ಬನ್ನೇರುಘಟ್ಟ ಪಾರ್ಕ್​ನಲ್ಲಿ ವಿಚಿತ್ರ ವೈರಸ್​ಗೆ ಬಲಿಯಾಗುತ್ತಿವೆ ಹುಲಿಗಳು

ಒಂದು ಕಡೆ ಮಿತಿ ಮೀರಿದ ಚಿರತೆ ಹಾವಳಿ, ಇನ್ನೊಂದೆಡೆ ವಿಚಿತ್ರ ವೈರಸ್​ಗೆ ಬಲಿಯಾಗುತ್ತಿರುವ ಹುಲಿಗಳು, ಗ್ರಾಮಗಳಿಗೆ ಉಪಟಳ ಕೊಟ್ಟ ಚಿರತೆಗಳು ಬನ್ನೇರುಘಟ್ಟ ಉದ್ಯಾನವನ ಸೇರಿಕೊಳ್ಳುತ್ತಿದ್ದರೆ. ಅತ್ತ ಪಾರ್ಕ್​ನ ಹುಲಿಗಳು ಒಂದೊಂದಾಗಿ ಅನಾರೋಗ್ಯಗೊಳ್ಳುತ್ತಿವೆ.

ಬನ್ನೇರುಘಟ್ಟ ಪಾರ್ಕ್​ನಲ್ಲಿ ವಿಚಿತ್ರ ವೈರಸ್​ಗೆ ಬಲಿಯಾಗುತ್ತಿವೆ ಹುಲಿಗಳು
ಬನ್ನೇರುಘಟ್ಟ ಪಾರ್ಕ್​ನಲ್ಲಿ ವಿಚಿತ್ರ ವೈರಸ್​ಗೆ ಬಲಿಯಾಗುತ್ತಿರುವ ಹುಲಿಗಳು
Follow us
ಕಿರಣ್ ಹನುಮಂತ್​ ಮಾದಾರ್
|

Updated on:Mar 25, 2023 | 1:06 PM

ಬೆಂಗಳೂರು: ಒಂದು ಕಾಲದಲ್ಲಿ ಅತಿ ಹೆಚ್ಚು ಹುಲಿಗಳಿದ್ದ ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್ ಈಗ ಅತಿ ಹೆಚ್ಚು ಚಿರತೆಗಳನ್ನು ಪಾಲನೆ‌ ಮಾಡುವ ಪಾರ್ಕ್‌ ಆಗಿ ಹೊರಹೊಮ್ಮಿದೆ. ಚಿರತೆಗಳನ್ನು ಚೆನ್ನಾಗಿ ನೋಡಿಕೊಳ್ಳುವ ವ್ಯವಸ್ಥೆ ಇದೆ ಎನ್ನುವ ಸಮಾಧಾನ ಒಂದು ಕಡೆ ಆದರೆ, ಕಳೆದ‌ ವರ್ಷ ಅತಿ ಹೆಚ್ಚು ಹುಲಿಗಳನ್ನು ಬನ್ನೇರುಘಟ್ಟ ಪಾರ್ಕ್ ಕಳೆದುಕೊಂಡಿದೆ ಎನ್ನುವುದು ದುರಂತ. ಹೌದು ಕಳೆದ ಒಂದೂವರೆ ವರ್ಷದಲ್ಲಿ ಸಫಾರಿ ಮತ್ತು ‘ಜೂ’ ನಲ್ಲಿದ್ದ ಆರಕ್ಕೂ ಹೆಚ್ಚು ಹುಲಿಗಳು ಅಸುನೀಗಿವೆ.‌ ಅದಕ್ಕೆ ಕಾರಣ ವಿಚಿತ್ರ ವೈರಸ್, ಇದು ಹುಲಿಗಳ ದೇಹ ಮತ್ತು ರಕ್ತದೊಳಗೆ ಸೇರಿ ಹಿಂಡಿ ಹಿಪ್ಪೆ ಮಾಡಿವೆ. ಹೀಗಾಗಿ ಬನ್ನೇರುಘಟ್ಟ ಸಿಬ್ಬಂದಿ ಹುಲಿಗಳನ್ನ ಸಧ್ಯ ಬಹಳ ಕೇರ್​ಫುಲ್ ಆಗಿ ನೋಡಿಕೊಳ್ಳುತ್ತಿದ್ದಾರೆ. ಈ ಹಿಂದೆ 26‌ಕ್ಕಿದ್ದ ಹುಲಿಗಳ ಸಂಖ್ಯೆ ಈಗ ಬರೀ 16‌ಕ್ಕೆ ಇಳಿದಿದೆ. ಅದರಲ್ಲೂ ಎರಡು ಹುಲಿಗಳು ಸಾಯುವ ಸ್ಥಿತಿಗೆ ತಲುಪಿವೆ.

ಇನ್ನು ಇದಕ್ಕೆ ತದ್ವಿರುದ್ಧವಾಗಿ ಬನ್ನೇರುಘಟ್ಟ ‌ಪಾರ್ಕ್​ನಲ್ಲಿ ಚಿರತೆಗಳ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಕಾರಣ ಬೆಂಗಳೂರು ಸುತ್ತಾಮುತ್ತ ಅನೇಕ ಗ್ರಾಮಗಳಿಗೆ ಉಪಟಳ ಕೊಟ್ಟ ಹಲವು ಚಿರತೆಗಳನ್ನು ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್‌‌ ಸಿಬ್ಬಂದಿಯೇ ನೋಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಚಿರತೆಗಳನ್ನು ರೆಸ್ಕ್ಯೂ ಮಾಡಿ ಕಾಡಿಗೆ ಬಿಡಲಾಗುತ್ತಿತ್ತು. ಆದರೆ ಈಗ ಚಿರತೆಗಳ‌ ಸಂರಕ್ಷಣೆಗಾಗಿಯೇ ಹೊಸ ಬ್ಯಾರೆಕ್ ತಯಾರಿಸಿ ಅವುಗಳ ಪಾಲನೆ‌ ಮಾಡಲಾಗುತ್ತಿದೆ. ಅವುಗಳಿಗೆ ತಗಲುವ ಖರ್ಚಿಗಾಗಿ 6 ಕೋಟಿ ಹಣವನ್ನು ಅರಣ್ಯ ಇಲಾಖೆ ಭರಿಸಲು ಮುಂದಾಗಿದೆ.

ಇದನ್ನೂ ಓದಿ:ಲಾಕ್​ಡೌನ್​ ನಡುವೆಯೂ ಲಾಭ ಗಳಿಸಿದ ಪ್ರವಾಸಿ ತಾಣ; ಬನ್ನೇರುಘಟ್ಟ ಉದ್ಯಾನವನ‌ದಲ್ಲಿ ಕೋಟ್ಯಾಂತರ ರೂ. ಹಣ ಸಂಗ್ರಹ

ಅದೇನೆ ಇರಲಿ ಜಾಗತಿಕವಾಗಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವ ವರದಿಗಳು ದೇಶದ ಇತರ ‘ಜೂ’ ಗಳಲ್ಲಿ ಚರ್ಚೆ ಆಗುತ್ತಿದ್ದರೆ. ಇತ್ತ ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹುಲಿಗಳ ಸಂಖ್ಯೆ ಕಡಿಮೆ ಆಗುತ್ತಿರೋದು ಪ್ರಾಣಿಪ್ರಿಯರಿಗೆ ಬೇಜಾರುಂಟು ಮಾಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವುದೇ ಹುಲಿ ‌ಆರೋಗ್ಯ ಕೆಡದಂತೆ ಬಹಳ ಎಚ್ಚರವಾಗಿ ನೋಡಿಕೊಳ್ಳತ್ತೇವೆ ಬಾಕಿ ಭಗವಂತನ ಇಚ್ಛೆ ಎನ್ನುತ್ತಾರೆ ಪಾರ್ಕ್​ನ ಸಿಬ್ಬಂದಿಗಳು

ವರದಿ: ಸೈಯ್ಯದ್ ನಿಜಾಮುದ್ದೀನ್ ಟಿವಿ9 ಆನೇಕಲ್

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:05 pm, Sat, 25 March 23

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್