ಟೋಲ್ ಶುಲ್ಕ ಕಟ್ಟುವ ವಿಚಾರಕ್ಕೆ ಸಿಬ್ಬಂದಿ ಮೇಲೆ ಹಲ್ಲೆ; ಕಿಡಿಗೆಡಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಟೋಲ್ ಶುಲ್ಕ ಕಟ್ಟುವ ವಿಚಾರಕ್ಕೆ ಟೋಲ್ ಸಿಬ್ಬಂದಿ ಮತ್ತು ಯುವಕರ ನಡುವೆ ಮಾತಿನ ಚಕಮಕಿ ನೆಡೆದಿದ್ದು, ವಾಗ್ವಾದ, ವಿಕೋಪಕ್ಕೆ ತಿರುಗಿ ಟೋಲ್ ಸಿಬ್ಬಂದಿಗೆ ಕಾಲಿನಿಂದ ಒದ್ದು ಯುವಕರು ಹಲ್ಲೆ ನಡೆಸಿದ್ದಾರೆ.
ಬೆಂಗಳೂರು: ಟೋಲ್ ಶುಲ್ಕ ಕಟ್ಟುವ ವಿಚಾರಕ್ಕೆ ವಾಹನದಲ್ಲಿ ಬಂದ ಕಿಡಿಗೆಡಿಗಳು ಟೋಲ್ ಸಿಬ್ಬಂದಿಗಳ(Toll staff) ಮೇಲೆ ಹಲ್ಲೆ ನೆಡೆಸಿದ ಘಟನೆ ನೆಲಮಂಗಲ ತಾಲ್ಲೂಕು ಕರೆಕಲ್ ಕ್ರಾಸ್ ಬಳಿಯ ಕುಣಿಗಲ್ ರಸ್ತೆ ಲ್ಯಾಂಕೋ ದೇವಿ ಟೋಲ್ನಲ್ಲಿ ನಡೆದಿದೆ. ಹಲ್ಲೆ(Attack) ನೆಡೆಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕುಣಿಗಲ್ ಕಡೆಯಿಂದ ಕಾರಿನಲ್ಲಿ ಬಂದ 7-8 ಮಂದಿ ಯುವಕರು, ಟೋಲ್ ಸಿಬ್ಬಂದಿ ಜತೆ ಗಲಾಟೆ ಮಾಡಿದ್ದಾರೆ. ಟೋಲ್ ಶುಲ್ಕ ಕಟ್ಟುವ ವಿಚಾರಕ್ಕೆ ಟೋಲ್ ಸಿಬ್ಬಂದಿ ಮತ್ತು ಯುವಕರ ನಡುವೆ ಮಾತಿನ ಚಕಮಕಿ ನೆಡೆದಿದ್ದು, ವಾಗ್ವಾದ, ವಿಕೋಪಕ್ಕೆ ತಿರುಗಿ ಟೋಲ್ ಸಿಬ್ಬಂದಿಗೆ ಕಾಲಿನಿಂದ ಒದ್ದು ಯುವಕರು(Youths) ಹಲ್ಲೆ ನಡೆಸಿದ್ದಾರೆ.
ಚೇರ್ನಿಂದ ಪ್ಲಾಜಾ ಗಾಜು ಹೊಡೆದು ಯುವಕರ ಗುಂಪು ಪುಂಡಾಟಿಕೆ ಮೆರೆದಿದೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟೋಲ್ ಸಿಬ್ಬಂದಿಗೆ ಹಲ್ಲೆ ನೆಡೆಸಿದ ಪುಂಡರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಚಾಮರಾಜನಗರ: ವರದಕ್ಷಿಣೆ ಕಿರುಕುಳ ಗೃಹಿಣಿ ಸಾವು; ಆರೋಪಿ ಹೆಸರು ಕೈಬಿಟ್ಟಿದ್ದಕ್ಕೆ ವಿಷ ಸೇವಿಸುವುದಾಗಿ ಎಚ್ಚರಿಕೆ ಕೊಟ್ಟ ಪೋಷಕರು
ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದಲ್ಲಿ ಒಬ್ಬ ಆರೋಪಿಯ ಹೆಸರನ್ನು ಕೈಬಿಟ್ಟು ಚಾರ್ಜ್‌ಶೀಟ್ ಸಲ್ಲಿಸಿದ ಹಿನ್ನೆಲೆ ಗೃಹಿಣಿ ಪೋಷಕರು ಡಿವೈಎಸ್‌ಪಿ ಕಚೇರಿಯ ಮುಂದೆ ಧರಣಿ ನಡೆಸಿದ ಘಟನೆ ನಡೆದಿದೆ. ಪೋಷಕರು ಆರೋಪಿ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಸೇರಿಸಬೇಕೆಂದು ಒತ್ತಾಯಿಸಿದ್ದಾರೆ. ಆರೋಪಿ ಹೆಸರು ಸೇರಿಸದಿದ್ದರೆ ಇಲ್ಲೇ ವಿಷ ಕುಡಿದು ಸಾಯುತ್ತೇವೆಂದು ಬೆದರಿಕೆ ಹಾಕಿದ್ದಾರೆ.
ಮಗಳ ಸಾವಿನ ನೋವಿನಲ್ಲಿರುವ ಪೋಷಕರು ಮಗಳ ಸಾವಿಗೆ ನ್ಯಾಯ ಬೇಕೆಂದು ಡಿವೈಎಸ್‌ಪಿ ಕಚೇರಿಯ ಮುಂದೆ ಧರಣಿ ಕೂತಿದ್ದಾರೆ. ಚಾಮರಾಜನಗರದ ಉಡಿಗಾಲದಲ್ಲಿ ಕಳೆದ ಡಿಸೆಂಬರ್‌ನಲ್ಲಿ ದಿವ್ಯಾ ಎಂಬ ಮಹಿಳೆ ವರದಕ್ಷಿಣೆ ಕಿರುಕುಳ ಹಿನ್ನೆಲೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿತ್ತು. ಮೃತ ದಿವ್ಯಾಳ ಪತಿ, ಅತ್ತೆ, ಮಾವ, ಭಾವ, ವಾರಗಿತ್ತಿ ಮೇಲೆ ಪ್ರಕರಣ ದಾಖಲಿಸಿದ್ರು. ಆದ್ರೆ ಈಗ ಈ ಪ್ರಕರಣದಲ್ಲಿ ವಾರಗತ್ತಿ ರೇಖಾಳಿಗೆ ಯಾವುದೇ ಸಂಬಂಧವಿಲ್ಲ ಎಂದು ಪೋಲಿಸರು ಚಾರ್ಜ್ ಶೀಟ್ನಲ್ಲಿ ಹೆಸರು ಕೈ ಬಿಟ್ಟಿದ್ದಾರೆ. ಇದಕ್ಕೆ ಆಕ್ರೋಶಗೊಂಡ ದಿವ್ಯಾ ಪೋಷಕರು ರೇಖಾಳನ್ನು ಪ್ರಕರಣದಲ್ಲಿ ಸೇರಿಸಿ ಇಲ್ಲವೇ ನಾವು ವಿಷ ಕುಡಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಪೋಲಿಸರು ಪೋಷಕರನ್ನು ಸಮಾಧಾನಪಡಿಸಿದ್ದಾರೆ.
ಇದನ್ನೂ ಓದಿ:
ವಿಜಯನಗರದಲ್ಲಿ ವಕೀಲರ ಮೇಲೆ ಚಾಕುವಿನಿಂದ ಹಲ್ಲೆ, ಬೆಂಗಳೂರಿನಲ್ಲಿ ಖಾಸಗಿ ಫೈನಾನ್ಸ್ನ 7 ಕಾರ್ಗಳಿಗೆ ಬೆಂಕಿ
Doddaballapur: ದೊಡ್ಡಬಳ್ಳಾಪುರ ಬಳಿ ಮಹಿಳೆಯ ಸೀರೆ ಬಿಚ್ಚಿ, ಅದೇ ಸೀರೆಯಿಂದ ಮರಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಆರೋಪ
Published On - 6:32 pm, Fri, 11 March 22