AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಎಸ್​ಸಿ ಪರೀಕ್ಷೆಗೆ ಹೆದರಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ, ಊರಿಗೆ ಹೋಗಿ ಬರುವಷ್ಟರಲ್ಲಿ ಮಗನ ಸಾವು

ಯುಪಿಎಸ್​ಸಿ ಪರೀಕ್ಷೆ ಬರೆಯಲು ಹೆದರಿ ಯುವಕನೋರ್ವ ಡೆತ್ ನೋರ್ಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಯಿ ಮನೆಯಲ್ಲಿ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಯಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನು ಡೆತ್​ ನೋಟ್​ನಲ್ಲಿ ಪರೀಕ್ಷೆ ಎದುರಿಸಲು ಸಾಧ್ಯವಾಗುತ್ತಿಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾನೆ.

ಯುಪಿಎಸ್​ಸಿ ಪರೀಕ್ಷೆಗೆ ಹೆದರಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ, ಊರಿಗೆ ಹೋಗಿ ಬರುವಷ್ಟರಲ್ಲಿ ಮಗನ ಸಾವು
ಯುಪಿಎಸ್​ಸಿ ಪರೀಕ್ಷೆಗೆ ಹೆದರಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
ನವೀನ್ ಕುಮಾರ್ ಟಿ
| Edited By: |

Updated on: Mar 14, 2024 | 2:22 PM

Share

ದೇವನಹಳ್ಳಿ, ಮಾರ್ಚ್.14: ಯುಪಿಎಸ್​ಸಿ (Civil Services Exam) ಪರೀಕ್ಷೆಗೆ ಹೆದರಿ ಡೆತ್ ನೋಟ್ (Death Note) ಬರೆದಿಟ್ಟು ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮಜರಾಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಗದೀಶ್ (28) ಆತ್ಮಹತ್ಯೆ  ಮಾಡಿಕೊಂಡ ಯುವಕ. ಮಾರ್ಚ್ 12 ರಂದು ಮನೆಯವರು ಊರಿಗೆ ಹೋಗಿದರು. ನಿನ್ನೆ ರಾತ್ರಿ ಮರಳಿ ಮನೆಗೆ ಬಂದಾಗ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಎಂಎ, ಎಂಎಡ್ ವ್ಯಾಸಾಂಗ ಮಾಡಿದ್ದ ಜಗದೀಶ್, ಡೆತ್ ನೋಟ್ ನಲ್ಲಿ ಪರೀಕ್ಷೆ ಎದುರಿಸಲು ಸಾಧ್ಯವಾಗುತ್ತಿಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾನೆ. ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೌಡಿಶೀಟರ್ ಬೆಂಗಾವಲಿಗೆ ಬಂದವರು ಲಾಕ್

ರೌಡಿಶೀಟರ್ ಒಬ್ಬನ ಬೆಂಗಾವಲಿಗೆ ಬಂದಿದ್ದ 7 ಆರೋಪಿಗಳನ್ನ ಬೆಂಗಳೂರು ವೈಟ್​ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕಾರಲ್ಲಿ ಅನುಮಾನ್ಪಸದಾಗಿ ಓಡಾಡ್ತಿದ್ದರು. ಕಾರು ತಪಾಸಣೆ ವೇಳೆ ಲಾಕ್ ಆಗಿದ್ದಾರೆ. ಒಟ್ಟು ಏಳು ಜನರನ್ನ ಬಂಧಿಸಲಾಗಿದ್ದು, ಬಂಧಿತರಿಂದ 6 ಲಾಂಗ್, 5 ಪೆಪ್ಪರ್ ಸ್ಪ್ರೇ, ಮಚ್ಚು , ರಾಡನ್ನ ವಶ ಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಬೆಂಗಳೂರು; ಜ್ಯುವೆಲ್ಲರಿ ಶಾಪ್​ಗೆ ನುಗ್ಗಿ ಗುಂಡು ಹಾರಿಸಿದ ದುಷ್ಕರ್ಮಿಗಳು, ಮಾಲೀಕ ಸೇರಿ ಇಬ್ಬರಿಗೆ ಗಾಯ

ಸುರಂಗದಲ್ಲಿ ಹುಕ್ಕಾ ಘಾಟು!

ಹುಕ್ಕಾ ಬಾರ್ ಹಾಗೂ ತಂಬಾಕಿನ ಉತ್ಪನ್ನ ಮಾರಾಟ ಮಳಿಗೆ ಮೇಲೆ ಬೆಳಗಾವಿ ಪೊಲೀಸರು ದಾಳಿ ಮಾಡಿದ್ದಾರೆ. ಟಿಳಕವಾಡಿಯ ಬೆಳಗಾವಿ ಗ್ಯಾಲರಿ ಮಳಿಗೆಯಲ್ಲಿ ಸುರಂಗ ಮಾರ್ಗ ನಿರ್ಮಿಸಿ ಹುಕ್ಕಾ ಮಾರಾಟ ಮಾಡಲಾಗ್ತಿತ್ತು. ನಿಷೇಧಿತ ಇ ಸಿಗರೆಟ್ ಸೇರಿ ₹5.53 ಲಕ್ಷ ಮೌಲ್ಯದ ವಸ್ತುಗಳನ್ನ ಸೀಜ್ ಮಾಡಲಾಗಿದೆ. ಮಂಗಳೂರು ಮೂಲದ ಅಬುಬ್ಕರ್ ಸಿದ್ದಿಕ್, ಶಬಾಬ್ ಅಹಮ್ಮದ್ ಎಂಬುವರನ್ನ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಅಪಾರ ಪ್ರಮಾಣದ ಮೆಣಸಿನಕಾಯಿ ಭಸ್ಮ

ಹೈವೋಲ್ಟೇಜ್ ವಿದ್ಯುತ್ ತಂತಿ ತಗುಲಿ ಲಾರಿಯಲ್ಲಿದ್ದ ಅಪಾರ ಪ್ರಮಾಣದ ಮೆಣಸಿನಕಾಯಿ ಸುಟ್ಟು ಭಸ್ಮವಾಗಿದೆ. ರಾಯಚೂರು ಜಿಲ್ಲೆ ದೇವದುರ್ಗದ ದೇವರಗುಡ್ಡದ ಬಳಿ ಅವಘಡ ಸಂಭವಿಸಿದೆ. ಮಾರುಕಟ್ಟೆಗೆ ಲಾರಿಯಲ್ಲಿ ಒಣಮೆಣಸಿನ ಕಾಯಿ ಸಾಗಿಸುತಿದ್ದಾಗ ದುರಂತ ನಡೆದಿದೆ. ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತಾ ರೈತ ಕಣ್ಣೀರಿಟ್ಟಿದ್ದಾನೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ