Murder: ರಾಡ್‌ನಿಂದ ಪತಿ ಹತ್ಯೆಗೈದು ಪೊಲೀಸರ ಮುಂದೆ ಶರಣಾದ 2ನೇ ಪತ್ನಿ, ಕೊಲೆಯ ಹಿಂದೆ ಆಸ್ತಿ ಕಬಳಿಕೆ ಆರೋಪ

ಬೆಂಗಳೂರು ಉತ್ತರ ತಾಲೂಕಿನ ಹಾರೋಕ್ಯಾತನಹಳ್ಳಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸ್ವಾಮಿರಾಜ್ನನ್ನು ಆತನ 2ನೇ ಪತ್ನಿ ನೇತ್ರಾ ರಾಡ್‌ನಿಂದ ಹತ್ಯೆಗೈದು ಮಾದನಾಯಕನಹಳ್ಳಿ ಠಾಣೆ ಪೊಲೀಸರ ಮುಂದೆ ಶರಣಾಗಿದ್ದಾಳೆ.

Murder: ರಾಡ್‌ನಿಂದ ಪತಿ ಹತ್ಯೆಗೈದು ಪೊಲೀಸರ ಮುಂದೆ ಶರಣಾದ 2ನೇ ಪತ್ನಿ, ಕೊಲೆಯ ಹಿಂದೆ ಆಸ್ತಿ ಕಬಳಿಕೆ ಆರೋಪ
ಮೃತ ರಿಯಲ್ ಎಸ್ಟೇಟ್ ಉದ್ಯಮಿ ಸ್ವಾಮಿರಾಜ್ ಮತ್ತು ಆತನ ಮನೆ
Edited By: ಆಯೇಷಾ ಬಾನು

Updated on: Nov 07, 2021 | 8:58 AM

ಬೆಂಗಳೂರು: ರಾಡ್‌ನಿಂದ ಪತಿ ಹತ್ಯೆಗೈದು 2ನೇ ಪತ್ನಿ ಠಾಣೆಯಲ್ಲಿ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿ ಸ್ವಾಮಿರಾಜ್(46) ಹತ್ಯೆಯಾದ ವ್ಯಕ್ತಿ. ನೇತ್ರಾ (35) ಗಂಡನನ್ನ ಕೊಲೆಗೈದು ಮಾದನಾಯಕನಹಳ್ಳಿ ಠಾಣೆಗೆ ಶರಣಾದ ಪತ್ನಿ.

ಬೆಂಗಳೂರು ಉತ್ತರ ತಾಲೂಕಿನ ಹಾರೋಕ್ಯಾತನಹಳ್ಳಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸ್ವಾಮಿರಾಜ್ನನ್ನು ಆತನ 2ನೇ ಪತ್ನಿ ನೇತ್ರಾ ರಾಡ್‌ನಿಂದ ಹತ್ಯೆಗೈದು ಮಾದನಾಯಕನಹಳ್ಳಿ ಠಾಣೆ ಪೊಲೀಸರ ಮುಂದೆ ಶರಣಾಗಿದ್ದಾಳೆ. ನನ್ನ ಪತಿ ಸ್ವಾಮಿರಾಜ್, ಹತ್ತಿರದ ಸಂಬಂಧಿಗೆ ಲೈಂಗಿಕ ಕ್ರಿಯೆಗೆ ಸಹಕರಿಸಲು ಹಿಂಸೆ ನೀಡುತ್ತಿದ್ದ. ಈ ಹಿನ್ನೆಲೆ ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ್ದೇನೆ ಎಂದು ಮೃತ ಸ್ವಾಮಿರಾಜ್‌ನ 2ನೇ ಪತ್ನಿ ನೇತ್ರಾ ಪೊಲೀಸರೆದರು ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಕಳೆದ 10 ವರ್ಷದಿಂದ ನೇತ್ರಾ ಮತ್ತು ಸ್ವಾಮಿರಾಜ್ ಜೊತೆಯಾಗಿ ಜೀವನ ಸಾಗಿಸ್ತಿದ್ದರು. 2 ವರ್ಷದ ಹಿಂದೆ ಇಬ್ರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

2ನೇ ಪತ್ನಿಯ ವಿರುದ್ಧ ಮೊದಲ ಪತ್ನಿಯಿಂದ ದೂರು
ಇನ್ನು ಈ ಘಟನೆ ಸಂಬಂಧ ಮೃತ ಸ್ವಾಮಿರಾಜ್ನ ಮೊದಲ ಪತ್ನಿ 2ನೇ ಪತ್ನಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಸ್ವಾಮಿರಾಜ್ ಆಸ್ತಿಗಾಗಿ ಕೊಲೆ ಮಾಡಿದ್ದಾರೆಂದು ಆರೋಪಿಸಿ ಮೃತ ಸ್ವಾಮಿರಾಜ್ ಮೊದಲ ಪತ್ನಿ ಸತ್ಯಕುಮಾರಿ ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ರಿಯಲ್ ಎಸ್ಟೇಟ್ ಉದ್ಯಮಿ ಸ್ವಾಮೀರಾಜ್ ಸಾಕಷ್ಟು ಆಸ್ತಿ ಗಳಿಸಿದ್ದರು. ತಂದೆಯ ಕಾಲದಿಂದಲೂ ಒಳ್ಳೆ ಸ್ಥಿತಿವಂತರಾಗಿದ್ದರು. ಅವರ ಆಸ್ತಿ ಕಬಳಿಸಲೆಂದೇ ನೇತ್ರಾ ಸ್ವಾಮಿರಾಜ್‌ನ ಮದುವೆ ಆಗಿದ್ದಳು. ಸದ್ಯ ಆಸ್ತಿಗಾಗಿ ಈ ಕೊಲೆ ನಡೆದಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ರೌಡಿ ಶೀಟರ್‌, ಡ್ರಗ್ಸ್ ಪೆಡ್ಲರ್‌ಗಳ ಮನೆ ಮೇಲೆ ಪೊಲೀಸರಿಂದ ದಾಳಿ; ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ವಾರ್ನಿಂಗ್

Loading...
Unable to load recommendations.
Follow Us