Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರೆಸ್ಟ್​​ ವಾರೆಂಟ್​ ಎಚ್ಚರಿಗೆ ಬೆನ್ನಲ್ಲೇ ಕೋರ್ಟ್​​ಗೆ ಓಡೋಡಿ ಬಂದ ಸಚಿವ ಮುನಿಯಪ್ಪ

2013ರ ಹಲ್ಲೆ ಅಟ್ರಾಸಿಟಿ ಕೇಸ್​ನಲ್ಲಿ ಜನಪ್ರತಿನಿಧಿಗಳ ಕೋರ್ಟ್‌ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಸಚಿವ ಕೆ.ಹೆಚ್‌.ಮುನಿಯಪ್ಪಗೆ ಜಾಮೀನು ನೀಡಿ ಬುಧವಾರ ಆದೇಶ ಹೊರಡಿಸಿದ್ದಾರೆ. ಅರೆಸ್ಟ್​​ ವಾರೆಂಟ್ ಹೊರಡಿಸುವುದಾಗಿ ಎಚ್ಚರಿಗೆ ಬೆನ್ನಲ್ಲೇ ಸಚಿವ ಮುನಿಯಪ್ಪ ಕೋರ್ಟ್​​ಗೆ ಓಡೋಡಿ ಬಂದಿದ್ದಾರೆ. ಲಕ್ಷ್ಮಿ ನಾರಾಯಣ್ ಗೂ ಜಾಮೀನು ಮಂಜೂರು ಮಾಡಲಾಗಿದೆ.

ಅರೆಸ್ಟ್​​ ವಾರೆಂಟ್​ ಎಚ್ಚರಿಗೆ ಬೆನ್ನಲ್ಲೇ ಕೋರ್ಟ್​​ಗೆ ಓಡೋಡಿ ಬಂದ ಸಚಿವ ಮುನಿಯಪ್ಪ
ಅರೆಸ್ಟ್​​ ವಾರೆಂಟ್​ ಎಚ್ಚರಿಗೆ ಬೆನ್ನಲ್ಲೇ ಕೋರ್ಟ್​​ಗೆ ಓಡೋಡಿ ಬಂದ ಸಚಿವ ಮುನಿಯಪ್ಪ
Follow us
Ramesha M
| Updated By: ಗಂಗಾಧರ​ ಬ. ಸಾಬೋಜಿ

Updated on:Mar 12, 2025 | 4:45 PM

ಬೆಂಗಳೂರು, ಮಾರ್ಚ್​ 12: 2013ರ ಹಲ್ಲೆ ಅಟ್ರಾಸಿಟಿ ಕೇಸ್​​ಗೆ ಸಂಬಂಧಿಸಿದಂತೆ ರಾಬರ್ಟ್‌ಸನ್‌ ಪೇಟೆ ಪೊಲೀಸರ ಬಿ ರಿಪೋರ್ಟ್ ತಿರಸ್ಕರಿಸಿ‌ ಸಚಿವ ಕೆ.ಹೆಚ್.ಮುನಿಯಪ್ಪಗೆ (KH Muniyappa) ಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು. ಹಾಗಾಗಿ ಇಂದು ಕೋರ್ಟ್​ಗೆ ಹಾಜರಾಗಬೇಕಿತ್ತು. ಗೈರಾಗಿದ್ದಕ್ಕೆ ಇತ್ತ ಜಡ್ಜ್ ಸಂತೋಷ್ ಗಜಾನನ ಭಟ್ ಗರಂ ಆಗಿದ್ದರು. ಖುದ್ದು ಹಾಜರಾಗದಿದ್ದರೆ ಅರೆಸ್ಟ್​​ ವಾರೆಂಟ್ ಹೊರಡಿಸುವುದಾಗಿ ಎಚ್ಚರಿಗೆ ಬೆನ್ನಲ್ಲೇ ಕೋರ್ಟ್​​ಗೆ ಸಚಿವ ಮುನಿಯಪ್ಪ ಓಡೋಡಿ ಬಂದಿದ್ದು, ಇದೀಗ ಜಾಮೀನು (Bail) ಮಂಜೂರು ಮಾಡಲಾಗಿದೆ.

2013ರ ಹಲ್ಲೆ ಅಟ್ರಾಸಿಟಿ ಕೇಸ್​​ಗೆ ಸಂಬಂಧಿಸಿದಂತೆ ಸದ್ಯ ಜನಪ್ರತಿನಿಧಿಗಳ ಕೋರ್ಟ್‌ನಿಂದ ಕೆ.ಹೆಚ್‌.ಮುನಿಯಪ್ಪ ಹಾಗೂ ಲಕ್ಷ್ಮೀ ನಾರಾಯಣ್​ಗೆ ಜಾಮೀನು ಮಂಜೂರು ಮಾಡಲಾಗಿದೆ. ಕೋರ್ಟ್‌ಗೆ ಕೆ.ಹೆಚ್‌.ಮುನಿಯಪ್ಪ 50 ಸಾವಿರ ರೂ. ಬಾಂಡ್ ನೀಡಬೇಕಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಹೇಳಿದ್ದು ಸರಿಯಾಗಿದೆ: ಅಧಿಕಾರ ಹಂಚಿಕೆ ಬಗ್ಗೆ ಹೊಸ ಬಾಂಬ್ ಸಿಡಿಸಿದ ಸಚಿವ ಮುನಿಯಪ್ಪ

ಇದನ್ನೂ ಓದಿ
Image
ಮಹಾರಾಷ್ಟ್ರದಲ್ಲಿ RSS ಕಾರ್ಯಕರ್ತರನ್ನ ಪಿಎ ಮಾಡಿಲ್ವಾ? ಸಿಎಂ ತಿರುಗೇಟು
Image
ಜೀವಾ ಆತ್ಮಹತ್ಯೆ: Dysp ಬಂಧನಕ್ಕೆ ಸಿಕ್ಕ ಮಹತ್ವದ ಸಾಕ್ಷ್ಯ ಏನು ಗೊತ್ತಾ?
Image
ಕ್ಷೇತ್ರ ಮರುವಿಂಡಣೆ ವಿರುದ್ಧ ಬೆಂಬಲ ಕೋರಿ ಕರ್ನಾಟಕಕ್ಕೆ ತಮಿಳುನಾಡು ಪತ್ರ
Image
ಮಹಾರಾಷ್ಟ್ರದಲ್ಲಿ ಲಾಡ್ಲೀ ಬಹೆನಾ ಸ್ಕೀಮ್ ಬಂದ್ ಆಗಿದೆ: ಹೆಬ್ಬಾಳ್ಕರ್

2013ರ ಹಲ್ಲೆ ಅಟ್ರಾಸಿಟಿ ಕೇಸ್​​ಗೆ ಸಂಬಂಧಿಸಿದಂತೆ ಸಚಿವ ಕೆ.ಹೆಚ್.ಮುನಿಯಪ್ಪ ವಿರುದ್ಧ ರಾಬರ್ಟ್‌ಸನ್‌ ಪೇಟೆ ಪೊಲೀಸರ ಬಿ ರಿಪೋರ್ಟ್ ಸಲ್ಲಿಸಿದ್ದರು. ಈ ವೇಳೆ ಬಿ ರಿಪೋರ್ಟ್ ತಿರಸ್ಕರಿಸಿದ ಮೇಲೆ ಸಚಿವ ಕೆ.ಹೆಚ್.ಮುನಿಯಪ್ಪಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಈ ಹಿನ್ನೆಲೆ ಇಂದು ಅವರು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಅವರು ಗೈರಾಗಿದ್ದರು. ಇದು ಜಡ್ಜ್ ಸಂತೋಷ್ ಗಜಾನನ ಭಟ್ ಅವರ ಅಸಮಾಧಾನಕ್ಕೂ ಕಾರಣವಾಗಿದೆ.

ಇದನ್ನೂ ಓದಿ: Karnataka Budget Session: ಐದು-ವರ್ಷ ಅವಧಿಗೆ ತಾನೇ ಮುಖ್ಯಮಂತ್ರಿ ಅಂತ ಹೇಳಿ ಸಿದ್ದರಾಮಯ್ಯ ಅಧಿಕಾರ ಹಂಚಿಕೆ ಕಿತ್ತಾಟಕ್ಕೆ ತೆರೆ ಎಳೆದರೇ?

2013 ರ ವಿಧಾನಸಭಾ ಚುನಾವಣೆಯಲ್ಲಿ ಕೆಜಿಎಫ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿ. ಶಂಕರ್ ಮೇಲೆ ಅಂದಿನ ಸಂಸದರಾಗಿದ್ದ ಮುನಿಯಪ್ಪ ಹಾಗೂ ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:37 pm, Wed, 12 March 25