ಯಾದಗಿರಿ: ಪ್ರವಾಹದಿಂದ ಹಾಳಾದ ಉದ್ಯಾನವನಕ್ಕೆ ಹೈಟೆಕ್ ಟಚ್; 50 ಲಕ್ಷ ರೂ. ಅನುದಾನದಲ್ಲಿ ಸಿದ್ಧವಾಗುತ್ತಿದೆ ಲುಂಬಿನಿ ವನ

ಯಾದಗಿರಿ: ಪ್ರವಾಹದಿಂದ ಹಾಳಾದ ಉದ್ಯಾನವನಕ್ಕೆ ಹೈಟೆಕ್ ಟಚ್; 50 ಲಕ್ಷ ರೂ. ಅನುದಾನದಲ್ಲಿ ಸಿದ್ಧವಾಗುತ್ತಿದೆ ಲುಂಬಿನಿ ವನ
ಪ್ರವಾಹದಿಂದ ಹಾಳಾದ ಉದ್ಯಾನವನಕ್ಕೆ ಹೈಟೆಕ್ ಟಚ್

ಕಳೆದ ವರ್ಷವೇ ಕಾಮಗಾರಿ ಮಾಡಬೇಕಾಗಿತ್ತು. ಆದರೆ ಕೊವಿಡ್ ಇರುವ ಕಾರಣಕ್ಕೆ ಉದ್ಯಾನವ ಬಂದ್ ಮಾಡಲಾಗಿತ್ತು. ಜೊತೆಗೆ ಕೆಲಸ ಮಾಡಲು ಯಾರು ಕಾರ್ಮಿಕರು ಸಹ ಸಿಕ್ಕಿಲ್ಲ. ಇದೆ ಕಾರಣದಿಂದ ಈಗ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ.ಆರ್ ತಿಳಿಸಿದ್ದಾರೆ.

TV9kannada Web Team

| Edited By: preethi shettigar

Aug 03, 2021 | 1:55 PM

ಯಾದಗಿರಿ: ಆರು ವರ್ಷಗಳ ಬಳಿಕ ಯಾದಗಿರಿ ಜಿಲ್ಲೆಗೊಂದು ದೊಡ್ಡ ಉದ್ಯಾನವನ ನಿರ್ಮಾಣ ಮಾಡಲಾಗಿತ್ತು. ಹೀಗಾಗಿ ಜಿಲ್ಲೆಯ ಜನರು ಅತ್ಯಂತ ಖುಷಿಯಿಂದ ಈ ಉದ್ಯಾನವನಕ್ಕೆ ಭೇಟಿ ನೀಡುತ್ತಿದ್ದರು. ಆದರೆ ಕಳೆದ ವರ್ಷ ಉಂಟಾದ ಪ್ರವಾಹದಿಂದ ಇಡೀ ಉದ್ಯಾನವನವೇ ಮುಳುಗಡೆಯಾಗಿ ಸಂಪೂರ್ಣ ಹಾಳಾಗಿ ಹೋಗಿತ್ತು. ಹೀಗಾಗಿ ಜನ ಒಂದು ವರ್ಷಗಳ ಕಾಲ ಉದ್ಯಾನವನದ ಕಡೆ ತಿರುಗಿ ಸಹ ನೋಡಿಲ್ಲ. ಈಗ ಮತ್ತೆ ಹಾಳಾಗಿದ್ದ ಉದ್ಯಾನವನಕ್ಕೆ ಅಧಿಕಾರಿಗಳು ಹೊಸ ರೂಪುರೇಶೆ ನೀಡಿದ್ದು, ಸಾರ್ವಜನಿಕರ ಸಂತೋಷಕ್ಕೆ ಮತ್ತೆ ಅವಕಾಶ ಸಿಕ್ಕಂತ್ತಾಗಿದೆ.

ಯಾದಗಿರಿ ಜಿಲ್ಲೆ ರಚನೆಯಾಗಿ 11 ವರ್ಷಗಳು ಕಳೆಯುತ್ತ ಬಂದಿದೆ. ಆದರೆ ಯಾದಗಿರಿ ಜಿಲ್ಲೆಯ ಜನರಿಗೆ ಇರುವುದು ಒಂದೇ ಉದ್ಯಾನವನ ಅದುವೇ ಯಾದಗಿರಿ ನಗರದಲ್ಲಿರುವ ಲುಂಬಿನಿ ವನ. ಜನರು ಬೇಸರ ಕಳೆಯಬೇಕಾದರೆ ಇದೆ ಉದ್ಯಾನವನಕ್ಕೆ ಬರುತ್ತಾರೆ. ಆದರೆ ಕಳೆದ ವರ್ಷ ಉಂಟಾದ ಪ್ರವಾಹದಿಂದ ಇಡೀ ಉದ್ಯಾನವನವೇ ಸಂಪೂರ್ಣವಾಗಿ ಹಾಳಾಗಿ ಹೋಗಿತ್ತು. ಪ್ರವಾಹದ ನೀರು ಇಡೀ ಉದ್ಯಾನವನ ಒಳಗೆ ನುಗ್ಗಿ ಇರುವಂತ ಎಲ್ಲಾ ಗಿಡಗಳು, ಆಟಿಕೆ ವಸ್ತುಗಳು ಹಾಳಾಗಿ ಹೋಗಿದ್ದವು.

ಜಿಲ್ಲಾಡಳಿತದಿಂದ ನೂತನ ಯೋಜನೆ ಇದರ ಮಧ್ಯದಲ್ಲಿ ಬಂದ ಕೊರೊನಾ ಮಹಾಮಾರಿ ಕೂಡ ಯಾದಗಿರಿ ಜನ ಒಂದು ವರ್ಷ ಇತ್ತ ಬರದಂತೆ ಮಾಡಿತ್ತು. ಆದರೆ ಮತ್ತೆ ಯಾದಗಿರಿ ಜನರನ್ನು, ಉದ್ಯಾನವನದತ್ತ ಸೆಳೆಯಲು ಜಿಲ್ಲಾಡಳಿತ ಹೋದ ಯೋಜನೆ ಮಾಡಿದೆ. ಇದೆ ಕಾರಣದಿಂದ ಉದ್ಯಾನವನದಲ್ಲಿ ಮರು ಕಾಮಗಾರಿ ನಡೆದಿದೆ. ಇಡೀ ಉದ್ಯಾನವನದ ಸೌಂದರ್ಯ ಹೆಚ್ಚಿಸಲು ವಿಭಿನ್ನ ರೀತಿಯಲ್ಲಿ ಜಿಲ್ಲಾಡಳಿತ ಸಿದ್ಧ ಮಾಡುತ್ತಿದ್ದು, ಉದ್ಯಾನವನದಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಖುಷಿ ತಂದಿದೆ ಎಂದು ಯಾದಗಿರಿ ನಿವಾಸಿ ವಿರುಪಾಕ್ಷಯ್ಯ ತಿಳಿಸಿದ್ದಾರೆ.

park

ಲುಂಬಿನಿ ವನ

ಉದ್ಯಾನವನಕ್ಕೆ ಹುಲ್ಲಿನ ಹಾಸಿಗೆ ಸುಮಾರು 50 ಲಕ್ಷ ರೂ. ಅನುದಾನದಲ್ಲಿ ಉದ್ಯಾನವದ ಚಿತ್ರಣವನ್ನು ಬದಲಿಸುವ ಕೆಲಸ ನಡೆದಿದೆ. ಇಡೀ ಉದ್ಯಾನವನದ ತುಂಬ ಹುಲ್ಲಿನ ಹಾಸಿಗೆ ಹಾಕಲಾಗುತ್ತಿದೆ. ಜೊತೆಗೆ ಪ್ರವಾಹದಿಂದ ಗಿಡಗಳು ಕೊಚ್ಚಿಕೊಂಡು ಹೋಗಿದ್ದರಿಂದ ಹೊಸ ಬಗೆಯ ಗಿಡಗಳನ್ನು ಹಾಕಲಾಗುತ್ತಿದೆ. ಇನ್ನು ಮಕ್ಕಳು ಆಟವಾಡಲು ಬಳಸುತ್ತಿದ್ದ ಆಟಿಕೆ ವಸ್ತುಗಳು ಸಹ ಹಾಳಾಗಿ ಹೋಗಿದ್ದವು, ಇದೆ ಕಾರಣದಿಂದ ಹೊಸ ಆಟಿಕೆ ವಸ್ತುಗಳನ್ನು ಉದ್ಯಾನವನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಉದ್ಯಾನವನದ ಸುತ್ತ ಮಕ್ಕಳನ್ನು ಸೆಳೆಯಲು ದೊಡ್ಡ ಗಾತ್ರದ ಆನೆ, ಜಿಂಕೆ, ಜಿರಾಫೆ, ಹುಲಿ ಸೇರಿದಂತೆ ನಾನಾ ರೀತಿ ಕಾಡು ಪ್ರಾಣಿಗಳ ಮೂರ್ತಿಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಇದೆ ಕಾರಣದಿಂದ ಈಗ ಉದ್ಯಾನವದಲ್ಲಿ ಕೆಲಸಗಳು ನಡೆಯುತ್ತಿದ್ದರೂ ಸಹ ಯಾದಗಿರಿ ಜನ ಉದ್ಯಾನವನದತ್ತ ಧಾವಿಸುತ್ತಿದ್ದಾರೆ.

ಕಳೆದ ವರ್ಷವೇ ಕಾಮಗಾರಿ ಮಾಡಬೇಕಾಗಿತ್ತು. ಆದರೆ ಕೊವಿಡ್ ಇರುವ ಕಾರಣಕ್ಕೆ ಉದ್ಯಾನವ ಬಂದ್ ಮಾಡಲಾಗಿತ್ತು. ಜೊತೆಗೆ ಕೆಲಸ ಮಾಡಲು ಯಾರು ಕಾರ್ಮಿಕರು ಸಹ ಸಿಕ್ಕಿಲ್ಲ. ಇದೆ ಕಾರಣದಿಂದ ಈಗ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ.ಆರ್ ತಿಳಿಸಿದ್ದಾರೆ.

ವರದಿ: ಅಮೀನ್ ಹೊಸುರ್

ಇದನ್ನೂ ಓದಿ: ಪ್ಲಾಸ್ಟಿಕ್​ ಬಾಟಲ್, ಒಡೆದ ಕೋಳಿ ಮೊಟ್ಟೆಯಲ್ಲಿ ಅರಳಿದ ಹಸಿರು; ಮನೆಯಲ್ಲಿಯೇ ನಿರ್ಮಾಣವಾಗಿದೆ ಸುಂದರ ಉದ್ಯಾನವನ

ಕಪ್ಪತ್ತಗುಡ್ಡ ಸೆರಗಿನಲ್ಲಿ ರೋಮಾಂಚನಕಾರಿ ಅನುಭವ ನೀಡುವ ಜಿಪ್ ಲೈನ್; ಮನಸೋತ ಪ್ರವಾಸಿಗರು

Follow us on

Related Stories

Most Read Stories

Click on your DTH Provider to Add TV9 Kannada