ಬೆಂಗಳೂರು, ಸೆ.28: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಸುಪ್ರೀಂಕೊರ್ಟ್ ಆದೇಶ ನೀಡಿದ ಹಿನ್ನಲೆ ಬೆಂಗಳೂರು ಬಂದ್ ಮಾಡಲಾಗಿತ್ತು. ಅಂದು ಜಯನಗರ(Jayanagara)ದಲ್ಲಿ ನಡೆದಿದ್ದ ಹೋಟೆಲ್ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜಯನಗರ ಪೊಲೀಸರು ಇಬ್ಬರು ಅರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಯೋಗಿಶ್ ಮತ್ತು ಸೋಮಶೇಖರ್ ಬಂಧಿತ ಅರೋಪಿಗಳು. ಹೌದು, ಬಂದ್ ವೇಳೆ ಏಂಟಕ್ಕು ಹೆಚ್ಚು ಜನರು ಗುಂಪಾಗಿ ಬಂದು ಹೋಟೆಲ್ ಸೇರಿ ನಾಲ್ಕು ಕಡೆ ಕಲ್ಲು ತೂರಿದ್ದರು.
ಈ ಹಿನ್ನಲೆ ಜಯನಗರ ಪೋಲೀಸ್ ಠಾಣೆಯಲ್ಲಿ ಪ್ರತ್ಯೇಕ ನಾಲ್ಕು ಕೇಸ್ ದಾಖಲು ಮಾಡಲಾಗಿತ್ತು. ಸದ್ಯ ಇಬ್ಬರು ಅರೋಪಿಗಳು ಅರೆಸ್ಟ್ ಮಾಡಿ ಜೈಲಿಗಟ್ಟಿರುವ ಪೊಲೀಸರು, ಉಳಿದ ಹಲವಾರು ಅರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ. ಇನ್ನು ತನಿಖೆ ವೇಳೆ ಬಂಧಿತ ಇಬ್ಬರು ಆರೋಪಿಗಳು ಬಿಜೆಪಿ ಕಾರ್ಯಕರ್ತರಾಗಿದ್ದು, ಜಯನಗರ ಎಂ ಎಲ್ ಎ ರಾಮಮೂರ್ತಿ ಶಿಷ್ಯರು ಎಂಬುದು ಪತ್ತೆಯಾಗಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಪ್ರತಿಭಟನೆ ಹೆಸರಲ್ಲಿ ಹೋಟೆಲ್ಗೆ ನುಗ್ಗಿ ದಾಂಧಲೆ; ವಿಡಿಯೋ ಇಲ್ಲಿದೆ
ಹೌದು, ಬೆಂಗಳೂರು ಬಂದ್ ದಿನ ಹೋರಾಟದ ಹೆಸರಿನಲ್ಲಿ ಹೋಟೆಲ್ಗೆ ನುಗ್ಗಿ ಧಾಂದಲೆ ಮಾಡಿದ್ದ ಹಿನ್ನಲೆ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಹೌದು, ಬಂದ್ ಇದ್ರೂ ಬಾಗಿಲು ಮುಚ್ಚಿಲ್ಲ ಎಂದು ಇಬ್ಬರಿಂದ ಜಯನಗರ(Jayanagara)ದಲ್ಲಿರುವ ಉಡುಪಿ ಹಬ್ಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿದ ಘಟನೆ ನಡೆದಿತ್ತು. ಬೈಕ್ನಲ್ಲಿ ಬಂದಿದ್ದ ಶಿವು, ವಿಶ್ವ ಹಾಗೂ ಇತರರಿಂದ ಈ ಕೃತ್ಯ ನಡೆದಿದ್ದು, ಈ ಕುರಿತು ಹೋಟೆಲ್ ಮಾಲೀಕರು ಠಾಣೆಗೆ ದೂರು ನೀಡಿದ್ದರು. ಅವರ ದೂರಿನನ್ವಯ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಬಳಿಕ ಶಿವು, ವಿಶ್ವ ಎಂಬಾತನನ್ನು ವಶಕ್ಕೆ ಪಡೆದಿದ್ದರು. ಇದೀಗ ಮತ್ತಿಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:31 am, Thu, 28 September 23