ್ ಮಾಡುತ್ತೀಯಾ ಎಂದು ಮರ್ಮಾಂಗಕ್ಕೆ ಒದ್ದ -ಆಮೇಲೆ ಏನಾಯಿತು?

ಇಲ್ಲಿ ಆನಂದನ ಕೊಲೆ ಮಾಡಿರುವುದು ಆತನ ಸ್ನೇಹಿತ ಕಮ್‌ ಅಡುಗೆ ಗುರು ಸತೀಶ, ಪುಟ್ಟ ಹಾಗೂ ದಯಾನಂದ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೃತ ಆನಂದ ಆರೋಪಿ ಸತೀಶನ ಬಳಿ ಅಡುಗೆ ಕೆಲಸ ಮಾಡುತ್ತಿದ್ದನಂತೆ, ಬಳಿಕ ಆನಂದನೇ ಸ್ವಂತ ಅಡುಗೆ ಕಾಂಟ್ರ್ಯಾಕ್ಟ್ ಆರಂಭಿಸಿದ್ದಾನೆ.

ನನ್ನ ಬಳಿ ಕೆಲಸ ಕಲಿತು ನನ್ನ ವಿರುದ್ಧವೆ ಕ್ಯಾಟರಿಂಗ್ ಮಾಡುತ್ತೀಯಾ ಎಂದು ಮರ್ಮಾಂಗಕ್ಕೆ ಒದ್ದ -ಆಮೇಲೆ ಏನಾಯಿತು?
ಪೀಣ್ಯ ಪೊಲೀಸ್ ಠಾಣ ವ್ಯಾಪ್ತಿಯ ಚನ್ನನಾಯಕನ ಪಾಳ್ಯದಲ್ಲಿ ಹತ್ಯೆಗೀಡಾದ ಆನಂದ
ಬಿ ಮೂರ್ತಿ, ನೆಲಮಂಗಲ
ಬಿ ಮೂರ್ತಿ, ನೆಲಮಂಗಲ| Edited By: ಸಾಧು ಶ್ರೀನಾಥ್​|

Updated on:Jul 07, 2023 | 1:50 PM

Share

ಆತನ‌ ಹೆಂಡತಿ ತಮ್ಮ ವಿವಾಹ ವಾರ್ಷಿಕೋತ್ಸವ (marriage annivesary) ಆಚರಣೆ ಮಾಡಿಕೊಳ್ಳಲು ತಮಿಳುನಾಡಿನಿಂದ ಬಂದು ಮನೆಯಲ್ಲಿ ಕಾಯುತ್ತಿದ್ದಳು. ರಾತ್ರಿಯಾದರು ಗಂಡ ಮನೆಗೆ ಬರಲೇ ಇಲ್ಲ, ಇಡೀ ರಾತ್ರಿ ಆಕೆ ಅರೆ ನಿದ್ರೆಯಲ್ಲಿ ಕೊರಗಿದರೆ ಇತ್ತ ಗಂಡನಾದವನು, ಆತನ ಸ್ನೇಹಿತರು ಹಚ್ಚಿದ ಚಿತೆಯಲ್ಲಿ ಬೆಂದುಹೋಗಿದ್ದ. ಅಷ್ಟಕ್ಕೂ ಏನಿದು ಪ್ರಕರಣ ಅಂತೀರಾ, ಈ ಸ್ಟೋರಿ ನೋಡಿ. ಧಗಧಗಿಸಿ ಉರಿಯುತ್ತಿರುವ ಬೆಂಕಿ, ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು, ಪೊಲೀಸರಿಗೆ ಟೆಂಶನ್, ಗ್ರಾಮಸ್ಥರಲ್ಲಿ ಆತಂಕ, ಇಲ್ಲೇನು ನಡೆಯುತ್ತಿದೆ ಎಂದು ದೂರದಲ್ಲೇ ಆತಂಕದಿಂದ ನೋಡಿದ ಸ್ಥಳೀಯ ನಿವಾಸಿಗಳು, ಬೆಂಕಿ ಸ್ವಲ್ಪ ಹತೋಟಿಗೆ ಬರುತ್ತಿದ್ದಂತೆ ತಿಳಿದದ್ದು ಇಲ್ಲಿ ಸುಟ್ಟಿರುವುದು ಓರ್ವ ವ್ಯಕ್ತಿಯ ಮೃತ ದೇಹ ಎಂಬುದು. ಮೃತ ದೇಹ ಕಾಣುತ್ತಲೇ ಪೊಲೀಸರ ಟೆಂಶನ್ ಮತ್ತಷ್ಟು ಜಾಸ್ತಿಯಾಯ್ತು. ಆದ್ರೆ ಆ ಕ್ಷಣಕ್ಕೆ ಪೊಲೀಸರು ಅದನ್ನ ಅಪರಿಚಿತ ವ್ಯಕ್ತಿಯ ಶವ ಎಂದು ಸ್ಥಳ ಮಹಜರ್ ಮಾಡಿ ಮೃತ ದೇಹವನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದರು. ಈ ಭೀಕರ ಘಟನೆ ನಡೆದಿರುವುದು ಪೀಣ್ಯ ಪೊಲೀಸ್ ಠಾಣ ವ್ಯಾಪ್ತಿಯ (Peenya Police) ಚನ್ನನಾಯಕನ ಪಾಳ್ಯದಲ್ಲಿ (channanayakana palya). ಹೌದು ಜುಲೈ 2 ರಂದು ಚನ್ನನಾಯಕನ ಪಾಳ್ಯ ಜನರು ಬೆಳ್ಳಂ ಬೆಳಿಗ್ಗೆ ಈ ಶವ ಉರಿಯುತ್ತಿರುವುದನ್ನ ನೋಡಿ ಬೆಚ್ಚಿ ಬಿದ್ದಿದ್ದರು.

ಪ್ರಕರಣ ನಡೆದು ಮರುದಿನ ಈ ಶವದ ಗುರುತು ಪತ್ತೆಯಾಗಿದ್ದು ಇಲ್ಲಿ ಸುಟ್ಟಿರುವುದು ಹೆಗ್ಗನಹಳ್ಳಿ ನಿವಾಸಿ ಅಡುಗೆ ಕಾಂಟ್ರ್ಯಾಕ್ಟರ್ 38 ವರ್ಷದ ಆನಂದನದು. ಜುಲೈ ಎರಡರಂದು ತಮಿಳುನಾಡಿನಿಂದ ಬಂದಿದ್ದ ಹೆಂಡತಿಯೊಂದಿಗೆ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಳ್ಳಬೇಕಿದ್ದ ಆನಂದ ತನ್ನ ಸ್ನೇಹಿತರಿಂದ ಕೊಲೆಯಾಗಿ, ಅವರೇ ಹಚ್ಚಿದ ಚಿತೆಯಲ್ಲಿ ಬೆಂದು ಹೋಗಿದ್ದಾನೆ.

ಹೌದು ವಿವಾಹ ವಾರ್ಷಿಕೋತ್ಸದ ದಿನವೇ ಇಂತಹ ದುರಂತ ನಡೆದಿದೆ. ಅಸಲಿಗೆ ವಿಷಯ ಏನಂದ್ರೆ ಇಲ್ಲಿ ಕೊಲೆ ಮಾಡಿರುವುದು ಮೃತ ಆನಂದನ ಸ್ನೇಹಿತ ಕಮ್‌ ಅಡುಗೆ ಗುರು ಸತೀಶ, ಪುಟ್ಟ ಹಾಗೂ ದಯಾನಂದ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೃತ ಆನಂದ ಆರೋಪಿ ಸತೀಶನ ಬಳಿ ಅಡುಗೆ ಕೆಲಸ ಮಾಡುತ್ತಿದ್ದನಂತೆ, ಬಳಿಕ ಆನಂದನೇ ಸ್ವಂತ ಅಡುಗೆ ಕಾಂಟ್ರ್ಯಾಕ್ಟ್ ಆರಂಭಿಸಿದ್ದಾನೆ.

ಈ ವೇಳೆ ಸತೀಶನಿಗೆ ಬ್ಯುಸಿನೆಸ್ ಡಲ್ ಆಗಿತ್ತಂತೆ. ಈ ವಿಚಾರವಾಗಿ ಸತೀಶ್ ಕುಪಿತನಾಗಿದ್ದನಂತೆ. ಏನಾದ್ರ್ರೂ ಮಾಡ್ಬೇಕು ಎಂದು ಪ್ಲಾನ್ ಮಾಡಿದ್ದ ಪುಟ್ಟ, ಸತೀಶ್ ಹಾಗೂ ದಯಾನಂದ ಮೂವರೂ ಮೃತ ಆನಂದ‌ನೊಂದಿಗೆ ಪಾರ್ಟಿ ಪ್ಲಾನ್ ಮಾಡಿ ಆನಂದನ ಮನೆಯಲ್ಲಿ ಮಟನ್, ಚಿಕನ್ ಅಡುಗೆ ಮಾಡಿಕೊಂಡು ಅಲ್ಲಿಂದ ಚನ್ನನಾಯಕನಪಾಳ್ಯದಲ್ಲಿ ಮೀನಾ ಬಾರ್‌ನಲ್ಲಿ ಎಣ್ಣೆ ತರಿಸಿಕೊಂಡು ಕುಡಿಯುತ್ತಾ ಕುಳಿತಿರುತ್ತಾರೆ.

ಬಳಿಕ ಮಾತಿಗೆ ಮಾತು ಬೆಳೆದು ಆನಂದ ಹಾಗೂ ಸತೀಶನ ನಡುವೆ ಜಗಳ ಶುರುವಾಗಿದೆ, ಆರೋಪಿ ಸತೀಶ ಆನಂದನ ಮರ್ಮಾಂಗಕ್ಕೆ ಒದ್ದಿದ್ದಾನೆ. ಇದರಿಂದ ಆನಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಬಳಿಕ ಅಲ್ಲೆ ಇದ್ದ ಕಲ್ಲಿನಿಂದ ಆನಂದನ ತಲೆ ಜಜ್ಜಿದ್ದಾನೆ. ನಂತರ ಪೆಟ್ರೋಲ್ ಹಾಕಿ ಮೃತ ದೇಹಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇದೇ ಸಮಯದಲ್ಲಿ ಗಂಡ ಹೇಳಿದಂತೆ ತಮಿಳುನಾಡಿನಿಂದ ಬಂದು ಕೆಂಗೇರಿ ಬಸ್ ನಿಲ್ದಾಣದಿಂದ ಎಷ್ಟು ಬಾರಿ ಫೋನ್ ಮಾಡಿದರೂ ಗಂಡ ಫೋನ್ ತೆಗೆದಿರಲಿಲ್ಲ. ಅಂದು ರಾತ್ರಿಯಿಡಿ ಮನೆಯಲ್ಲಿ ಕೊರಗಿ ಕೊರಗಿ, ಮರುದಿನ ರಾಜಗೋಪಾಲನಗರ ಠಾಣೆಗೆ ದೂರು ನೀಡಲು ಹೋದಾಗ ಠಾಣಾಧಿಕಾರಿಯ ಒಮ್ಮೆ ಅಪರಿಚಿತ ಶವದ ಬಗ್ಗೆ ತಿಳಿಸಿ ಪೀಣ್ಯಾ ಠಾಣೆಗೆ ಹೋಗುವಂತೆ ಹೇಳಿದ್ರಂತೆ. ಅವರ ಸೂಚನೆಯಂತೆ ಪೀಣ್ಯ ಠಾಣೆಗೆ ತೆರಳಿದ ಪವಿತ್ರ ತನ್ನ ಗಂಡ ಧರಿಸಿದ್ದ ಚಪ್ಪಲಿ, ಕೈಬಳೆ, ಉಂಗುರ ಇವೆಲ್ಲವನ್ನು ನೋಡಿ ಅದು ತನ್ನ ಗಂಡನದ್ದೇ ಮೃತದೇಹವೆಂದು ಗುರುತಿಸಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೀಣ್ಯ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಇತ್ತ ವಿವಾಹ ವಾರ್ಷಿಕೋತ್ಸವಸ ದಿನವೇ ಗಂಡನನ್ನ ಕಳೆದುಕೊಂಡ ಹೆಂಡತಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದು ಒಂದು ಕುಟುಂಬವೇ ಬೀದಿಗೆ ಬಂದಿದೆ.

ರೆಸ್ಟೋರೆಂಟ್‌ನ ಸ್ವಿಮ್ಮಿಂಗ್ ಪೂಲ್ ಬಳಿ ಕುಡಿಯಲು ನಿರಾಕರಿಸಿದ ಸಿಬ್ಬಂದಿಯ ಮೇಲೆ ಹಲ್ಲೆ

ನೆಲಮಂಗಲ: ಬಾರ್‌ ಅಂಡ್ ರೆಸ್ಟೋರೆಂಟ್ ನಲ್ಲಿ ಕುಡಿದ ಮತ್ತಿನಲ್ಲಿ ಗಲಾಟೆ ಶುರು ಮಾಡಿದ ಪುಂಡರು ಬಾರ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕು ನಗರೂರಿನ ಶ್ರೀ ಬಾಲಾಜಿ ಸರೋವರ ರೆಸ್ಟೋರೆಂಟ್‌‌ನಲ್ಲಿ ನಡೆದಿದೆ. ರೆಸ್ಟೋರೆಂಟ್‌ಗೆ ಬಂದಿದ್ದ ಆರೋಪಿ ಸಂಜೆ 7 ಗಂಟೆಗೆ ಬಂದು ಕಂಠಪೂರ್ತಿ ಕುಡಿದು ಬಾರ್‌ ಸಿಬ್ಬಂದಿ ಜೊತೆ ಗಲಾಟೆ ಮಾಡಿ ಹಣ ಕೊಡದೆ ತೆರಳಿದ್ದ. ಬಳಿಕ 8.30 ರ ವೇಳೆಗೆ ತನ್ನ ಸ್ನೇಹಿತರಾದ ಮಂಜುಗೌಡ ಹಾಗೂ ರಾಕೇಶ್ ಎನ್ನುವವರನ್ನ ಸಹ ರೆಸ್ಟೋರೆಂಟ್‌ಗೆ ಕರೆದುಕೊಂಡು ಬಂದಿದ್ದಾನೆ.

Nelamangala bar and restaurant incident

ಆ ವೇಳೆ ಮತ್ತೆ ರೆಸ್ಟೋರೆಂಟ್ ನಲ್ಲಿ ಮದ್ಯ ಖರೀದಿಸಿ ಅಲ್ಲೇ ಇದ್ದ ಸ್ವಿಮ್ಮಿಂಗ್ ಫೂಲ್ ಬಳಿ ಕುಡಿಯಲು ಹೋಗಿದ್ದರಂತೆ. ಅಲ್ಲಿಗೆ ರೆಸ್ಟೋರೆಂಟ್ ಸಿಬ್ಬಂದಿ ಸತೀಶ್ ತೆರಳಿ ಸರ್ ಇಲ್ಲಿ ಕುಡಿಯುವ ಹಾಗಿಲ್ಲ, ನೀವು ಟೇಬಲ್‌ಗೆ ತೆರಳಿ ಎಂದಿದ್ದಕ್ಕೆ ನಾವು ಇಲ್ಲೇ ಕುಡಿಯುತ್ತೇವೆ ಏನ್ ಮಾಡ್ಕೊತ್ಯಾ ಮಾಡ್ಕೊ ಹೋಗೋ. ನಾವು ಲೋಕಲ್‌ನವರು ನೀವು ಬ್ಯುಸಿನೆಸ್ ಮಾಡ್ಬೇಕು ಅಂದ್ರೆ ನಾವ್ ಹೇಳ್ದಂಗೆ ಕೇಳ್ಬೇಕು ಅಂತ ಗಲಾಟೆ ಮಾಡಿ ಬಳಿಕ ಅಲ್ಲೆ ಇದ್ದ ಮರದ ತುಂಡು ತೆಗೆದುಕೊಂಡು ಸತೀಶನ ಕಿವಿ ಮೇಲೆ ಹಲ್ಲೆ ನಡೆಸಿದ್ದು ಸತೀಶನಿಗೆ ಗಂಭೀರ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:38 am, Fri, 7 July 23

Follow Us
ಬಿ ಮೂರ್ತಿ, ನೆಲಮಂಗಲ
ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು