Temple Theft: ಗ್ರಾಮಸ್ಥರನ್ನು ನೋಡುತ್ತಿದ್ದಂತೆ ಕಾಲ್ಕಿತ್ತ ಖದೀಮರು, ದೇವರ ಹಣ ಸೇಫ್

Temple Theft: ಗ್ರಾಮಸ್ಥರನ್ನು ನೋಡುತ್ತಿದ್ದಂತೆ ಕಾಲ್ಕಿತ್ತ ಖದೀಮರು, ದೇವರ ಹಣ ಸೇಫ್
ಬಿಲ್ಲಿನಕೋಟೆಯ ಶ್ರೀ ತಿರುಮಲ ವೆಂಕಟೇಶ್ವರಸ್ವಾಮಿ ದೇಗುಲ

ಬಿಲ್ಲಿನಕೋಟೆಯ ಶ್ರೀ ತಿರುಮಲ ವೆಂಕಟೇಶ್ವರಸ್ವಾಮಿ ದೇಗುಲದಲ್ಲಿ ಕೂಡ ಕಳ್ಳತನ ಪ್ರಯತ್ನ ನಡೆದಿದೆ. ಖದೀಮರು ದೇವಾಲಯದಲ್ಲಿ ಬೀಗ ಹೊಡೆದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಆದ್ರೆ ಸರಿಯಾದ ಸಮಯಕ್ಕೆ ಬಂದ ಗ್ರಾಮಸ್ಥರಿಂದ ದೇವರ ಹಣ, ಒಡುವೆ ಸೇಫ್ ಆಗಿದೆ.

TV9kannada Web Team

| Edited By: Ayesha Banu

Aug 03, 2021 | 2:31 PM

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬಿಲ್ಲಿನಕೋಟೆಯ ಶ್ರೀ ತಿರುಮಲ ವೆಂಕಟೇಶ್ವರಸ್ವಾಮಿ ದೇಗುಲದಲ್ಲಿ ಕಳ್ಳತನಕ್ಕೆ ಯತ್ನ ನಡೆದಿದ್ದು ಗ್ರಾಮಸ್ಥರನ್ನು ಕಂಡ ತಕ್ಷಣ ಇಬ್ಬರು ದುಷ್ಕರ್ಮಿಗಳು ಪರಾರಿಯಾದ ಘಟನೆ ನಡೆದಿದೆ. ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ಕಳ್ಳರ ಕೈಚಳಕ ಪ್ರಕರಣಗಳು ಹೆಚ್ಚಾಗುತ್ತಿವೆ. ದೇವಸ್ಥಾನದಲ್ಲಿ ಕಳ್ಳತನ, ಸರಗಳ್ಳತನದಂತಹ ಘಟನೆಗಳು ನಡೆಯುತ್ತಲೇ ಇವೆ. ಇದೇ ರೀತಿ ಬಿಲ್ಲಿನಕೋಟೆಯ ಶ್ರೀ ತಿರುಮಲ ವೆಂಕಟೇಶ್ವರಸ್ವಾಮಿ ದೇಗುಲದಲ್ಲಿ ಕೂಡ ಕಳ್ಳತನ ಪ್ರಯತ್ನ ನಡೆದಿದೆ. ಖದೀಮರು ದೇವಾಲಯದಲ್ಲಿ ಬೀಗ ಹೊಡೆದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಆದ್ರೆ ಸರಿಯಾದ ಸಮಯಕ್ಕೆ ಬಂದ ಗ್ರಾಮಸ್ಥರಿಂದ ದೇವರ ಹಣ, ಒಡುವೆ ಸೇಫ್ ಆಗಿದೆ. ಗ್ರಾಮಸ್ಥರನ್ನು ನೋಡುತ್ತಿದ್ದಂತೆ ಖದೀಮರು ಕಾಲ್ಕಿತ್ತಿದ್ದಾರೆ.

ಸೈಯದ್ ನಾಸಿರ್ ಸೆರೆ ಇನ್ನು ಮತ್ತೊಂದೆಡೆ ರೌಡಿ ಚಟುವಟಿಕೆಯಲ್ಲಿ ತೊಡಗಿದ್ದ ಸೈಯದ್ ನಾಸಿರ್ನನ್ನು ಗೂಂಡಾ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಾಸಿರ್ ಬೆಂಗಳೂರಿನ ಶಿವಾಜಿನಗರ ಪೊಲೀಸ್ ಠಾಣೆ ರೌಡಿಶೀಟರ್. ಕಳೆದ ಒಂಬತ್ತು ವರ್ಷದಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಒಟ್ಟು ಹನ್ನೊಂದು ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.

ಇದನ್ನೂ ಓದಿ: ಯಾದಗಿರಿ: ಪ್ರವಾಹದಿಂದ ಹಾಳಾದ ಉದ್ಯಾನವನಕ್ಕೆ ಹೈಟೆಕ್ ಟಚ್; 50 ಲಕ್ಷ ರೂ. ಅನುದಾನದಲ್ಲಿ ಸಿದ್ಧವಾಗುತ್ತಿದೆ ಲುಂಬಿನಿ ವನ

Follow us on

Related Stories

Most Read Stories

Click on your DTH Provider to Add TV9 Kannada