ಶಿವಗಂಗೆ ಬೆಟ್ಟದ ತುತ್ತ ತುದಿಯಲ್ಲಿ ಟೆಕ್ಕಿ ಫೋಟೋ ಸೆರೆ: ಆದ್ರೂ ಸಿಗ್ತಿಲ್ಲ ಅದ್ವೈತ್

Missing Trekker Advait Upadhyaya: ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಟೆಕ್ಕಿ ಅದ್ವೈತ್ ಉಪಾಧ್ಯಾಯ ನಾಪತ್ತೆಯಾಗಿ ನಾಲ್ಕು ದಿನಗಳಾಗಿವೆ. ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ತಂಡಗಳು ಡ್ರೋನ್ ಮೂಲಕ ವ್ಯಾಪಕ ಶೋಧ ನಡೆಸಿವೆ. ಹೀಗಿರುವಾಗಿ ಚಾರಣಿಗರು ಕ್ಲಿಕ್ಕಿಸಿದ ಅದೊಂದು ಫೋಟೋದಲ್ಲಿ ಅದ್ವೈತ್ ಇರುವುದು ತಿಳಿದುಬಂದಿದೆ. ಆದರೆ ಇನ್ನೂ ಪತ್ತೆ ಆಗಿಲ್ಲ.

ಶಿವಗಂಗೆ ಬೆಟ್ಟದ ತುತ್ತ ತುದಿಯಲ್ಲಿ ಟೆಕ್ಕಿ ಫೋಟೋ ಸೆರೆ: ಆದ್ರೂ ಸಿಗ್ತಿಲ್ಲ ಅದ್ವೈತ್
ಅದ್ವೈತ್
Image Credit source: tv9 kannada
Edited By:

Updated on: Aug 10, 2026 | 7:49 PM

ನೆಲಮಂಗಲ, ಆಗಸ್ಟ್​ 10: ನಾಲ್ಕು ದಿನಗಳ ಹಿಂದೆ ಟ್ರೆಕ್ಕಿಂಗ್‌ಗೆ (Trekking) ಬಂದು ನಾಪತ್ತೆಯಾಗಿರುವ ಟೆಕ್ಕಿ ಅದ್ವೈತ್ ಉಪಾಧ್ಯಾಯ (Advait Upadhyaya) ಹುಡುಕಾಟ ಶೋಧ ಕಾರ್ಯಚರಣೆ ತೀವ್ರಗೊಂಡಿದೆ. ದಿನಕ್ಕೊಂದು ಹೊಸ ಸುಳಿವು ಸಿಗುತ್ತಿದ್ದು, ಇದೀಗ ಮತ್ತೊಂದು ಸುಳಿವು ಪತ್ತೆ ಆಗಿದೆ. ಇಂದಿನ ಕಾರ್ಯಚರಣೆ ವೇಳೆ ಬೆಟ್ಟದ ತುತ್ತ ತುದಿಯಲ್ಲಿ ಚಾರಣಿಗರು ಕ್ಲಿಕ್ಕಿಸಿದ ಫೋಟೋದಲ್ಲಿ ಅದ್ವೈತ್ ಕೂಡ ಇರುವುದು ಪತ್ತೆ ಆಗಿದೆ.

ನೆಲಮಂಗಲ ಡಿವೈಸ್​ಪಿ ಉಮಾರಾಣಿ ನೇತೃತ್ವದಲ್ಲಿ ಶೋಧ

ಉತ್ತರ ಪ್ರದೇಶ ಇಂದೂರ್ ಮೂಲದ ಟೆಕ್ಕಿ ಅದ್ವೈತ್, ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ಹೋಗಿ ನಾಪತ್ತೆಯಾಗಿ ನಾಲ್ಕು ದಿನಗಳು ಕಳೆದಿವೆ. ಇಂದು ನೆಲಮಂಗಲ ಡಿವೈಸ್​ಪಿ ಉಮಾರಾಣಿ ನೇತೃತ್ವದಲ್ಲಿ ಸಿಪಿಐ ಭರತ್ ಗೌಡ ಮತ್ತು ತಂಡ ಶೋಧ ಕಾರ್ಯದಲ್ಲಿ ನಿರತರಾಗಿದ್ದರು.

ಇದನ್ನೂ ಓದಿ: ಶಿವಗಂಗೆ ಬೆಟ್ಟದಲ್ಲಿ ಕಾಣೆಯಾದ ಟೆಕ್ಕಿ; ಅದ್ವೈತ್ ಬೆಟ್ಟ ಏರುತ್ತಿರುವ ಸಿಸಿಟಿವಿ ದೃಶ್ಯಾವಳಿ ಪತ್ತೆ!

ಅದ್ವೈತ್ ಉಪಾಧ್ಯಾಯನ ಪತ್ತೆಗೆ ಇಂದು ಕೂಡ ಡ್ರೋನ್ ಕಾರ್ಯಚರಣೆ, ನುರಿತರ ಕಾರ್ಯಚರಣೆ, ಎನ್​ಡಿ ಆರ್​ಎಫ್​ ಜೊತೆಗೆ ನೆಲಮಂಗಲ ವಲಯ ಅರಣ್ಯ ಸಿಬ್ಬಂದಿ ಕಾರ್ಯಚರಣೆ ನಡೆಸಿದರೂ ಆತನ ಸುಳಿವು ಮಾತ್ರ ಇನ್ನೂ ನಿಗೂಢವಾಗಿದೆ.

ಪ್ರಾಣ ಪಣಕ್ಕಿಟ್ಟು ಕಾರ್ಯಚರಣೆ: ಮಳೆ ಅಡ್ಡಿ

ಇಂದಿನ ಕಾರ್ಯಚರಣೆ ವೇಳೆ ಕಡಿದಾದ ಬೆಟ್ಟದ ಮೂಲೆ ಮೂಲೆಯಲ್ಲಿ ತನಿಖಾ ತಂಡ ತಮ್ಮ ಪ್ರಾಣವನ್ನ ಪಣಕ್ಕಿಟ್ಟು ಕಾರ್ಯಚರಣೆ ಮಾಡಿದ್ದು, ಅದ್ವೈತ್ ಆತ್ಮಹತ್ಯೆಗೆ ಶರಣಾಗಿದ್ದಾನಾ ಅಥವಾ ನಾಪತ್ತೆಯಾಗಿದ್ದಾನಾ ಎಂಬುವುದು ಮೇಲ್ನೋಟಕ್ಕೆ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್​​: ಆತ್ಮಹತ್ಯೆಯ ಯೋಚನೆ ಮಾಡಿದ್ದರಾ ಅದ್ವೈತ್ ಉಪಾಧ್ಯಾಯ?

ಒಟ್ಟಾರೆ ಶಿವಗಂಗೆ ಬೆಟ್ಟಕ್ಕೆ ಬಂದ ಟೆಕ್ಕಿ ಪತ್ತೆ ಕಾರ್ಯಚರಣೆ ಮೂರನೇ ದಿನದ ಕೂಡ ಯಶಸ್ವಿಯಾಗದೆ ಧಾರಾಕಾರ ಮಳೆಯಿಂದಾಗಿ ಬ್ರೇಕ್ ಹಾಕಬೇಕಾಯಿತು. ಅದ್ವೈತ್ ನಿಗೂಢ ನಾಪತ್ತೆ ಸದ್ಯ ಕಾರ್ಯಚರಣೆ ತಂಡಕ್ಕೆ ದೊಡ್ಡ ಸವಾಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಂಜುನಾಥ ಎಚ್​. ವಿ.

ಮಂಜುನಾಥ ಹೆಚ್ ವಿ. ಇವರು ಹುಟ್ಟಿದ್ದು ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದರು. 8 ವರ್ಷಗಳ ಕಾಲ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಆಗಿ ವೃತ್ತಿ ನಿರ್ವಹಿಸಿದ್ದು ಸಾಮಾಜಿಕವಾಗಿ ನ್ಯಾಯ ಒದಗಿಸುವ ಕೆಲಸವನ್ನ ಮಾಡಿದ್ದಾರೆ. ಕಳೆದ 9 ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಬೆಂಗಳೂರು ಹಾಗೂ ನೆಲಮಂಗಲ ಭಾಗದ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್, ಬುಕ್ ಹಾಗೂ ಪೇಪರ್ ಓದುವ ಹವ್ಯಾಸವಿದೆ.

Read More
Loading...
Unable to load recommendations.
Follow Us