Karnataka Assembly Election: ಉತ್ತರ ಕನ್ನಡದಲ್ಲಿ 93 ಲಕ್ಷ, ಬೆಂಗಳೂರಿನಲ್ಲಿ 10 ಲಕ್ಷ ರೂ. ಜಪ್ತಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 28, 2023 | 9:24 AM

ಜಿಲ್ಲೆಯ ಕುಮಟಾ ತಾಲೂಕಿನ ಚಂದಾವರ ಚೆಕ್​ಪೋಸ್ಟ್​ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 93 ಲಕ್ಷ ಹಣವನ್ನ ಜಪ್ತಿ ಮಾಡಲಾಗಿದ್ದು, ಆಟೋ ಸಹಿತ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

Karnataka Assembly Election: ಉತ್ತರ ಕನ್ನಡದಲ್ಲಿ 93 ಲಕ್ಷ, ಬೆಂಗಳೂರಿನಲ್ಲಿ 10 ಲಕ್ಷ ರೂ. ಜಪ್ತಿ
ಅಕ್ರಮ ಹಣ ಸೇರಿ ಆಟೋ ವಶಕ್ಕೆ
Follow us on

ಉತ್ತರ ಕನ್ನಡ: ಜಿಲ್ಲೆಯ ಕುಮಟಾ(Kumta) ತಾಲೂಕಿನ ಚಂದಾವರ ಚೆಕ್​ಪೋಸ್ಟ್​ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 93 ಲಕ್ಷ ಹಣವನ್ನ ಜಪ್ತಿ ಮಾಡಲಾಗಿದೆ. ಆಟೋದಲ್ಲಿ ಸಾಗಾಟ ಮಾಡುತಿದ್ದ ವೇಳೆ ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದ್ದು, ಈ ವೇಳೆ ಅಕ್ರಮ ಹಣ ಇರುವುದು ಪತ್ತೆಯಾಗಿದೆ. ಈ ಹಣವನ್ನ ಶಿವಮೊಗ್ಗದಿಂದ ಕುಮಟಾಕ್ಕೆ ತರಲಾಗುತ್ತಿದ್ದು, KA14 C 4874 ನೊಂದಣಿ ಹೊಂದಿರುವ ಆಟೋವನ್ನ ಹಾಗೂ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಕುಮಟಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸಿಎಂ ನಿವಾಸದ ಕೊಂಚ ದೂರದಲ್ಲೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 10 ಲಕ್ಷ ಹಣ ಪತ್ತೆ

ಬೆಂಗಳೂರು: ಸಿಎಂ ನಿವಾಸದ ಕೊಂಚ ದೂರದಲ್ಲೇ ಇರುವ ಆರ್​.ಟಿ ನಗರದ ವ್ಯಾಪ್ತಿಯ ಚೆಕ್​​ಪೋಸ್ಟ್​ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 10 ಲಕ್ಷ ಹಣವನ್ನ ವಶಕ್ಕೆ ಪಡೆಯಲಾಗಿದೆ. ಕಾರು ತಪಾಸಣೆ ವೇಳೆ ಅಕ್ರಮ ಹಣ ಪತ್ತೆಯಾಗಿದ್ದು, ಮೊಹಮ್ಮದ್​ ಷರೀಫ್​, ಮಹಮ್ಮದ್​ ಯುನೂಸ್​ ಎಂಬುವವರನ್ನ ವಶಕ್ಕೆ ಪಡೆದು, ಆರ್​.ಟಿ.ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ವೇಳೆ ತಾವು ಮೊಬೈಲ್ ಸೇಲ್ಸ್ ಅಂಡ್ ಸರ್ವಿಸ್ ಶೋ ನಡೆಸ್ತಿರೋದಾಗಿ ಕಾರಿನ ಮಾಲೀಕ ಹೇಳಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ