ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಕಿರಣ ಸೋರಿಕೆ ಅಣುಕು ಪ್ರದರ್ಶನ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 20, 2023 | 7:51 PM

ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಡಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ವಿಕಿರಣ ಸೋರಿಕೆ ಸ್ಪಂದನ ಮತ್ತು ಮೌಲ್ಯೀಕರಣ ಬಗ್ಗೆ ಇಂದು ಜಿಲ್ಲಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ಜಿಲ್ಲಾ ವಿಪತ್ತು ನಿರ್ವಹಣೆ ತಂಡ ಹಾಗೂ ಏರ್ಪೋಟ್ ಸಿಬ್ಬಂದಿಯಿಂದ ಅಣಕು ಪ್ರದರ್ಶನ ಮಾಡಲಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಕಿರಣ ಸೋರಿಕೆ ಅಣುಕು ಪ್ರದರ್ಶನ
ವಿಕಿರಣ ಸೋರಿಕೆ ಅಣುಕು ಪ್ರದರ್ಶನ
Follow us on

ದೇವನಹಳ್ಳಿ, ಅಕ್ಟೋಬರ್​​ 20: ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಡಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಪ್ರಾಧಿಕಾರದ ವತಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ವಿಕಿರಣ ಸೋರಿಕೆ ಸ್ಪಂದನ ಮತ್ತು ಮೌಲ್ಯೀಕರಣ ಬಗ್ಗೆ ಇಂದು ಅಣುಕು ಪ್ರದರ್ಶನವನ್ನ ಹಮ್ಮಿಕೊಂಡಿದ್ದರು. ಕೆಂಪೇಗೌಡ ಏರ್ಪೋಟ್ ನ ಹಜ್‌ ಟರ್ಮಿನಲ್ ಸಮೀಪ‌ ಅನಿಲ ಸೋರಿಕೆ ವಿಪತ್ತನ್ನ ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಜಿಲ್ಲಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ಜಿಲ್ಲಾ ವಿಪತ್ತು ನಿರ್ವಹಣೆ ತಂಡ ಹಾಗೂ ಏರ್ಪೋಟ್ ಸಿಬ್ಬಂದಿಯಿಂದ ಅಣಕು ಪ್ರದರ್ಶನ ಮಾಡಿದರು.

ಅಣಕು ಪ್ರದರ್ಶನದಲ್ಲಿ ವಿಕಿರಣ‌ ಸೋರಿಕೆಯಾದರೆ ಹೇಗೆ ಎಂಬುದನ್ನು ಬಗ್ಗೆ ಸಿಬ್ಬಂದಿ ವಿಕಿರಣ ಸೋರಿಕೆಯಾದ ಸಂದರ್ಭ ಹೇಗಿರುತ್ತೆ ಅನ್ನೂ ಬಗ್ಗೆ ಕಣ್ಣಿಗೆ ಕಟ್ಟಿದಂತೆ ಅಣಕು ಪ್ರದರ್ಶ‌ನ ಮಾಡುವ ಮೂಲಕ ತೋರಿಸಿದರು.

ಅಲ್ಲದೆ ವಿಕಿರಣ ಸೋಸಿಕೆಯಾದಾಗ ಪ್ರಜ್ನೆತಪ್ಪುವ ಜನರನ್ನ ಹೇಗೆ ಆಸ್ವತ್ರೆಗೆ ಕಡಿಮೆ ಅವಧಿಯಲ್ಲಿ ಹೆಚ್ಚು ಮುತುವರ್ಜಿ ವಹಿಸಿ ಸಾಗಿಸಬೇಕು ಅನ್ನೂ ಬಗ್ಗೆಯು 08 ಕ್ಕೂ ಅಧಿಕ ಜನ ಆ್ಯಂಬುಲೇನ್ಸ್ ಮೂಲಕ ಅಣಕು ಪ್ರದರ್ಶನ ಮಾಡಿ ತೋರಿಸಿದರು.

ಇದನ್ನೂ ಓದಿ: ಪಾಕಿಸ್ತಾನ-ಆಸ್ಟ್ರೇಲಿಯಾ ಕ್ರಿಕೆಟ್‌ ಪಂದ್ಯ: ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರ ಊಟದಲ್ಲಿ ಹುಳ ಪತ್ತೆ

ಈ ಸಂದರ್ಭದಲ್ಲಿ ವಿಕಿರಣವನ್ನು ಹೊರತೆಗೆಯಲು ಮತ್ತು ವಿಕಿರಣವು ಯಾವ ಪ್ರಮಾಣದಲ್ಲಿ ಹೊರ ಸೂಸುತ್ತಿದೆ ಎಂಬುದನ್ನು ಪರಿಶೀಲಿಸಲು ಜಿಲ್ಲಾ ಅಣು ಶಕ್ತಿ ಕೇಂದ್ರದ ವಿಜ್ಞಾನಿಗಳು ಎನ್​ಡಿಆರ್​ಎಸ್​ ತಂಡ ವಿಕಿರಣ ಪಸರಿಸದಂತೆ ಕೆಂಪು ಪಟ್ಟಿಯ ಮೂಲಕ ಸುತ್ತಲಿನ ಪ್ರದೇಶವನ್ನು ತಾತ್ಕಾಲಿಕ ತಡೆಗೋಡೆಯಾಗಿ ನಿರ್ಮಿಸಿ ನಿಷೇಧಿತ ಪ್ರದೇಶ ಘೋಷಿಸುವುದು ಸ್ಥಳಿಯರನ್ನ ಸ್ಥಳಾಂತರ ಮಾಡುವ ಬಗ್ಗೆಯು ಟ್ರಯಲ್ ನಡೆಸಿದರು.

ಜೊತೆಗೆ ಇಂತಹ ಅನಾಹುತಗಳು ಎದುರಾದಾಗ ಅದನ್ನ 15 ನಿಮಿಷದಲ್ಲೆ ನಿಯಂತ್ರಿಸುವುದು ಹೇಗೆ ಅನ್ನೂ ಬಗ್ಗೆಯು ತಜ್ನರು ಹಾಗೂ ಸಿಬ್ಬಂದಿ ಮಾಡಿ ತೋರಿಸಿಕೊಟ್ಟರು. ಇನ್ನೂ ಅಣಕು ಪ್ರದರ್ಶ‌ದ ಕಾರ್ಯಾಚರಣೆಯಲ್ಲಿ ಎನ್​ಡಿಆರ್​ಎಫ್ ತಂಡ, ಡಿ.ಐ.ಎಫ್(DIF), ಅಗ್ನಿಶಾಮಕ(FIRE), ಆರ್ಮಿ(ARMY), ಎರ್ ಫೋರ್ಸ್(AIRFORCE), ಎನ್​ಡಿಆರ್​ಎಸ್ ತಂಡಗಳು ಭಾಗವಹಿಸಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.