ಗೀತಂ ವಿವಿಯಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು ಪ್ರಕರಣ; ವಿವಿ ಉಪಕುಲಪತಿ, ಸೆಕ್ಯೂರಿಟಿ ಇನ್ಚಾರ್ಜ್ ಸೇರಿ 7 ಜನರ ವಿರುದ್ಧ ದೂರು
ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಬಳಿ ಇರುವ ವಿವಿ ಗೀತಂ ವಿವಿಯಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ವಿವಿ ಉಪಕುಲಪತಿ, ಗುತ್ತಿಗೆದಾರ, ಸೆಕ್ಯೂರಿಟಿ ಇನ್ಚಾರ್ಜ್ ಸೇರಿ 7 ಜನರ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮೃತ ವಿದ್ಯಾರ್ಥಿ ತಂದೆ ನೀಡಿದ್ದ ದೂರಿನಡಿ ಪ್ರಕರಣ ದಾಖಲಾಗಿದೆ.
ದೇವನಹಳ್ಳಿ, ಮಾರ್ಚ್.14: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಬಳಿಯಿರುವ ಗೀತಂ ವಿವಿಯಲ್ಲಿ (Gitam University) ಆಂಧ್ರ ಮೂಲದ ದಾಸರಿ ಬ್ರಹ್ಮಸಾಯಿ ರೆಡ್ಡಿ ಅನ್ನೂ ವಿದ್ಯಾರ್ಥಿ ಹಾಸ್ಟೆಲ್ನ ಆರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ (Death). ಈ ಘಟನೆ ಸಂಬಂಧ ಗೀತಂ ವಿವಿ ಉಪಕುಲಪತಿ, ಗುತ್ತಿಗೆದಾರ, ಸೆಕ್ಯೂರಿಟಿ ಇನ್ಚಾರ್ಜ್ ಸೇರಿ 7 ಜನರ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮೃತ ವಿದ್ಯಾರ್ಥಿ ತಂದೆ ನೀಡಿದ ದೂರಿನ ಆಧಾರದ ಮೇಲೆ IPC 304 ಅಡಿಯಲ್ಲಿ ದೂರು ದಾಖಲಾಗಿದೆ.
ಉಪ ಕುಲಪತಿ ಆಚಾರ್ಯ, ವಿವಿ ಅಧ್ಯಕ್ಷ ಭರತ್, ಕಾಂಟ್ರಾಕ್ಟರ್ ಮುನಿಕೃಷ್ಣ, ಆಪರೇಷನ್ ಕಾಂಟ್ರಾಕ್ಟರ್ ವಿಜಯ್ ಬಾಸ್ಕರ್, ಸೆಕ್ಯೂರಿಟಿ ಇನ್ಚಾರ್ಜ್ ವಿಜಯ್ ಗಜ್ಜಿ, ರಾಘವೇಂದ್ರ, ವಾರ್ಡನ್ ಇನ್ಚಾರ್ಜ್ ಟಿಂಟೂ, ಮತ್ತು ಕೊಪ್ಪಸ್ವಾಮಿ ವಿರುದ್ದ ಪ್ರಕರಣ ದಾಖಲಾಗಿದೆ. ಮುಂಜಾಗ್ರತಾ ಕ್ರಮವಿಲ್ಲದೆ ಹಾಸ್ಟೇಲ್ ಕಟ್ಟಡ ಕಾಮಗಾರಿ, ವಿದ್ಯಾರ್ಥಿಗಳು ಹೋಗದಂತೆ ಸೆಕ್ಯೂರಿಟಿಗಳ ನೇಮಕ ಮಾಡದಿರುವುದು ಸೇರಿದಂತೆ ನಿರ್ಲಕ್ಷ್ಯದ ಆರೋಪದ ವಿರುದ್ದ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Gitam University: ಹಾಸ್ಟೆಲ್ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವು, 4 ತಿಂಗಳಲ್ಲಿ ಇದು ಮೂರನೇ ವಿದ್ಯಾರ್ಥಿ ಬಲಿ
ಮೃತ ದಾಸರಿ ಬ್ರಹ್ಮಸಾಯಿರೆಡ್ಡಿ ಮೂಲತಃಹ ಆಂಧ್ರದ ಕರ್ನೂಲು ನಿವಾಸಿ. ಸಣ್ಣ ವಯಸ್ಸಿನಲ್ಲೆ ಜೀವನದಲ್ಲಿ ಏನಾದ್ರು ಸಾಧನೆ ಮಾಡಬೇಕು. ತಂದೆ ತಾಯಿಗೆ ನೆರವಾಗಬೇಕು ಅಂತ ನೂರಾರು ಕನಸು ಕಂಡು ಆಂಧ್ರದಿಂದ ಸಿಲಿಕಾನ್ ಸಿಟಿಗೆ ಬಂದಿದ್ದ. ಜೊತೆಗೆ ಸಿಟಿ ಔಟ್ ಸ್ಕಟ್ಸ್ ನ ಗೀತಂ ವಿವಿಯಲ್ಲಿ ಬಿಟೆಕ್ ವ್ಯಾಸಾಂಗ ಮಾಡ್ತಿದ್ದ. ಕಳೆದ ರಾತ್ರಿ ಊಟ ಮಾಡಿ ವಿವಿ ಹಾಸ್ಟೇಲ್ ನ 6 ನೇ ಪ್ಲೋರ್ಗೆ ಹೋದ ವಿದ್ಯಾರ್ಥಿ ಅನುಮಾನಾಸ್ವದ ರೀತಿಯಲ್ಲಿ ಮೃತಪಟ್ಟಿದ್ದಾನೆ.
ಮೃತ ದಾಸರಿ ಬಿಟೆಕ್ ಮೊದಲನೆ ವರ್ಷ ವ್ಯಾಸಾಂಗ ಮಾಡ್ತಿದ್ದು ರಾತ್ರಿ ಊಟ ಮಾಡಿ ಹಾಸ್ಟೆಲ್ ನ ಆರನೆ ಮಹಡಿಗೆ ತೆರಳಿದ್ದಾನೆ. ಈ ವೇಳೆ ಆರನೆ ಮಹಡಿಗೆ ಹೋದ ಕೆಲ ಹೊತ್ತಿನಲ್ಲೆ ವಿದ್ಯಾರ್ಥಿ ಕಿಟಕಿಯಿಂದ ಹಾರಿ ಕೆಳಕ್ಕೆ ಬಿದ್ದಿದ್ದು ರಕ್ತದ ಮಡುವಿನಲ್ಲಿ ವಿಲವಿಲ ಒದ್ದಾಡಿದ್ದಾನೆ. ಈ ವೇಳೆ ಸಹಪಾಠಿಗಳು ಒಂದು ಕ್ಷಣ ಬೆಚ್ಚಿ ಬಿದ್ದಿದ್ದು ಹಾಸ್ಟೇಲ್ ನ ಸೆಕ್ಯೂರಿಟಿ ಗಾರ್ಡಗಳು ವಿದ್ಯಾರ್ಥಿಯ ಮೃತದೇಹವನ್ನ ಆಸ್ವತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಯತ್ನ ಮಾಡಿದ್ದಾರೆ. ಆದ್ರೆ ಅಷ್ಟರಲ್ಲೆ ವಿದ್ಯಾರ್ಥಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇನ್ನೂ ವಿಚಾರ ತಿಳಿಯುತ್ತಿದ್ದಂತೆ ಕರ್ನೂಲ್ ನಿಂದ ಮೃತನ ತಂದೆ ಹಾಗೂ ಸಂಬಂಧಿಕರು ಹಾಸ್ಟೇಲ್ ಗೆ ದೌಡಾಯಿಸಿ ಬಂದು ಪೊಲೀಸರ ಜೊತೆ ಪರಿಶೀಲನೆ ನಡೆಸಿದ್ರು. ಈ ವೇಳೆ ಯುವಕ ಬಿದ್ದ ಸ್ಥಳ ಕಾಲು ಜಾರಿ ಬೀಳುವಂತಹ ಸ್ಥಳವಾಗದಿದ್ದು ನಮ್ಮ ಹುಡುಗನಿಗೆ ಯಾವುದೇ ಟೆನ್ಷನ್ ಇರಲಿಲ್ಲ ಎಲ್ಲವೂ ಸರಿಯಾಗಿತ್ತು ಚೆನ್ನಾಗಿದ್ದ ಅಂದಿದ್ದಾರೆ. ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಅಂಶ ಮೃತ ಯುವಕನಲ್ಲಿ ಇಲ್ಲದಿದ್ದು ಹಾಸ್ಟೆಲ್ ನಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದ ಕಾರಣ ಇಂತಹ ದುರ್ಘಟನೆ ನಡೆದಿದೆ ಅಂತ ಮೃತನ ಸಂಬಂಧಿಕರು ಆರೋಪಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ