AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂ. ವಿವಿಯಲ್ಲಿ ಖಾಲಿ 20 ಬ್ಯಾಕ್ ಲಾಗ್ ಹುದ್ದೆಗಳನ್ನ ಈ ಮಾಸಾಂತ್ಯ ಭರ್ತಿ ಮಾಡಿಕೊಳ್ಳಲು ಖಡಕ್ ಸೂಚನೆ

Recruitment backlog: ಬ್ಯಾಕ್ ಲಾಗ್ ಹುದ್ದೆ ಭರ್ತಿ ಹಿಂದೇಟು ಹಾಕುತ್ತಿರುವ ಹಿನ್ನೆಲೆ, ಈ ಕುರಿತು ಸಮಾಜ ಕಲ್ಯಾಣ ಇಲಾಖೆಗೆ ಕರ್ನಾಟಕ ಸಮತಾ ಸೈನಿಕ ದಳ ದೂರು ನೀಡಿತ್ತು. ಇದರನ್ವರ ತ್ವರಿತ ಗತಿಯಲ್ಲಿ ಬ್ಯಾಕ್ ಲಾಗ್ ಭರ್ತಿಗೆ ಸೂಚನೆ ನೀಡಲಾಗಿದೆ.

ಬೆಂ. ವಿವಿಯಲ್ಲಿ ಖಾಲಿ 20 ಬ್ಯಾಕ್ ಲಾಗ್ ಹುದ್ದೆಗಳನ್ನ ಈ ಮಾಸಾಂತ್ಯ ಭರ್ತಿ ಮಾಡಿಕೊಳ್ಳಲು ಖಡಕ್ ಸೂಚನೆ
ಬೆಂ. ವಿವಿಯಲ್ಲಿ ಖಾಲಿ 20 ಬ್ಯಾಕ್ ಲಾಗ್ ಹುದ್ದೆಗಳನ್ನ ಈ ಮಾಸಾಂತ್ಯ ಭರ್ತಿ ಮಾಡಿಕೊಳ್ಳಲು ಖಡಕ್ ಸೂಚನೆ
TV9 Web
| Updated By: ಸಾಧು ಶ್ರೀನಾಥ್​|

Updated on: Aug 04, 2021 | 10:14 AM

Share

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು 3 ತಿಂಗಳೊಳಗೆ ಭರ್ತಿ ಮಾಡಿಕೊಳ್ಳುವಂತೆ ಬೆಂಗಳೂರು ವಿವಿ ಕುಲಪತಿಗೆ (vice chancellor -VC) ಸಮಾಜ ಕಲ್ಯಾಣ ಇಲಾಖೆ ಸೂಚನೆ ನೀಡಿದೆ. ಆಗಸ್ಟ್ ಅಂತ್ಯದೊಳಗೆ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ನೀಡಲು ಇಲಾಖೆ ಆದೇಶ ನೀಡಿದೆ.

ಬೆಂ. ವಿವಿಯಲ್ಲಿ (Bangalore University -BU) ಖಾಲಿ ಇರುವ 20 ಬ್ಯಾಕ್ ಲಾಗ್ ಹುದ್ದೆಗಳನ್ನ 3 ತಿಂಗಳೊಳಗೆ ಭರ್ತಿ ಮಾಡಿ, ವರದಿ ನೀಡುವಂತೆ ಏ. 15ರಂದೇ ಸೂಚಿಸಲಾಗಿತ್ತು. ಸಮಾಜ ಕಲ್ಯಾಣ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿತ್ತು. ಭರ್ತಿ ಮಾಡಲು ಜೂ. 14 ರಂದು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಈವರೆಗೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಹೀಗಾಗಿ ಈ ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಕಾಯ್ದೆ 1990ರ ಸೆಕ್ಷನ್ 5 ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಸಮಾಜ ಕಲ್ಯಾಣ ಇಲಾಖೆಯು ಬೆಂ. ವಿವಿ ಕುಲಪತಿಗೆ ಎಚ್ಚರಿಕೆ ನೀಡಿದೆ.

ಬ್ಯಾಕ್ ಲಾಗ್ ಹುದ್ದೆ ಭರ್ತಿ ಹಿಂದೇಟು ಹಾಕುತ್ತಿರುವ ಹಿನ್ನೆಲೆ, ಈ ಕುರಿತು ಸಮಾಜ ಕಲ್ಯಾಣ ಇಲಾಖೆಗೆ ಕರ್ನಾಟಕ ಸಮತಾ ಸೈನಿಕ ದಳ ದೂರು ನೀಡಿತ್ತು. ಇದರನ್ವರ ತ್ವರಿತ ಗತಿಯಲ್ಲಿ ಬ್ಯಾಕ್ ಲಾಗ್ ಭರ್ತಿಗೆ ಸೂಚನೆ ನೀಡಲಾಗಿದೆ.

(recruitment backlog fill up all the 20 back log posts in bangalore university says karnataka social welfare department)