AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂದನ ನಾಮಕಣರಕ್ಕೆ ಕೂಡಿಟ್ಟದ್ದ ಹಣವೂ ಬಿಡದ ಖದೀಮರು: ಮನೆಯವರು ಕಂಗಾಲು

ನೆಲಮಂಗಲ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ಮನೆ ಕಳ್ಳತನ ಘಟನೆ ನಡೆದಿದೆ. ಕಳ್ಳತರು ಮನೆಯಲ್ಲಿದ್ದ 5 ಲಕ್ಷ ರೂ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ಮಗುವಿನ ನಾಮಕರಣಕ್ಕೆ ಇಟ್ಟಿದ್ದ ಹಣವನ್ನು ದೋಚಿದ್ದಾರೆ. ಮನೆಯ ಬಾಗಿಲನ್ನು ಮುರಿದು ಕಳ್ಳತನ ಮಾಡಲಾಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂದನ ನಾಮಕಣರಕ್ಕೆ ಕೂಡಿಟ್ಟದ್ದ ಹಣವೂ ಬಿಡದ ಖದೀಮರು: ಮನೆಯವರು ಕಂಗಾಲು
ಮನೆಗಳ್ಳತನ
ಗಂಗಾಧರ​ ಬ. ಸಾಬೋಜಿ
|

Updated on: Jun 29, 2025 | 11:49 AM

Share

ನೆಲಮಂಗಲ, ಜೂನ್​ 29: ಓರ್ವ ವ್ಯಕ್ತಿ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದರು. ನಗರದಲ್ಲಿ ಸಣ್ಣ ಹೋಟೆಲ್ ಇಟ್ಟುಕೊಂಡಿದ್ದರು. ಅಷ್ಟೊ ಇಷ್ಟೋ ಕೂಡಿಟ್ಟು ಚಿನ್ನಾಭರಣ (jewelry) ಖರೀದಿಸಿದ್ದರು. ಆದರೆ ಮನೆಗೆ ನುಗ್ಗಿದ ಕಳ್ಳರು (Home Theft) ಚಿನ್ನಾಭರಣ ಜೊತೆಗೆ ಮಗನ ನಾಮಕರಣಕ್ಕೆ ಕೂಡಿಟ್ಟ ಹಣವನ್ನು ದೋಚಿದ್ದಾರೆ. ನೆಲಮಂಗಲ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಊರಿಗೆ ಹೋಗಿ ಬರುವಷ್ಟರಲ್ಲಿ ಮನೆ ದೋಚಿದ ಖದೀಮರು

ಚಿನ್ನಾಭರಣ ಕಳೆದುಕೊಂಡಿರುವ ಅಭಿಷೇಕ್​, ನೆಲಮಂಗಲ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಗಂಗೊಂಡಹಲಿಯಲ್ಲಿ ಎರಡು ವರ್ಷದ ಹಿಂದೆ ಮನೆ ಕಟ್ಟಿಸಿಕೊಂಡು ವಾಸವಾಗಿದ್ದರು. ಜೀವನ ನಡೆಸುವುದಕ್ಕೆ ಸಣ್ಣ ಹೋಟೆಲ್ ಇಟ್ಟುಕೊಂಡಿದ್ದರು. ಇದರಲ್ಲಿ ಬರುವ ಹಣದಲ್ಲಿ ಸಣ್ಣಪುಟ್ಟ ಒಡವೆ ಖರೀದಿಸಿದ್ದರು. ಆದರೆ ಎರಡು ದಿನದ ಹಿಂದೆ ಊರಿಗೆ ಹೋಗಿದ್ದ ಅಭಿಷೇಕ್ ಕುಟುಂಬ ವಾಪಸ್​ ಬರುವಷ್ಟರಲ್ಲಿ ಖದೀಮರು ಮನೆ ಬಾಗಿಲು ಮುರಿದು ಮನೆಗಳ್ಳತನ ಮಾಡಿದ್ದಾರೆ. ಸಿಸಿಟಿಯಲ್ಲಿ ಸೆರೆಯಾದಂತೆ ಅದನ್ನು ಮೇಲಕ್ಕೆ ತಿರುಗಿಸಿ ಕೃತ್ಯವೆಸಗಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಏಕಾಏಕಿ ಶಾಪ್​ಗೆ ನುಗ್ಗಿ 2 ಕೋಟಿ ರೂ ದೋಚಿದ ದುಷ್ಕರ್ಮಿಗಳು

ಇನ್ನೂ ಮನೆಗೆ ಬಂದು ನೋಡಿದಾಗ ಮನೆಯ ರೂಂನಲ್ಲಿದ್ದ 5 ಲಕ್ಷ ರೂ ಬೆಲೆಬಾಳುವ ಚಿನ್ನಾಭರಣ, ದೇವರ ಮನೆಯಲ್ಲಿದ್ದ ಬೆಳ್ಳಿ ವಸ್ತುಗಳು ಹಾಗೂ ಮಗನ ನಾಮಕರಣಕ್ಕಾಗಿ ಅಭೀಷೇಕ್ ಪತ್ನಿ ಸಂಪಾದಿಸಿ ಕೂಡಿಟ್ಟಿದ್ದ ಹಣವನ್ನು ದೋಚಿದ್ದಾರೆ.

ಇನ್ನು ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆದಷ್ಟು ಬೇಗ ಕಳ್ಳತನವಾಗಿರುವ ಒಡವೆಗಳ್ಳನ್ನ ಹುಡುಕಿಕೊಡುವಂತೆ ಒತ್ತಾಯಿಸಿದ್ದಾರೆ.

ಮನೆ ಮುಂದೆ ನಿಲ್ಲಿಸಿದ ಆಟೋ ರಾತ್ರೋರಾತ್ರಿ ಮಾಯ

ಇನ್ನು ಇತ್ತೀಚೆಗೆ ಇದೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳರು ಆಟೋ ಒಂದನ್ನು ಕಳ್ಳತನ ಮಾಡಿದ್ದರು. ದಾಸನಪುರ ಹೋಬಳಿ ತೋಟದಗುಡ್ಡದಹಳ್ಳಿ ನಿವಾಸಿ ನಾಗರಾಜು, ಕುಟುಂಬ ನಿರ್ವಹಣೆಗಾಗಿ ಆಟೋ ಓಡಿಸುತ್ತಿದ್ದರು.

ಇದನ್ನೂ ಓದಿ: ಕೊಪ್ಪಳ: ಮೂರನೇ ಪತ್ನಿಯ ಕೊಲೆ ಮಾಡಿ ಬಸ್​ನಲ್ಲಿ ಲಗೇಜ್ ಎಂದು‌ ಕಳುಹಿಸಿ ಪರಾರಿಯಾಗಿದ್ದ ವೃದ್ಧ 23 ವರ್ಷಗಳ ಬಳಿಕ ಅರೆಸ್ಟ್

ಎಂದಿನಂತೆ ಬೆಳಿಗ್ಗೆ ಆಟೋ ಬಾಡಿಗೆ ಓಡಿಸಿ ತಡರಾತ್ರಿ ಬಂದು ತನ್ನ ಮನೆ ಮುಂದೆ ನಿಲ್ಲಿಸಿದ್ದರು. ಬೆಳಿಗ್ಗೆ 3 ಗಂಟೆಗೆ ಎದ್ದು ನೋಡಿದರೆ ಆಟೋ ಸ್ಥಳಿದಲ್ಲಿ ಇರಲಿಲ್ಲ. ಆತಂಕಗೊಂಡ ನಾಗರಾಜು ಮದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಕೊಟ್ಟ 24 ಗಂಟೆಗಳಲ್ಲಿ ಆಟೋ ಪತ್ತೆ ಮಾಡಿ ಪೊಲೀಸರು ನೀಡಿದ್ದು, ಭಾವುಕರಾದ ನಾಗರಾಜು ಪೋಲಿಸರಿಗೆ ಧನ್ಯಾವಾದ ಹೇಳಿದ್ದಾರೆ.

ವರದಿ: ಮಂಜುನಾಥ್, ಟಿವಿ9, ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.