2 ಲಕ್ಷ ರೂ ಪಿ.ಎಫ್. ಹಣವನ್ನ ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಬೈಕ್​ನಿಂದ ಹಾಡಹಗಲೇ ಎಗರಿಸಿದರು!

ನೆಲಮಂಗಲ: ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಬೈಕ್ ನಿಂದ ಹಾಡಹಗಲೇ ಹಣ ಎಗರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬಾಗಲಗುಂಟೆ ಎಂಇಐ (MEI) ಕೆನರಾ ಬ್ಯಾಂಕ್ ಮುಂದೆ ಈ ಘಟನೆ ನಡೆದಿದೆ. ಬಿಎಂಟಿಸಿ (BMTC) ಸಂಸ್ಥೆಯ ನಿವೃತ್ತ ಕಂಡಕ್ಟರ್ ನಾಗೇಶ್ ಅವರಿಗೆ ಸೇರಿದ 2 ಲಕ್ಷ ಹಣ ಇದಾಗಿತ್ತು.

2 ಲಕ್ಷ ರೂ ಪಿ.ಎಫ್. ಹಣವನ್ನ ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಬೈಕ್​ನಿಂದ ಹಾಡಹಗಲೇ ಎಗರಿಸಿದರು!
2 ಲಕ್ಷ ರೂ ಪಿ.ಎಫ್. ಹಣವನ್ನ ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಬೈಕ್​ನಿಂದ ಹಾಡಹಗಲೇ ಎಗರಿಸಿದರು!
Updated By: ಸಾಧು ಶ್ರೀನಾಥ್​

Updated on: Aug 27, 2021 | 10:06 AM

ನೆಲಮಂಗಲ: ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಬೈಕ್ ನಿಂದ ಹಾಡಹಗಲೇ ಹಣ ಎಗರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬಾಗಲಗುಂಟೆ ಎಂಇಐ (MEI) ಕೆನರಾ ಬ್ಯಾಂಕ್ ಮುಂದೆ ಈ ಘಟನೆ ನಡೆದಿದೆ. ಬಿಎಂಟಿಸಿ (BMTC) ಸಂಸ್ಥೆಯ ನಿವೃತ್ತ ಕಂಡಕ್ಟರ್ ನಾಗೇಶ್ ಅವರಿಗೆ ಸೇರಿದ 2 ಲಕ್ಷ ಹಣ ಇದಾಗಿತ್ತು.

ತುಮಕೂರು ರಸ್ತೆಯ 8ನೇ ಮೈಲಿಯಲ್ಲಿರುವ ಬ್ಯಾಂಕ್ ಆಫ್ ಬರೋಡಾದಲ್ಲಿ ನಾಗೇಶ್ ಅವರು ಪಿ.ಎಫ್. ಹಣ ಡ್ರಾ ಮಾಡಿಕೊಂಡು ಬಂದಿದ್ದರು. ಇವರನ್ನೇ ಹಿಂಬಾಲಿಸಿ ಬಂದು ಕೆನರಾ ಬ್ಯಾಂಕ್ ಬಳಿ ಬೈಕ್ ನಿಲ್ಲಿಸಿದ್ದಾಗ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ. ಇಬ್ಬರು ದುಷ್ಕರ್ಮಿಗಳು ಪಲ್ಸರ್ ಬೈಕಿನಲ್ಲಿ ಬಂದಿದ್ದು, ಕುಕೃತ್ಯ ಎಸಗಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Also Read:

How To Activate PPF: ನಿಷ್ಕ್ರಿಯ ಪಿಪಿಎಫ್​ ಖಾತೆಯನ್ನು ಸಕ್ರಿಯಗೊಳಿಸುವುದು ಹೇಗೆ?

How to merge two UAN: ಪಿಎಫ್​ ಖಾತೆದಾರರು ಒಂದಕ್ಕಿಂತ ಹೆಚ್ಚು ಯುಎಎನ್​ ಹೊಂದಿದ್ದರೆ ನಿಯಮಬಾಹಿರ; ಇಂಥ ಸನ್ನಿವೇಶ ಏನು ಮಾಡಬೇಕು?

(pulsar bike borne miscreants steal pf amount in bagalagunte nelamangala)

Published On - 10:01 am, Fri, 27 August 21