ಸ್ವಸಹಾಯ ಸಂಘಗಳಿಂದ ಸಿದ್ಧವಾಯ್ತು 13 ಲಕ್ಷ ಮಾಸ್ಕ್

ಬೆಂಗಳೂರು: ಕೊರೊನಾ ಇಂಚಿಂಚಾಗಿ ದೇಶದೆಲ್ಲೆಡೆ ಹರಡುತ್ತಿದೆ. ಈ ಸಾಂಕ್ರಮಿಕ ರೋಗಕ್ಕೆ ಪ್ರತಿಯೊಬ್ಬ ಪ್ರಜೆಯೂ ಬೆಚ್ಚಿಬಿದ್ದಿದ್ದಾನೆ. ಈ ಸೋಂಕಿನಿಂದ ನಮನ್ನು ನಾವು ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಮಾಸ್ಕ್ ಬಳಸುವುದು ಅತಿ ಮುಖ್ಯ. ಹೀಗಾಗಿ ಮಾಸ್ಕ್​ಗಳ ಬೇಡಿಕೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳು 13 ಲಕ್ಷ ಮಾಸ್ಕ್ ತಯಾರಿಸಿವೆ. ಮಾಸ್ಕ್​ಗಳ ಅಭಾವ ತಡೆಯಲು ಸಂಜೀವಿನಿ ಸಂಸ್ಥೆಯ ಸಹಯೋಗದಲ್ಲಿ ಮಾಸ್ಕ್ ತಯಾರಿಕೆಯ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಸ್ವಸಹಾಯ ಸಂಘಗಳಿಂದ 13 ಲಕ್ಷ ಮಾಸ್ಕ್ ತಯಾರಿ ಮಾಡಲಾಗಿದೆ. ಅಲ್ಲದೆ ಪಿಪಿಇ ಗೌನ್‌ಗಳನ್ನು ಸಹ ಸಿದ್ಧಪಡಿಸಲಾಗುತ್ತಿದೆ. […]

ಸ್ವಸಹಾಯ ಸಂಘಗಳಿಂದ ಸಿದ್ಧವಾಯ್ತು 13 ಲಕ್ಷ ಮಾಸ್ಕ್
ಸಾಧು ಶ್ರೀನಾಥ್​

Updated on: Apr 22, 2020 | 1:44 PM

ಬೆಂಗಳೂರು: ಕೊರೊನಾ ಇಂಚಿಂಚಾಗಿ ದೇಶದೆಲ್ಲೆಡೆ ಹರಡುತ್ತಿದೆ. ಈ ಸಾಂಕ್ರಮಿಕ ರೋಗಕ್ಕೆ ಪ್ರತಿಯೊಬ್ಬ ಪ್ರಜೆಯೂ ಬೆಚ್ಚಿಬಿದ್ದಿದ್ದಾನೆ. ಈ ಸೋಂಕಿನಿಂದ ನಮನ್ನು ನಾವು ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಮಾಸ್ಕ್ ಬಳಸುವುದು ಅತಿ ಮುಖ್ಯ. ಹೀಗಾಗಿ ಮಾಸ್ಕ್​ಗಳ ಬೇಡಿಕೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳು 13 ಲಕ್ಷ ಮಾಸ್ಕ್ ತಯಾರಿಸಿವೆ.

ಮಾಸ್ಕ್​ಗಳ ಅಭಾವ ತಡೆಯಲು ಸಂಜೀವಿನಿ ಸಂಸ್ಥೆಯ ಸಹಯೋಗದಲ್ಲಿ ಮಾಸ್ಕ್ ತಯಾರಿಕೆಯ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಸ್ವಸಹಾಯ ಸಂಘಗಳಿಂದ 13 ಲಕ್ಷ ಮಾಸ್ಕ್ ತಯಾರಿ ಮಾಡಲಾಗಿದೆ. ಅಲ್ಲದೆ ಪಿಪಿಇ ಗೌನ್‌ಗಳನ್ನು ಸಹ ಸಿದ್ಧಪಡಿಸಲಾಗುತ್ತಿದೆ. ಈ ಮಾಸ್ಕ್​ಗಳನ್ನು ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖರೀದಿಸಿ ಆ ವ್ಯಾಪ್ತಿಯಲ್ಲಿ ಹಂಚಿಕೆ ಮಾಡಲಾಗುತ್ತಿದೆ ಎಂದು ವಿಧಾನಸೌಧದಲ್ಲಿ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us