2023ರಲ್ಲಿ ಬೆಂಗಳೂರಲ್ಲಿ 207 ಕೊಲೆಗಳು; ಕ್ಷುಲ್ಲಕ, ಅಕ್ರಮ ಸಂಬಂಧಕ್ಕೆ ಹೆಚ್ಚು ಹತ್ಯೆ ಕೇಸ್ ದಾಖಲು

2023 ರ ಅಪರಾಧ ಕೃತ್ಯಗಳ ಅಂಕಿ ಅಂಶವನ್ನು ಬೆಂಗಳೂರು ಪೊಲೀಸರು(Bengaluru Police) ಬಿಡುಗಡೆಗೊಳಿಸಿದೆ. ಅದರಂತೆ 2022ಕ್ಕೆ ಹೊಲಿಸಿದರೆ 2023ರಲ್ಲಿ ಹೆಚ್ಚು ಕೊಲೆ(Murder)ಗಳು ವರದಿಯಾಗಿದೆ. ಹೌದು, 2022 ರ ವರ್ಷಕ್ಕೆ ಹೋಲಿಸಿದರೆ, 2023 ರಲ್ಲಿಯೇ ಅಧಿಕ ಹತ್ಯೆಯ ಪ್ರಕರಣಗಳು ದಾಖಲಾಗಿದ್ದು, ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

2023ರಲ್ಲಿ ಬೆಂಗಳೂರಲ್ಲಿ 207 ಕೊಲೆಗಳು; ಕ್ಷುಲ್ಲಕ, ಅಕ್ರಮ ಸಂಬಂಧಕ್ಕೆ ಹೆಚ್ಚು ಹತ್ಯೆ ಕೇಸ್ ದಾಖಲು
ಬೆಂಗಳೂರಿನಲ್ಲಿ 2023 ರಲ್ಲಿ ದಾಖಲಾದ ಅಪರಾಧಗಳ ಸಂಖ್ಯೆ
Follow us
ರಾಚಪ್ಪಾಜಿ ನಾಯ್ಕ್
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 03, 2024 | 8:02 PM

ಬೆಂಗಳೂರು, ಜ.03: 2023 ರ ಅಪರಾಧ ಕೃತ್ಯಗಳ ಅಂಕಿ ಅಂಶವನ್ನು ಬೆಂಗಳೂರು ಪೊಲೀಸರು(Bengaluru Police) ಬಿಡುಗಡೆಗೊಳಿಸಿದೆ. ಅದರಂತೆ 2022ಕ್ಕೆ ಹೊಲಿಸಿದರೆ 2023ರಲ್ಲಿ ಹೆಚ್ಚು ಕೊಲೆ(Murder)ಗಳು ವರದಿಯಾಗಿದೆ. ಹೌದು, 2022 ರ ವರ್ಷಕ್ಕೆ ಹೋಲಿಸಿದರೆ, 2023 ರಲ್ಲಿಯೇ ಅಧಿಕ ಹತ್ಯೆಯ ಪ್ರಕರಣಗಳು ದಾಖಲಾಗಿದ್ದು, ಅಚ್ಚರಿ ಅಂದರೆ ಈ ಎಲ್ಲಾ ಪ್ರಕರಣಗಳಲ್ಲಿ ಹೆಚ್ಚಾಗಿ ಕ್ಷುಲ್ಲಕ ಮತ್ತು ಅಕ್ರಮ ಸಂಬಂಧಕ್ಕೆ ಕೊಲೆಗಳಾಗಿವೆ ಎಂದು ಬೆಂಗಳೂರು ಪೊಲೀಸರು ಬಿಡುಗಡೆಗೊಳಿಸಿದ ಅಂಕಿ-ಅಂಶಗಳು ಹೇಳುತ್ತಿವೆ.

2022ರಲ್ಲಿ 156 ಕೊಲೆಗಳಾಗಿದ್ರೆ 2023ರಲ್ಲಿ 207 ಕೊಲೆಗಳು

ಇನ್ನು 2023 ರಲ್ಲಿ ದಾಖಲಾದ 207 ಕೊಲೆಗಳಲ್ಲಿ 202 ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.  ಕ್ಷುಲ್ಲಕ ವಿಚಾರಕ್ಕೆ 49, ಅಕ್ರಮ ಸಂಬಂಧಕ್ಕೆ 32 ಹಾಗೂ 7 ರೌಡಿ ಶೀಟರ್​ಗಳ ಕೊಲೆ ನಡೆದಿದೆ. ಇನ್ನುಳಿದಂತೆ 1,692 ಮನೆ ಕಳ್ಳತನ, 5,909 ವಾಹನ ಕಳ್ಳತನ, 673 ರಾಬರಿ, 36 ಡಾಕಾಯಿತಿ, 153 ಸರಗಳ್ಳತನ ವರದಿಯಾಗಿದೆ.

2023ರಲ್ಲಿ 176 ಅತ್ಯಾಚಾರ ಪ್ರಕರಣ ವರದಿಯಾಗಿದ್ದು, 176 ಪ್ರಕರಣಗಳಲ್ಲಿಯೂ ಆರೋಪಿಗಳನ್ನು ಬಂಧಿಸಲಾಗಿದೆ. ಇದರ ಜೊತೆಗೆ 1,135 ಲೈಂಗಿಕ ದೌರ್ಜನ್ಯ ಕೇಸ್​ಗಳು, 1,189 ಕಿಡ್ನಾಪ್ ಕೇಸ್​ಗಳಲ್ಲಿ 981 ಪತ್ತೆಯಾಗಿದೆ. 1007 ವರದಕ್ಷಿಣೆ ಕಿರುಕುಳ ಪ್ರಕರಣಗಳು ಸೇರಿದಂತೆ 17,623 ಸೈಬರ್ ಪ್ರಕರಣಗಳು ವರದಿಯಾಗಿದ್ದು, 1,271 ಪ್ರಕರಣಗಳನ್ನ ಭೇದಿಸಿದ್ದಾರೆ.

ಇದನ್ನೂ ಓದಿ:ಅಪರಾಧ ಕೃತ್ಯ ತಡೆಗೆ ಗೃಹ ಇಲಾಖೆ ದಿಟ್ಟ ಕ್ರಮ: ಬೆಂಗಳೂರಿನಲ್ಲಿ ಹೈ ರೆಸ್ಯೂಲೇಷನ್ ಕ್ಯಾಮೆರಾ ಅಳವಡಿಕೆ

2023 ರಲ್ಲಿ 5,848 ಆಕಸ್ಮಿಕ ಸಾವು ಮತ್ತು ಆತ್ಮಹತ್ಯೆ ಕೇಸ್ ದಾಖಲು ಆಗಿದ್ದು, ಕುಖ್ಯಾತ 324 ರೌಡಿಗಳು ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇನ್ನು 103 ಕೋಟಿ ಮೌಲ್ಯದ 5,387 ಕೆಜಿ ಡ್ರಗ್ಸ್​ನ್ನು ಪೊಲೀಸರು ಸೀಜ್ ಮಾಡಿದ್ದು, ಡ್ರಗ್ಸ್ ಕೇಸ್ಗಳಲ್ಲಿ 4,399 ಜನರನ್ನ ಬಂಧಿಸಲಾಗಿದೆ. ಇನ್ನುಳಿದಂತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ 126 ವಿದೇಶಿಗರನ್ನು ಬಂಧಿಸಲಾಗಿದ್ದರೆ, 247 ವಿದೇಶಿಗರನ್ನ ಬೆಂಗಳೂರು ಪೊಲೀಸರು ಗಡಿಪಾರು ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ