ಸ್ವಸಹಾಯ ಸಂಘಗಳಿಂದ ಸಿದ್ಧವಾಯ್ತು 13 ಲಕ್ಷ ಮಾಸ್ಕ್
ಬೆಂಗಳೂರು: ಕೊರೊನಾ ಇಂಚಿಂಚಾಗಿ ದೇಶದೆಲ್ಲೆಡೆ ಹರಡುತ್ತಿದೆ. ಈ ಸಾಂಕ್ರಮಿಕ ರೋಗಕ್ಕೆ ಪ್ರತಿಯೊಬ್ಬ ಪ್ರಜೆಯೂ ಬೆಚ್ಚಿಬಿದ್ದಿದ್ದಾನೆ. ಈ ಸೋಂಕಿನಿಂದ ನಮನ್ನು ನಾವು ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಮಾಸ್ಕ್ ಬಳಸುವುದು ಅತಿ ಮುಖ್ಯ. ಹೀಗಾಗಿ ಮಾಸ್ಕ್ಗಳ ಬೇಡಿಕೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳು 13 ಲಕ್ಷ ಮಾಸ್ಕ್ ತಯಾರಿಸಿವೆ. ಮಾಸ್ಕ್ಗಳ ಅಭಾವ ತಡೆಯಲು ಸಂಜೀವಿನಿ ಸಂಸ್ಥೆಯ ಸಹಯೋಗದಲ್ಲಿ ಮಾಸ್ಕ್ ತಯಾರಿಕೆಯ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಸ್ವಸಹಾಯ ಸಂಘಗಳಿಂದ 13 ಲಕ್ಷ ಮಾಸ್ಕ್ ತಯಾರಿ ಮಾಡಲಾಗಿದೆ. ಅಲ್ಲದೆ ಪಿಪಿಇ ಗೌನ್‌ಗಳನ್ನು ಸಹ ಸಿದ್ಧಪಡಿಸಲಾಗುತ್ತಿದೆ. […]
ಬೆಂಗಳೂರು: ಕೊರೊನಾ ಇಂಚಿಂಚಾಗಿ ದೇಶದೆಲ್ಲೆಡೆ ಹರಡುತ್ತಿದೆ. ಈ ಸಾಂಕ್ರಮಿಕ ರೋಗಕ್ಕೆ ಪ್ರತಿಯೊಬ್ಬ ಪ್ರಜೆಯೂ ಬೆಚ್ಚಿಬಿದ್ದಿದ್ದಾನೆ. ಈ ಸೋಂಕಿನಿಂದ ನಮನ್ನು ನಾವು ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಮಾಸ್ಕ್ ಬಳಸುವುದು ಅತಿ ಮುಖ್ಯ. ಹೀಗಾಗಿ ಮಾಸ್ಕ್ಗಳ ಬೇಡಿಕೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳು 13 ಲಕ್ಷ ಮಾಸ್ಕ್ ತಯಾರಿಸಿವೆ.
ಮಾಸ್ಕ್ಗಳ ಅಭಾವ ತಡೆಯಲು ಸಂಜೀವಿನಿ ಸಂಸ್ಥೆಯ ಸಹಯೋಗದಲ್ಲಿ ಮಾಸ್ಕ್ ತಯಾರಿಕೆಯ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಸ್ವಸಹಾಯ ಸಂಘಗಳಿಂದ 13 ಲಕ್ಷ ಮಾಸ್ಕ್ ತಯಾರಿ ಮಾಡಲಾಗಿದೆ. ಅಲ್ಲದೆ ಪಿಪಿಇ ಗೌನ್‌ಗಳನ್ನು ಸಹ ಸಿದ್ಧಪಡಿಸಲಾಗುತ್ತಿದೆ. ಈ ಮಾಸ್ಕ್ಗಳನ್ನು ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖರೀದಿಸಿ ಆ ವ್ಯಾಪ್ತಿಯಲ್ಲಿ ಹಂಚಿಕೆ ಮಾಡಲಾಗುತ್ತಿದೆ ಎಂದು ವಿಧಾನಸೌಧದಲ್ಲಿ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.