ದಸರಾ ಅಂಬಾರಿ ಹೊತ್ತಿದ್ದ ಆನೆಯನ್ನು ಹೊತ್ತು ಸಾಗುತ್ತಿದ್ದ ವಾಹನಕ್ಕೆ ಅಪಘಾತ; ಚಾಲಕ ಸ್ಥಳದಲ್ಲೇ ಸಾವು
ಘಟನೆ ನಡೆದ ಸ್ಥಳಕ್ಕೆ ಹೊಸೂರಿನ ಅಡ್ಕೋ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿದ್ದಾರೆ. ಒಂದು ಕ್ರೇನ್ ಹಾಗೂ ಜೆಸಿಬಿ ಮೂಲಕ ಆನೆ ಇದ್ದ ವಾಹನವನ್ನ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಚಾಲಕ ಆರೋಗ್ಯಸ್ವಾಮಿಯ ಮೃತದೇಹವನ್ನ ಹೊಸೂರಿನ ಸರ್ಕಾರಿ ಆಸ್ಪತ್ರೆ ರವಾನಿಸಲಾಗಿದೆ.
ಆನೇಕಲ್ ಅ.24: ದಸರಾ (Dasara) ಅಂಬಾರಿ (Ambari) ಹೊತ್ತಿದ್ದ, ಆನೆ (Elephant) ಹೊತ್ತು ಸಾಗುತ್ತಿದ್ದ ವಾಹನಕ್ಕೆ ಅಪಘಾತವಾಗಿದ್ದು, ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ರಾಜ್ಯದ ಗಡಿಭಾಗ ತಮಿಳುನಾಡಿನ ಸಾನಮಾವು ಸಮೀಪದ ಬೆಂಗಳೂರು-ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿ (Bengaluru-Channai National Highway) ನಡೆದಿದೆ. ಆರೋಗ್ಯ ಸ್ವಾಮಿ (45 ವರ್ಷ) ಮೃತ ದುರ್ದೈವಿ. ದಸರಾ ಜಂಬೂ ಸವಾರಿ ಮುಗಿಸಿಕೊಂಡು ಹಿಂತಿರುಗುವಾದ ದುರಂತ ನಡೆದಿದೆ.
ಮಂಗಳವಾರ ಬನ್ನೇರುಘಟ್ಟದ ಶ್ರೀ ಚಂಪಕಧಾಮ ಸ್ವಾಮಿ ಅಂಬಾರಿ ಉತ್ಸವ ಇತ್ತು. ಹೀಗಾಗಿ ಅಂಬಾರಿ ಹೊರಲು ತಿರುಚ್ಚಿಯಿಂದ ಆನೆ ಬಂದಿತ್ತು. ಅಂಬಾರಿ ಉತ್ಸವನ್ನು ಮುಗಿಸಿಕೊಂಡು, ಆನೆಯನ್ನು ಈಚರ್ ವಾಹನದಲ್ಲಿ ಆರು ಮಂದಿ ಕರೆದೊಯ್ಯುತ್ತಿದ್ದರು. ಸಾನಮಾವು ಸಮೀಪದಲ್ಲಿ ಮೂತ್ರ ವಿಸರ್ಜನೆಗೆಂದು ಚಾಲಕ ಆರೋಗ್ಯ ಸ್ವಾಮಿ ರಸ್ತೆ ಪಕ್ಕದಲ್ಲಿ ವಾಹನ ನಿಲ್ಲಿಸಿದ್ದಾನೆ. ರಸ್ತೆ ಪಕ್ಕದಲ್ಲಿನ ಪ್ರದೇಶ ಇಳಿಜಾರು ಇದ್ದಿದ್ದರಿಂದ ವಾಹನ ಏಕಾಏಕಿ ಮುಂದೆ ಹೋಗಲು ಆರಂಭಿಸಿದೆ.
ಇದನ್ನೂ ಓದಿ: Mysore Dasara: ಆನೆ ಲದ್ದಿ ತುಳಿದರೆ ಒಳಿತಾಗುತ್ತದೆ ಎಂಬ ನಂಬಿಕೆ; ಅದನ್ನು ತುಳಿದು ಸಂಭ್ರಮಿಸಿದ ಮೈಸೂರು ನಿವಾಸಿಗಳು
ಇದನ್ನು ಕಂಡ ಚಾಲಕ ಆರೋಗ್ಯ ಸ್ವಾಮಿ ಚಲಿಸುತ್ತಿದ್ದ ವಾಹನವನ್ನ ನಿಲ್ಲಿಸಲು ಮುಂದಾಗಿದ್ದಾನೆ. ಆದರೆ ಈಚರ್ ವಾಹನ, ಚಾಲಕ ಆರೋಗ್ಯ ಸ್ವಾಮಿ ಮೇಲೆ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಹೊಸೂರಿನ ಅಡ್ಕೋ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿದ್ದಾರೆ. ಒಂದು ಕ್ರೇನ್ ಹಾಗೂ ಜೆಸಿಬಿ ಮೂಲಕ ಆನೆ ಇದ್ದ ವಾಹನವನ್ನ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಚಾಲಕ ಆರೋಗ್ಯಸ್ವಾಮಿಯ ಮೃತದೇಹವನ್ನ ಹೊಸೂರಿನ ಸರ್ಕಾರಿ ಆಸ್ಪತ್ರೆ ರವಾನಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ