ಬೆಂಗಳೂರಿನಲ್ಲಿ ಬಾಸ್ಕೆಟ್ ಬಾಲ್ ಆಟಗಾರ್ತಿ ಸೋನಿಯಾ ನಿಗೂಢ ಸಾವು

ಬೆಂಗಳೂರಿನಲ್ಲಿ ಬಾಸ್ಕೆಟ್ ಬಾಲ್ ಕೋಚ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಗುರುತಿಸಿಕೊಂಡು ಸ್ಟೇಟ್, ನ್ಯಾಷನಲ್ ಲೆವೆಲ್ ಬಾಸ್ಕೆಟ್ ಬಾಲ್ ಟೂರ್ನಿಗಳಲ್ಲಿ ಭಾಗಿಯಾಗಿದ್ದ ಸೋನಿಯಾ ಸಾವನ್ನಪ್ಪಿದ್ದು, ಈ ಸಾವಿನ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಕೆಲವರು ಆತ್ಮಹತ್ಯೆ ಎಂದು ಹೇಳುತ್ತಿದ್ದರೆ, ಕುಟುಂಬಸ್ಥರು ಮಾತ್ರ ಬಾತ್​ ರೂಮ್​ನಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ ಎನ್ನುತ್ತಿದ್ದಾರೆ.

ಬೆಂಗಳೂರಿನಲ್ಲಿ ಬಾಸ್ಕೆಟ್ ಬಾಲ್ ಆಟಗಾರ್ತಿ ಸೋನಿಯಾ ನಿಗೂಢ ಸಾವು
Basketball Player Sonia
Edited By:

Updated on: Mar 13, 2025 | 3:47 PM

ಬೆಂಗಳೂರು, (ಮಾರ್ಚ್​ 13): ಸೋನಿಯಾ ಎನ್ನುವ ಬಾಸ್ಕೆಟ್ ಬಾಲ್ ಆಟಗಾರ್ತಿ ಬೆಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ಸ್ಟೇಟ್, ನ್ಯಾಷನಲ್ ಲೆವೆಲ್ ಬಾಸ್ಕೆಟ್ ಬಾಲ್ ಟೂರ್ನಿಗಳಲ್ಲಿ ಭಾಗಿಯಾಗಿದ್ದ 26 ವರ್ಷದ ಸೋನಿಯಾ ನಿನ್ನೆ(ಮಾರ್ಚ್​ 12) ಬೆಳಗ್ಗೆ 10 ಗಂಟೆ ಬೆಂಗಳೂರಿನ ಪೊಟ್ಲಪ್ಪ ಗಾರ್ಡನ್​ ಬಳಿ ಇರುವ ಮನೆಯಲ್ಲಿ ಸಾವನ್ನಪ್ಪಿದ್ದಾಳೆ. ಆದ್ರೆ, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಶಂಕೆ ವ್ಯಕ್ತಪಡಿಸಿದ್ದರೆ, ಇಲ್ಲ ಬಾತ್​ ರೂಮ್​ನಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ಹೇಳುತ್ತಿದ್ದಾರೆ. ಹೀಗಾಗಿ ಸೋನಿಯಾ ಸಾವು ನಿಗೂಢವಾಗಿದೆ.

ಕಳೆದ ಏಳೆಂಟು ವರ್ಷಗಳಿಂದ ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಗುರುತಿಸಿಕೊಂಡಿದ್ದ ಸೋನಿಯಾ, ರಾಜ್ಯ, ರಾಷ್ಟ್ರೀಯ ಮಟ್ಟದ ಬಾಸ್ಕೆಟ್ ಬಾಲ್ ಟೂರ್ನಿಗಳಲ್ಲಿ ಸೋನಿಯಾ ಭಾಗಿಯಾಗಿದ್ದಳು. ಇನ್ನು ಮುಂದಿನ ತಿಂಗಳು ದುಬೈನಲ್ಲಿ ನಡೆಯಿತ್ತಿರುವ ಟೂರ್ನಿಯಲ್ಲಿ ಸೋನಿಯಾ ಭಾಗವಹಿಸಬೇಕಿತ್ತು. ಆದ್ರೆ, ಇದೀಗ ಏಕಾಏಕಿ ಸೋನಿಯಾ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ: ಮನೆಗಾಗಿ ಮನವಿ ಮಾಡಿದ ಮಹಿಳೆಯನ್ನು ಮಂಚಕ್ಕೆ ಕರೆದ ಗ್ರಾಮ ಪಂಚಾಯ್ತಿ ಸದಸ್ಯ

ಸ್ನಾನ ಮಾಡುವಾಗ ಬಾತ್ ನಲ್ಲಿ ಬಿದ್ದು ತಲೆಗೆ ಗಂಭೀರವಾಗಿ. ಕೂಡಲೇ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಸಾವನ್ನಪ್ಪಿದ್ದಾಳೆಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಸದ್ಯ ಬಾಸ್ಕೆಟ್ ಬಾಲ್ ಆಟಗಾರ್ತಿ ಸೋನಿಯಾ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ಆಡುಗೋಡಿ ಪೊಲೀಸರು ಯುಡಿಆರ್ ದಾಖಲಿಸಿಕೊಂಡು ತನಿಖೆ ನಡೆಸಿದದಾರೆ.

ಕಾಲುವೆಯಲ್ಲಿ ಮಹಿಳೆ ಶವ ಪತ್ತೆ

ಯಾದಗಿರಿ: ನಾರಾಯಣಪುರ ಡ್ಯಾಂ ನ ಎಡದಂಡೆ ಕಾಲುವೆಯಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣ ಹೊರ ವಲಯದ ಕಾಲುವೆಯಲ್ಲಿ ಲಕ್ಷ್ಮೀಬಾಯಿ ಶೇಕ್ ಸಿಂಧಿ (56) ಶವ ಪತ್ತೆಯಾಗಿದೆ. ಲಕ್ಷ್ಮೀಬಾಯಿ ಶೇಕ್ ಸಿಂಧಿ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಲಕ್ಕುಂಡಿ ಗ್ರಾಮದ ಮಹಿಳೆ ಎಂದು ಗುರುತಿಸಲಾಗಿದ್ದು, ಸ್ಥಳಕ್ಕೆ ಕೆಂಭಾವಿ ಪಿಎಸ್ಐ ಅಮೋಜ ಕಾಂಬಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ