ಬೆಂಗಳೂರು: 37 ಸಾವಿರ ರೂ. ಮೌಲ್ಯದ 550 ಕೆಜಿ ಟೊಮೆಟೋ ಕಳುವು
ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಟೊಮೆಟೋ ಕಳ್ಳತನ ಪ್ರಕರಣ ವರದಿಯಾಗುತ್ತಿವೆ. ಬೆಂಗಳೂರಿನ ಹಲಸೂರಿನ ಮರ್ಫಿ ಟೌನ್‌ನಲ್ಲಿಯ ತರಕಾರಿ ಅಂಗಡಿಯಿಂದ 37,500 ರೂ. ಮೌಲ್ಯದ ಸುಮಾರು 550 ಕೆಜಿ ಟೊಮೆಟೋವನ್ನು ಕದ್ದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು: ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಟೊಮೆಟೋ (Tomato) ಕಳ್ಳತನ ಪ್ರಕರಣ ವರದಿಯಾಗುತ್ತಿವೆ. ಬೆಂಗಳೂರಿನ (Bengaluru) ಹಲಸೂರಿನ ಮರ್ಫಿ ಟೌನ್‌ನಲ್ಲಿಯ ತರಕಾರಿ ಅಂಗಡಿಯಿಂದ 37,500 ರೂ. ಮೌಲ್ಯದ ಸುಮಾರು 550 ಕೆಜಿ ಟೊಮೆಟೋವನ್ನು ಕದ್ದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮರ್ಫಿ ಟೌನ್ ನಿವಾಸಿ, ಟೊಮೆಟೋ ವ್ಯಾಪಾರಿ ಪ್ರಶಾಂತ್ ಟಿ ಅವರ ಅಂಗಡಿಯಿಂದ ಟೊಮೆಟೋ ಕಳ್ಳತನವಾಗಿದ್ದು ಹಲೂಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಶಾಂತ್ ಟಿ ಅವರು ಆಗಸ್ಟ್ 11 ರಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಶಿವಾಜಿನಗರ ಮಾರುಕಟ್ಟೆಯಿಂದ ತಲಾ 22 ಕೆಜಿ ತೂಕದ 30 ಟ್ರೆ ಬಾಕ್ಸ್ ಟೊಮೆಟೋ ಖರೀದಿಸಿದ್ದರು. ನಂತರ ಟೊಮೆಟೋಗಳನ್ನು ಮರ್ಫಿ ಟೌನ್ ಮಾರುಕಟ್ಟೆಯಲ್ಲಿರುವ ತಮ್ಮ ಅಂಗಡಿಯಲ್ಲಿ ಇಟ್ಟಿದ್ದರು. ಅದೇ ದಿನ ಐದು ಟ್ರೆ ಟೊಮ್ಯಾಟೊ ಮಾರಾಟ ಮಾಡಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ಹೋಗುತ್ತಿದ್ದಾಗ ಟ್ರೆಗಳನ್ನು ಟಾರ್ಪಲಿನಿಂದ ಮುಚ್ಚಿ, ಹಗ್ಗ ಕಟ್ಟಿ ಹೋಗಿದ್ದರು. ಮರುದಿನ ಬೆಳಗ್ಗೆ 7 ಗಂಟೆ ಸುಮಾರಿಗೆ ಅಂಗಡಿಗೆ ಬಂದು ನೋಡಿದಾಗ ಉಳಿದ 25 ಟೊಮೆಟೋ ಟ್ರೆ ಬಾಕ್ಸ್ಗಳು ಕಳ್ಳತನವಾಗಿದ್ದವು.
ಇದನ್ನೂ ಓದಿ: Tomato: ಟೊಮೆಟೋ ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮ; ಕರ್ನಾಟಕ, ಮಹಾರಾಷ್ಟ್ರ, ಆಂಧ್ರದಿಂದ ಖರೀದಿಸಿ ಬೇರೆ ರಾಜ್ಯಗಳಿಗೆ ವಿತರಣೆ
ನಂತರ ಯಾರು ಕದ್ದಿರಬಹುದೆಂದು ವಿಚಾರ ಮಾಡುತ್ತಿರುವಾಗ ಪಕ್ಕದ ಅಂಗಡಿಯೊಂದರಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆಗಸ್ಟ್ 12 ರಂದು ಬೆಳಿಗ್ಗೆ 4.30 ರ ಸುಮಾರಿಗೆ ಇಬ್ಬರು ವ್ಯಕ್ತಿಗಳು ಆಟೋರಿಕ್ಷಾದಲ್ಲಿ ಬಂದು ಅಂಗಡಿ ಮುಂದೆ ವಾಹನವನ್ನು ನಿಲ್ಲಿಸಿ ಟೊಮೆಟೋ ಕದ್ದು ಪರಾರಿಯಾಗಿದ್ದರು.
ಈ ಟೊಮೆಟೋ ಖದೀಮರಲ್ಲಿದ್ದ ಓರ್ವ ಬಾಲಕ ಎರಡು ದಿನಗಳ ಬಳಿಕ ಆಗಸ್ಟ್ 15 ರಂದು ಮರ್ಫಿ ಟೌನ್ ನಿವಾಸಿ ಹಾದು ಹೋಗುತ್ತಿದ್ದನು. ಇವನನ್ನು ಬೇರೆ ಅಂಗಡಿ ಮಾಲಿಕರು ಈತನೇ ಕದ್ದವನೆಂದು ಗುರುತಿಸಿ ಆತನನ್ನು ಹಿಡಿದು ಪ್ರಶಾಂತನಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪ್ರಶಾಂತ ಬಾಲಕನನ್ನು ವಿಚಾರಿಸಿದಾಗ ಟೊಮೆಟೋ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಸ್ಥಳೀಯರು ಹುಡುಗನನ್ನು ಹಲಸೂರು ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಾಲಕನನ್ನು ವಿಚಾರಣೆಗೊಳಪಡಿಸಿದಾಗ, 15 ವರ್ಷದ ಬಾಲಕ ಹಾಸ್ಟೆಲ್ನಿಂದ ತಪ್ಪಿಸಿಕೊಂಡು ತನ್ನ ತಾಯಿಯನ್ನು ಹುಡುಕಿಕೊಂಡು ಬಂದಿದ್ದಾನೆ ಬೆಂಗಳೂರಿಗೆ ಬಂದಿದ್ದಾನೆ. ಬಾಲಕ ಆಗಸ್ಟ್ 14 ರಂದು ಟೊಮೆಟೊ ಕಳ್ಳತನಕ್ಕೂ ಅವನಿಗೆ ಯಾವುದೇ ಸಂಬಂಧವಿಲ್ಲ. ನಾವು ಅವನನ್ನು ಮಡಿವಾಳ ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದು ಹಲಸೂರು ಪೊಲೀಸರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ