ಫೀಲ್ಡಿಗಿಳಿದ ನೆಲಮಂಗಲ- ಆನೇಕಲ್ ಪೊಲೀಸರು: ನೂರಾರು ರೌಡಿಗಳು ಅಂದರ್; ವಿಶಾಲ ಮೈದಾನಗಳಲ್ಲಿ ಪರೇಡ್
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ರೌಡಿಗಳನ್ನು ಹಡೆಮುರಿಗೆ ಕಟ್ಟಲು ಪೊಲೀಸರು ಫೀಲ್ಡ್ಗೆ ಇಳಿದಿದ್ದಾರೆ. ನೆಲಮಂಗಲ ಉಪವಿಭಾಗದ 5 ಠಾಣೆ ವ್ಯಾಪ್ತಿಯ 150ಕ್ಕೂ ಹೆಚ್ಚು ರೌಡಿಗಳು ವಶಕ್ಕೆ ಪಡೆದಿದ್ದಾರೆ. ರೌಡಿಗಳ ಮನೆಗಳ ಮೇಲೆ ದಾಳಿ, ಶೋಧ ಇನ್ನೂ ಮುಂದುವರಿದಿದೆ. ಇಂದು ಬೆಳಗಿನ ಜಾವ ಈ ಐದು ಠಾಣಾ ವ್ಯಾಪ್ತಿಗಳಲ್ಲಿ ವಾಸಿಸುತ್ತಿರುವ ರೌಡಿಶೀಟರ್‌ಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಸಮಾಜಘಾತುಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. […]
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ರೌಡಿಗಳನ್ನು ಹಡೆಮುರಿಗೆ ಕಟ್ಟಲು ಪೊಲೀಸರು ಫೀಲ್ಡ್ಗೆ ಇಳಿದಿದ್ದಾರೆ. ನೆಲಮಂಗಲ ಉಪವಿಭಾಗದ 5 ಠಾಣೆ ವ್ಯಾಪ್ತಿಯ 150ಕ್ಕೂ ಹೆಚ್ಚು ರೌಡಿಗಳು ವಶಕ್ಕೆ ಪಡೆದಿದ್ದಾರೆ. ರೌಡಿಗಳ ಮನೆಗಳ ಮೇಲೆ ದಾಳಿ, ಶೋಧ ಇನ್ನೂ ಮುಂದುವರಿದಿದೆ.
ಇಂದು ಬೆಳಗಿನ ಜಾವ ಈ ಐದು ಠಾಣಾ ವ್ಯಾಪ್ತಿಗಳಲ್ಲಿ ವಾಸಿಸುತ್ತಿರುವ ರೌಡಿಶೀಟರ್‌ಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಸಮಾಜಘಾತುಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಭಾಗದ ಮಾದನಾಯಕನಹಳ್ಳಿ, ನೆಲಮಂಗಲ ಟೌನ್, ನೆಲಮಂಗಲ ಗ್ರಾಮಾಂತರ, ದಾಬಸ್‌ಪೇಟೆ, ತ್ಯಾಮಗೊಂಡ್ಲು ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ದಾಳಿ ನಡೆದಿದೆ.
ನೆಲಮಂಗಲ ಉಪವಿಭಾಗದ ಪೊಲೀಸರು 150ಕ್ಕೂ ಹೆಚ್ಚು ರೌಡಿಗಳನ್ನು ವಶಕ್ಕೆ ಪಡೆದಿದ್ದಾರೆ. ಕಡಬಗೆರೆ ಶ್ರೀನಿವಾಸ ಅಲಿಯಾಸ್ ಸೀನ, ಬೆತ್ತನಗೆರೆ ಮಂಜ, ಮಾಚೋಹಳ್ಳಿಯ ರಾಘವೇಂದ್ರ ಅಲಿಯಾಸ್ ಹಂಡೆ ರಘು, ದಿಲೀಪ್ ಸೇರಿದಂತೆ 150ಕ್ಕೂ ಹೆಚ್ಚು ರೌಡಿಗಳು ಅಂದರ್ ಆಗಿದ್ದಾರೆ. ಪೋಲಿಸರು, ಜಿಲ್ಲಾ ಸಶಸ್ತ್ರ ಮೀಸಲು ಪಡೆ ವಾಹನಗಳಲ್ಲಿ ರೌಡಿಗಳನ್ನ ಎಳೆದು ತಂದಿದ್ದಾರೆ. 9 ಗಂಟೆಗೆ ನೆಲಮಂಗಲ ಆಟದ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಯಲಿದೆ.
ಬೆಳಗ್ಗೆ 4 ಗಂಟೆಯಲ್ಲಿ ರೌಡಿಗಳ ಮನೆಗಳಿಗೆ ನುಗ್ಗಿ, ಕಾರ್ಯಾಚರಣೆ ನಡೆಸಿದ ಆನೇಕಲ್ ಪೊಲೀಸರು:
ಆನೇಕಲ್ ಉಪವಿಭಾಗ ವ್ಯಾಪ್ತಿಯಲ್ಲಿನ 7 ಪೊಲೀಸ್ ಠಾಣೆಗಳ ಪೊಲೀಸರು ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ರೌಡಿಗಳ ಮನೆಗಳಿಗೆ ನುಗ್ಗಿ, ಕಾರ್ಯಾಚರಣೆ ನಡೆಸಿದ್ದಾರೆ. ಪ್ರಸ್ತುತ ಸಕ್ರಿಯವಾಗಿರುವ ರೌಡಿಗಳನ್ನು ನಿದ್ದೆಯಿಂದ ಎಬ್ಬಿಸಿ, ಠಾಣೆಗೆ ಎಳೆತಂದಿದ್ದಾರೆ.
ಆನೇಕಲ್, ಅತ್ತಿಬೆಲೆ, ಸರ್ಜಾಪುರ, ಜಿಗಣಿ, ಬನ್ನೇರುಘಟ್ಟ, ಅತ್ತಿಬೆಲೆ ಹಾಗೂ ಸೂರ್ಯ ನಗರ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಇತ್ತೀಚೆಗೆ ಮತ್ತೆ ಬಾಲ ಬಿಚ್ಚುತ್ತಿದ್ದ ರೌಡಿಗಳು ಮನೆಗಳಲ್ಲಿ ಮಾರಾಕಾಸ್ತ್ರಗಳು ಹಾಗೂ ಮಾದಕ ವಸ್ತುಗಳನ್ನಿಟ್ಟುಕೊಂಡಿರುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಎಲ್ಲಾ ರೌಡಿಗಳನ್ನು ಹೆಬ್ಬಗೋಡಿ ಠಾಣೆಯಲ್ಲಿ ಪರೇಡ್ ನಡೆಸಲಾಗುತ್ತಿದೆ.
ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಸೈಲೆಂಟ್ ಸುನಿಲ ಸೇರಿದಂತೆ 45 ರೌಡಿಶೀಟರ್ಸ್ ಮನೆಗಳ ಮೇಲೆ ಸಿಸಿಬಿ ಪೊಲೀಸರ ರೇಡ್
(nelamangala sub division police raid on rowdy sheeter house more than 150 rowdies taken in to custody in nelamangala)
Published On - 8:04 am, Tue, 3 August 21