ನೆಲಮಂಗಲದಲ್ಲಿ ಹೃದಯ ವಿದ್ರಾವಕ ಘಟನೆ: ನೀರಿನ ಹಂಡೆಯಲ್ಲಿ ಮುಳುಗಿಸಿ 45 ದಿನದ ಮಗು ಕೊಂದ ತಾಯಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ನಾಗಕಲ್ಲು ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದೆ. ತನ್ನ 45 ದಿನದ ಗಂಡು ಮಗುವನ್ನು ತಾಯಿಯೇ ಕೊಲೆ ಮಾಡಿದ್ದಾರೆ. ಬಡತನ ಮತ್ತು ಪತಿ ಕುಡಿತದ ಚಟಕ್ಕೆ ಒಳಗಾಗಿದ್ದು, ಆರೈಕೆ ಮಾಡಲು ಸಾಧ್ಯವಾಗದ ಹಿನ್ನಲೆ ಮಗು ಕೊಲೆ ಮಾಡಲಾಗಿದೆ.

ನೆಲಮಂಗಲದಲ್ಲಿ ಹೃದಯ ವಿದ್ರಾವಕ ಘಟನೆ: ನೀರಿನ ಹಂಡೆಯಲ್ಲಿ ಮುಳುಗಿಸಿ 45 ದಿನದ ಮಗು ಕೊಂದ ತಾಯಿ
ತಾಯಿ ರಾಧೆ

Updated on: Jul 07, 2025 | 3:23 PM

ನೆಲಮಂಗಲ, ಜುಲೈ 07: 45 ದಿನದ ಗಂಡು ಮಗುವನ್ನು ತಾಯಿಯೇ (mother) ಕೊಲೆ (kill) ಮಾಡಿರುವಂತಹ ಹೃದಯ ವಿದ್ರಾವಕ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ನಾಗಕಲ್ಲು ಗ್ರಾಮದಲ್ಲಿ ನಡೆದಿದೆ. ಸದ್ಯ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಾಯಿ ರಾಧೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಗಿದ್ದೇನು?

ಪವನ್ ಹಾಗೂ ರಾಧೆ ದಂಪತಿ ನಾಗಕಲ್ಲು ಗ್ರಾಮದ ನಿವಾಸಿಗಳು. ಪವನ್ ಮನೆ ನಿಭಾಯಿಸಲು ಸಾಧ್ಯವಾಗದೇ ಕುಡಿತದ ಚಟಕ್ಕೆ ಒಳಗಾಗಿದ್ದ. ಬಡತನ ಹಾಗೂ ಮಗುವಿನ ಆರೈಕೆ ಕಷ್ಟವಾದ ಹಿನ್ನೆಲೆ ತಡರಾತ್ರಿ ಮಗುವನ್ನು ನೀರು ಕಾಯಿಸುವ ಹಂಡೆಯಲ್ಲಿ ಮುಳುಗಿಸಿ ಹೆತ್ತ ತಾಯಿ ರಾಧೆ ಕೊಲೆ ಮಾಡಿದ್ದಾರೆ.

ಟಿಪ್ಪರ್ ಡಿಕ್ಕಿ: ಚಕ್ರಕ್ಕೆ ಸಿಲುಕಿ ಓರ್ವ ಸವಾರ ಸಾವು

ದೇವನಹಳ್ಳಿ ಹೊರವಲಯದ ಏರ್ಪೋಟ್ ರಸ್ತೆಯ ಭುವನಹಳ್ಳಿ ಗೇಟ್ ಬಳಿಯ ಹೆದ್ದಾರಿಯಲ್ಲಿ ಟಿಪ್ಪರ್​ಗಳಿಗೆ ಅಮಾಯಕರು ಬಲಿ ಆಗುತ್ತಿದ್ದಾರೆ. ಎರಡು ಬೈಕ್​​ಗಳಿಗೆ ಟಿಪ್ಪರ್ ಡಿಕ್ಕಿ ಹೊಡೆದು ಒಂದು ಬೈಕ್​​ನಲ್ಲಿದ್ದವರು ಅಪಾಯದಿಂದ ಪಾರಾದರೆ, ಮತ್ತೊಂದು ಬೈಕ್​ನಲ್ಲಿದ್ದ ಓರ್ವ ವ್ಯಕ್ತಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದು, ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ. ಮೃತನ ಗುರುತು ಪತ್ತೆಯಾಗಿಲ್ಲ.

ಇದನ್ನೂ ಓದಿ
ಸರ್ಕಾರಿ ನೌಕರಿ ಆಮಿಷವೊಡ್ಡಿ 200 ರೂ. ಪಡೆದಿದ್ದವ 30 ವರ್ಷ ನಂತರ ಅರೆಸ್ಟ್
ಪತ್ನಿಯ ಕುತ್ತಿಗೆ, ಮುಖಕ್ಕೆ 20 ಕ್ಕೂ ಹೆಚ್ಚು ಬಾರಿ ಇರಿದು ಕೊಂದ ಪತಿ
ಶಿವಮೊಗ್ಗದಲ್ಲಿ ಹಿಂದೂ ದೇವರಿಗೆ ಅಪಮಾನ: ಇಬ್ಬರು ಕಿಡಿಗೇಡಿಗಳು ಅಂದರ್
ಗೆಳತಿಯ ಪತಿಯನ್ನು ಕೊಲೆ ಮಾಡಿದ ಶಾಲಾ ವಾಹನ ಚಾಲಕ? ಅನೈತಿಕ ಸಂಬಂಧ ಶಂಕೆ

ರಸ್ತೆ ಮದ್ಯದ ಡಿವೈಡರ್​​ಗೆ ಬೈಕ್ ಡಿಕ್ಕಿ: ಸವಾರ ಸಾವು

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ರಸ್ತೆ ಮದ್ಯದ ಡಿವೈಡರ್​​ಗೆ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ದಾರುಣ ಘಟನೆ ಇತ್ತೀಚೆಗೆ ನಡೆದಿತ್ತು. ಬೈಕ್ ಸವಾರನನ್ನು ಬಸವನಬಾಗೇವಾಡಿ ಪಟ್ಟಣದ ನಿವಾಸಿ ವಿರೇಶ ಹಿರೇಮಠ (19) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಸರ್ಕಾರಿ ನೌಕರಿ ಕೊಡಿಸುತ್ತೇನೆಂದು 200 ರೂ. ಪಡೆದಿದ್ದವ 30 ವರ್ಷಗಳ ನಂತರ ಅರೆಸ್ಟ್! ಶಿರಸಿಯಲ್ಲೊಂದು ಅಪರೂಪದ ಪ್ರಕರಣ

ಇನ್ನು ಘಟನೆಯಲ್ಲಿ ಹಿಂಬದಿ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಬೈಕ್ ವೇಗವಾಗಿ ಚಾಲನೆ ಮಾಡಿದ್ದೇ ಘಟನೆಗೆ ಕಾರಣವೆನ್ನಲಾಗಿದೆ. ವೇಗವಾಗಿ ಬೈಕ್ ಚಲಾಯಿಸುವ ವೇಳೆ ನಿಯಂತ್ರಣ ತಪ್ಪಿದ ಬೈಕ್ ಡಿವೈಡರ್​​ಗೆ ಡಿಕ್ಕಿಯಾಗಿತ್ತು.

ಇದನ್ನೂ ಓದಿ: ಗೆಳತಿಯ ಪತಿಯನ್ನು ಕೊಲೆ ಮಾಡಿದ ಶಾಲಾ ವಾಹನ ಚಾಲಕ? ಅನೈತಿಕ ಸಂಬಂಧ ಶಂಕೆ

ಸ್ಥಳಕ್ಕೆ ಬಸವನಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ನಡೆಸಿದ್ಧಾರೆ. ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:00 pm, Mon, 7 July 25