3 ತಿಂಗಳ ಬಿಲ್ ಬಾಕಿ: ನಾಡಕಚೇರಿ ಕಟ್ಟಡದಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಳಿಸಿದ ಬೆಸ್ಕಾಂ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 02, 2023 | 5:28 PM

ಕಳೆದ 3 ತಿಂಗಳ ಸುಮಾರು 1 ಲಕ್ಷ ರೂ. ಕರೆಂಟ್ ಬಿಲ್ ಪೆಂಡಿಂಗ್​ ಹಿನ್ನೆಲೆ ನಗರದ ಕಾಡುಮಲ್ಲೇಶ್ವ ವಾರ್ಡ್ ಸಂಖ್ಯೆ 65ರ ನಾಡ ಕಚೇರಿ ಬಿಲ್ಡಿಂಗ್‌ನಲ್ಲಿ ಬೆಸ್ಕಾಂ ಪವರ್ ಕಟ್ ಮಾಡಿದೆ. ಕರೆಂಟ್ ಇಲ್ಲದ ಪರಿಣಾಮ ಬೆಳಿಗ್ಗೆಯಿಂದ ನಾಡ ಕಚೇರಿಗೆ ತಮ್ಮ ಕೆಲಸಗಳನ್ನ ಮಾಡಿಕೊಳ್ಳಲು ಬಂದ ಜನರು ಹಾಗೆ ವಾಪಸ್ಸಾಗುತ್ತಿದ್ದಾರೆ. 

3 ತಿಂಗಳ ಬಿಲ್ ಬಾಕಿ: ನಾಡಕಚೇರಿ ಕಟ್ಟಡದಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಳಿಸಿದ ಬೆಸ್ಕಾಂ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ನವೆಂಬರ್​​​​​​​ 02: ಕಳೆದ 3 ತಿಂಗಳ ಸುಮಾರು 1 ಲಕ್ಷ ರೂ. ಕರೆಂಟ್ ಬಿಲ್ ಪೆಂಡಿಂಗ್​ ಹಿನ್ನೆಲೆ ನಗರದ ಕಾಡುಮಲ್ಲೇಶ್ವ ವಾರ್ಡ್ ಸಂಖ್ಯೆ 65ರ ನಾಡ ಕಚೇರಿ ಬಿಲ್ಡಿಂಗ್‌ನಲ್ಲಿ ಬೆಸ್ಕಾಂ (Bescom) ಪವರ್ ಕಟ್ ಮಾಡಿದೆ. ಒಂದೇ ಕಟ್ಟಡದಲ್ಲಿ ಬಿಬಿಎಂಪಿ ಕಂದಾಯ ಇಲಾಖೆ, ಗ್ರಂಥಾಲಯ, ನಾಡಕಚೇರಿ ಹಾಗೂ ಬಿಬಿಎಂಪಿ ಖಾತೆ ಬದಲಾವಣೆ ಹಾಗೂ ಜನನ ಮರಣ ಪ್ರಮಾಣ ಪತ್ರ ಕಚೇರಿಗಳಿವೆ. ಕರೆಂಟ್ ಇಲ್ಲದ ಪರಿಣಾಮ ಬೆಳಿಗ್ಗೆಯಿಂದ ನಾಡ ಕಚೇರಿಗೆ ತಮ್ಮ ಕೆಲಸಗಳನ್ನ ಮಾಡಿಕೊಳ್ಳಲು ಬಂದ ಜನರು ವಾಪಸ್ಸಾಗುತ್ತಿದ್ದಾರೆ.

ನಾಡ ಕಚೇರಿಯಲ್ಲಿ ಪವರ್​ ಕಟ್​ ಒಂದು ಕಡೆ ಆದರೆ, ಇನ್ನೊಂದು ಕಡೆ ಕೆಲಸ ಮಾಡಲು ಅಧಿಕಾರಿಗಳೆ ಇಲ್ಲ. ಅಲ್ಲಿರುವವರನ್ನ ಕೇಳಿದರೆ ಈಗಾಗಲೇ ಬೇರೆ ಕಡೆಗೆ ವರ್ಗಾವಣೆ ಆಗಿದ್ದೇವೆ. ಚಾರ್ಜ್ ಕೊಡಲು ಬಂದಿದ್ದೇವೆ ಎನ್ನುತ್ತಿದ್ದಾರೆ.

ಇದನ್ನೂ ಓದಿ: ರೈತರ ಆಯುಧ ಪೂಜೆ ಸಂಭ್ರಮಕ್ಕೆ ಲೋಡ್ ಶೆಡ್ಡಿಂಗ್ ಅಡ್ಡಿ: ತೋಟದ ಮನೆಗಳಿಗೂ ‘ನಿರಂತರ ಜ್ಯೋತಿ’ ಸಂಪರ್ಕಕ್ಕೆ ಆಗ್ರಹ

ಇನ್ನು ಕರೆಂಟ್ ಬಿಲ್ ಯಾಕೆ ಕಟ್ಟಿಲ್ಲ ಅಂತ ಅಲ್ಲಿರುವ ಸಿಬ್ಬಂದಿಯನ್ನ ಕೇಳಿದರೆ ಯಾರೊಬ್ಬರು ಉತ್ತರಿಸುತ್ತಿಲ್ಲ. ಕಚೇರಿಗಳಲ್ಲಿ ಕರೆಂಟ್ ಇಲ್ಲ. ಕೆಲಸ ಮಾಡುವ ಅಧಿಕಾರಿಗಳೂ ಇಲ್ಲ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಸಮರ್ಪಕ ವಿದ್ಯುತ್ ಪೂರೈಕೆ: ಜೆಡಿಎಸ್ ಪಕ್ಷದದಿಂದ ಪ್ರತಿಭಟನೆ

ಕೋಲಾರ: ಅಸಮರ್ಪಕ ವಿದ್ಯುತ್ ಪೂರೈಕೆಯನ್ನ ಖಂಡಿಸಿ ಕೋಲಾರದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಇತ್ತೀಚೆಗೆ ಪ್ರತಿಭಟನೆ ಮಾಡಿದ್ದರು. ಕೋಲಾರ ನಗರದ ಬೆಸ್ಕಾಂ ಕಛೇರಿ ಮುಂದೆ ರಸ್ತೆಯಲ್ಲಿಯೇ ಅಡುಗೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ್ದರು. ಕಾಂಗ್ರೆಸ್​​ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರಿಗೆ ವಿದ್ಯುತ್ ಸಮಸ್ಯೆ ಎದುರಾಗಿತ್ತು. ಲೋಡ್ ಶೆಡ್ಡಿಂಗ್ ನೆಪದಲ್ಲಿ ವಿದ್ಯುತ್ ಖಡಿತಗೊಳಿಸುತ್ತಿದ್ದಾರೆಂದು ಆರೋಪಿಸಿದ್ದರು.

ಇದನ್ನೂ ಓದಿ: ವಿದ್ಯುತ್ ಕಣ್ಣಾ ಮುಚ್ಚಾಲೆ: ಅನಧಿಕೃತ ಲೋಡ್ ಶೆಡ್ಡಿಂಗ್​ನಿಂದ ಯಾದಗಿರಿ ಜಿಲ್ಲೆಯ ರೈತರು ಕಂಗಾಲು

ಲೋಡ್ ಶೆಡ್ಡಿಂಗ್​ನಿಂದಾಗಿ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರು ಹರಿಸಲಾಗದೆ ಬೆಳೆಗಳು ಒಣಗುವಂತಹ ಪರಿಸ್ಥಿತಿ ಎದುರಾಗಿತ್ತು. ಅಲ್ಲದೆ ಲಕ್ಷಾಂತರ ರೂ. ಬಂಡವಾಳ ಹಾಕಿರುವ ರೈತರ ಬದುಕಲ್ಲಿ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ದರು. ಜೊತೆಗೆ ಗ್ಯಾರಂಟಿಗಳ ಹೆಸರಿನಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರನ್ನ ಸುಲಿಗೆ ಮಾಡುತ್ತಿದ್ದಾರೆ ಎಂದಿದ್ದಾರೆ.

ಪ್ರತಿಭಟನೆಯಲ್ಲಿ ಎಂ.ಎಲ್.ಸಿ ಗೋವಿಂದರಾಜು, ಮುಖಂಡರಾದ ಸಿಎಂಆರ್ ಶ್ರೀನಾಥ್ ಸೇರಿದಂತೆ ನೂರಾರು ಕಾರ್ಯಕರ್ತರು ಬಾಗವಹಿಸಿದ್ದರು. ಇದೇ ವೇಳೆ ಮಾತನಾಡಿದ್ದ ಎಂಎಲ್​ಸಿ ಗೋವಿಂದರಾಜು ಕಾಂಗ್ರೆಸ್​ ಸರ್ಕಾರ ರೈತರ ಅತ್ಮಹತ್ಯೆಯನ್ನು ಅವಹೇಳನ ಮಾಡುತ್ತಿದೆ ಎಂದು ಕಿಡಿಕಾರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.