ಅನೈತಿಕ ಸಂಬಂಧ: ವಿದ್ಯಾರ್ಥಿನಿಯನ್ನು ಓಡಿಸಿಕೊಂಡು ಹೋದ ಹಳ್ಳಿ ಮೇಷ್ಟ್ರು ಅರೆಸ್ಟ್
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಓರ್ವ ಪ್ರಾಧ್ಯಾಪಕ ವಿದ್ಯಾರ್ಥಿನಿಯನ್ನು ತನ್ನ ಪ್ರೇಮ ಬಲೆಗೆ ಬೀಳಿಸಿಕೊಂಡಿಸಿಕೊಂಡಿದ್ದಾನೆ. ಅಲ್ಲದೆ, ವಿದ್ಯಾರ್ಥಿನಿಯನ್ನು ದೆಹಲಿಗೆ ಓಡಿಸಿಕೊಂಡು ಹೋಗಿದ್ದಾನೆ. ಸದ್ಯ ಮಹಿಳಾ ಪೊಲೀಸರು ಆರೋಪಿ ಪ್ರಾಧ್ಯಾಪಕನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ಮಹಿಳಾ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೇವನಹಳ್ಳಿ, ಆಗಸ್ಟ್ 14: ವಿದ್ಯಾರ್ಥಿನಿಯನ್ನು (Student) ಓಡಿಸಿಕೊಂಡು ಹೋಗಿದ್ದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್ (45) ವಿದ್ಯಾರ್ಥಿನಿಯನ್ನು ಓಡಿಸಿಕೊಂಡು ಹೋಗಿದ್ದ ಶಿಕ್ಷಕ. ಪ್ರವೀಣ್ ಕಳೆದ 15 ವರ್ಷಗಳಿಂದ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ನಗರದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದಾನೆ. ಪ್ರಾಧ್ಯಾಪಕ ಪ್ರವೀಣ್ಗೆ ಈಗಾಗಲೇ ಮದುವೆಯಾಗಿದ್ದರೂ, ಕಾಲೇಜಿನ ಓರ್ವ ವಿದ್ಯಾರ್ಥಿನಿಯ ಜೊತೆ ಪರಸಂಗ ಬೆಳೆಸಿದ್ದಾನೆ.
ವಿದ್ಯಾರ್ಥಿನಿಯ ಪೋಷಕರು ಆಕೆಗೆ ಮದುವೆ ನಿಶ್ಚಯ ಮಾಡಿದ್ದರು. ಈ ವಿಚಾರ ತಿಳಿದ ಪ್ರಾಧ್ಯಾಪಕ ಪ್ರವೀಣ್ ಆಗಸ್ಟ್ 2 ರಂದು ವಿದ್ಯಾರ್ಥಿನಿಯನ್ನು ಓಡಿಸಿಕೊಂಡು ಹೋಗಿದ್ದಾನೆ. ಇಬ್ಬರೂ ಮೊದಲಿಗೆ ದೆಹಲಿಗೆ ಹೋಗಿದ್ದಾರೆ. ಅಲ್ಲಿಂದ ವಾಪಸ್ ನಂಜನಗೂಡಿಗೆ ಬಂದಿದ್ದಾರೆ. ನಂಜನಗೂಡಿನಲ್ಲಿನ ಲಾಡ್ಜ್ನಲ್ಲಿ ಇಬ್ಬರೂ ತಂಗಿದ್ದರು. ಇತ್ತ ಪ್ರವೀಣ್ ಪತ್ನಿ ಮತ್ತು ವಿದ್ಯಾರ್ಥಿನಿಯ ಪೋಷಕರು ದೊಡ್ಡಬಳ್ಳಾಪುರ ಮಹಿಳಾ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೆರೆಗೆ ಪ್ರಕರಣ ದಾಖಲಿಸಿಕೊಂಡ ದೊಡ್ಡಬಳ್ಳಾಪುರ ಮಹಿಳಾ ಠಾಣೆ ಪೊಲೀಸರು ಆರೋಪಿ ಪ್ರವೀಣ್ನನ್ನು ಬಂಧಿಸಿದ್ದಾರೆ.
ಮನೆ ಕಟ್ಟಿಕೊಡಿಸುವಂತೆ ಕಿರುಕುಳ ನೀಡುತ್ತಿದ್ದ ಪ್ರವೀಣ್
ದೊಡ್ಡಬಳ್ಳಾಪುರ ಟೌನ್ ನಿವಾಸಿಯಾಗಿರುವ ಪ್ರವೀಣ್ ಪತ್ನಿ ಸುಶೀಲಾ (ಹೆಸರು ಬದಲಾಯಿಸಲಾಗಿದೆ) ಪತಿ ಮತ್ತು ಪತಿಯ ಸಂಬಂಧಿಕರ ವಿರುದ್ಧ ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ. ಪ್ರವೀಣ್ ಮತ್ತು ಸುಶೀಲಾ ವಿವಾಹವಾಗಿ 10 ವರ್ಷ ಕಳೆದಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
“ಮದುವೆಯಾದ ಸ್ವಲ್ಪ ದಿನದ ನಂತರ ಪತಿ ಪ್ರವೀಣ್ ಪತ್ನಿ ಸುಶೀಲಾ ಅವರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಲು ಆರಂಭಿಸಿದ್ದಾನೆ. ಸ್ವಲ್ಪದಿನದ ಬಳಿಕ, ಬಾಡಿಗೆ ಮನೆ ಮಾಡಿ ಕರೆದುಕೊಂಡು ಹೋಗಿದ್ದಾನೆ. ಈ ಸಂದರ್ಭದಲ್ಲಿ ಸುಶೀಲಾ ಅವರಿಗೆ ಪತಿ ಪ್ರವೀಣ್ ಓರ್ವ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರವೀಣ್ ಪತ್ನಿ ಸುಶೀಲಾ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ, “ನಿನ್ನ ತಂದೆಯ ಬಳಿ ಹೋಗಿ ವರದಕ್ಷಿಣೆಯಾಗಿ ಸೈಟ್ ಅನ್ನು ನನ್ನ ಹೆಸರಿಗೆ ಮಾಡಿಸು. ಆ ಸೈಟ್ನಲ್ಲಿ ಮನೆ ಕಟ್ಟಿಸಿಕೊಡುವಂತೆ ಹೇಳು” ಎಂದು ಪತ್ನಿ ಸುಶೀಲಾಗೆ ಹೇಳಿದ್ದಾನೆ.
ಇದನ್ನೂ ಓದಿ: ಪ್ರೇಯಸಿಯೊಂದಿಗಿನ ಕಾಮದಾಟಕ್ಕೆ ಬಾಲ್ಯ ಸ್ನೇಹಿತನನ್ನೇ ಕೊಂದ ಗೆಳೆಯ
ಆಗ ಸುಶೀಲಾ, “ನನ್ನ ತಂದೆ ಈಗ ತಾನೆ ಮದುವೆ ಮಾಡಿದ್ದಾರೆ. ತುಂಬಾ ಹಣ ಖರ್ಚು ಮಾಡಿದ್ದಾರೆ” ಎಂದು ಹೇಳಿದ್ದಾರೆ. ಆಗ, ಪ್ರವೀಣ್, ಪ್ರವೀಣ್ ತಾಯಿ, ಪ್ರವೀಣ್ನ ದೊಡ್ಡಮಂದಿರಾದ ಶಾಂತ ಹಾಗೂ ಶೋಭ ಮತ್ತು ಪ್ರವೀಣ್ ಅಣ್ಣ ಹಾಗೂ ಪ್ರವೀಣ್ ಭಾವ ನರಸಿಂಹ ಮೂರ್ತಿ ಸುಶೀಲಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿವಾಹ ವಿಚ್ಛೇದನ ನೀಡು ಇಲ್ಲವಾದರೆ ಮನೆ ನಿರ್ಮಿಸಿಕೊಡು. ಜೊತೆಗೆ ಬಂಗಾರದ ಒಡವೆಗಳನ್ನು ನಿನ್ನ ತಂದೆಯ ಬಳಿ ಕೇಳು ಎಂದು ಒತ್ತಾಯಿಸಿದ್ದಾರೆ” ಎಂದು ಸುಶೀಲಾ ದೂರು ದಾಖಲಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:24 pm, Thu, 14 August 25



