AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಈ ರಸ್ತೆಗಳಲ್ಲಿ ಇಂದು ವಾಹನ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗಗಳು ಇಲ್ಲಿವೆ ನೋಡಿ

ಈದ್ ಮಿಲಾದ್ ಹಬ್ಬದ ಪ್ರಯುಕ್ತ ಇಂದು (ಗುರುವಾರ) ಬೆಂಗಳೂರಿನ ಕೆಲವೆಡೆ ವಾಹನ ಮಾರ್ಗ ಬದಲಾವಣೆ ಮಾಡಲಾಗಿದ್ದು, ಬೆಂಗಳೂರು ನಗರ ಸಂಚಾರ ಪೊಲೀಸರು ಈ ಬಗ್ಗೆ ಮಾರ್ಗಸೂಚಿ ಹೊರಡಿಸಿದ್ದಾರೆ. ಹಾಗಾದ್ರೆ, ಯಾವೆಲ್ಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

ಬೆಂಗಳೂರಿನ ಈ ರಸ್ತೆಗಳಲ್ಲಿ ಇಂದು ವಾಹನ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗಗಳು ಇಲ್ಲಿವೆ ನೋಡಿ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Sep 28, 2023 | 6:43 AM

Share

ಬೆಂಗಳೂರು, (ಸೆಪ್ಟೆಂಬರ್ 28): ಈದ್ ಮಿಲಾದ್ ಹಬ್ಬದ ಪ್ರಯುಕ್ತ ಇಂದು (ಗುರುವಾರ) ಬೆಂಗಳೂರಿನ ಕೆಲವೆಡೆ ವಾಹನಗಳ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಕುರಿತು ಬೆಂಗಳೂರು ನಗರ ಸಂಚಾರ ಪೊಲೀಸರು ಮಾರ್ಗಸೂಚಿ (Bangalore Traffic Advisory) ಬಿಡುಗಡೆ ಮಾಡಿದ್ದಾರೆ. ನೃಪತುಂಗ, ಅಂಬೇಡ್ಕರ್ ರಸ್ತೆ, ನಾಯಂಡಹಳ್ಳಿ ಜಂಕ್ಷನ್, ಕಿಂಕೋ ಜಂಕ್ಷನ್, ಬಾಪೂಜಿನಗರ, ಮಾರ್ಕೆಟ್ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಬದಲಿ ಮಾರ್ಗ ಬಳಸುವಂತೆ ವಾಹನ ಸವಾರರಿಗೆ ಪೊಲೀಸರು ಸೂಚಿಸಿದ್ದಾರೆ.

ನೃಪತುಂಗ ರಸ್ತೆಗೆ ಬದಲಿ

ಆನಂದರಾವ್ ಸರ್ಕಲ್ ಕಡೆಯಿಂದ ಬರುವ ವಾಹನ ಸವಾರರು ಕೆ.ಆರ್ ಸರ್ಕಲ್ ಬಳಿ ಎಡ ತಿರುವು ಪಡೆದು ಡಾ|| ಅಂಬೇಡ್ಕರ್ ರಸ್ತೆಯಲ್ಲಿ ಸಾಗಿ ಬಾಳೇಕುಂದ್ರಿ ಸರ್ಕಲ್ ಕ್ಲೀನ್ಸ್ ರಸ್ತೆ ಮೂಲಕ ಮುಂದಕ್ಕೆ ತೆರಳುವುದು.

ಡಾ.ಎ.ಆರ್. ಅಂಬೇಡ್ಕರ್ ರಸ್ತೆ

ಬಾಳೇಕುಂದ್ರಿ ಸರ್ಕಲ್‌ನಿಂದ ಸಿಟಿ ಮಾರ್ಕೆಟ್ ಕಡೆಗೆ ಸಂಚರಿಸುವ ಸವಾರರು ಕ್ಲೀನ್ಸ್ ರಸ್ತೆ ಸಿದ್ದಅಂಗಯ್ಯ ಸರ್ಕಲ್ ಮೂಲಕ ಸಂಚರಿಸುವುದು.

ನಾಯಂಡನಹಳ್ಳಿ ಜಂಕ್ಷನ್

ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾದಲ್ಲ ನಾಯಂಡನಹಳ್ಳಿ ಅಂಗ್ಲಸ್ ನಲ್ಲಿ ಎಡ ತಿರುವು ಪಡೆದು ನಾಗರಬಾವಿ ರಿಂಗ್ ರಸ್ತೆ ಮೂಲಕ ಸಂಚರಿಸಬಹುದಾಗಿದೆ ಹಾಗೂ ಚಂದ್ರಲೇಔಟ್ ವಿಜಯನಗರ ಮುಖೇನ ಸಂಚರಿಸಬಹುದಾಗಿರುತ್ತದೆ.

ಕಿಂಕೋ ಜಂಕ್ಷನ್

ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣಿ ಹೆಚ್ಚಾದಲ್ಲಿ ಕಿಂಕೋ ಜಂಕ್ಷನ್‌ನಲ್ಲ ಎಡತಿರುವು ಪಡೆದು ವಿಜಯನಗರ ಮಾರ್ಗವಾಗಿ ಸಂಚರಿಸಬಹುದಾಗಿರುತ್ತದೆ

ಬಾಪೂಜಿ ನಗರ

ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣಿ ಹಚ್ಚಾದಲ್ಲ ವಿಜಯನಗರದ ಕಡೆಯಿಂದ ಬರುವ ವಾಹನಗಳು ಮೈಸೂರು ಕಡೆಗೆ ಟೆಲಸಲು ಚಂದ್ರಲೇಔಟ್‌ನಿಂದ ಬಲ ತಿರುವು ಪಡೆದು ನಾಗರಬಾವಿ ಸರ್ಕಲ್ ಹಾಗೂ ರಿಂಗ್ ರಸ್ತೆ ಮುಖಾಂತರ ಕೆಂಗೇರಿ ಉಪ ನಗರ ಮಾರ್ಗವಾಗಿ ಸಂಚರಿಸಬಹುದಾಗಿರುತ್ತದೆ

ಮಾರ್ಕೆಟ್ ಸರ್ಕಲ್

ಟೌನ್‌ ಹಾಲ್‌ ಕಡೆಗೆ ಸಂಚಾರ ದಟ್ಟಣೆ ಉಂಟಾದಲ್ಲಿ ಬಸಪ್ಪ ಸರ್ಕಲ್ ಕಡೆಗೆ ಬಲತಿರುವು ನೀಡಿ ಅಥವಾ ಅವಿನ್ಯೂ ರಸ್ತೆ ಕಡೆಗೆ ಮಾರ್ಗ ಬದಲಾವಣೆ ಮಾಡಲಾಗುವುದು.

ಪರ್ಯಾಯ ಮಾರ್ಗಗಳು

  • ಥಣಿಸಂದ್ರ ಕಡೆಯಿಂದ ಶಿವಾಜಿನಗರ ಕಡಗ ಬರುವ ವಾಹನಗಳು ನಾಗವಾರ ಅಂಗ್ಟನ್‌ನಿಂದ ಎಡತಿರುವು – ಹೆಣ್ಣೂರು ಜಂಕ್ಷನ್ – ಬಲತಿರುವು – ಸಿದ್ಧಪ್ಪ ರೆಡ್ಡಿ ಜಂಕ್ಷನ್ – ಅಯೋಧ್ಯ ಜಂಗ್ಟನ್-ಅಂಗರಾಜಪುರಂ ಹೈ ಓವರ್ ಮೂಲಕ ರಾಬರ್ಟ್‌ಸನ್ ರಸ್ತೆ ಜಂಕ್ಷನ್‌ನಲ್ಲ ಬಲ ತಿರುವು – ಹೇನ್ಸ್ ರಸ್ತೆ ಮೂಲಕ ಶಿವಾಜಿನಗರ ತಲುಪುವುದು.
  • ಶಿವಾಜನಗರದ ಕಡೆಯಿಂದ ನಾಗವಾರ ಅಂಕ್ಷನ್‌ ಕಡೆಗೆ ಬರುವ ವಾಹನಗಳು ಸ್ಪೆನ್ಸರ್ ರಸ್ತೆಯಲ್ಲಿ ಕಡ್ಡಾಯವಾಗಿ ಬಲ ತಿರುವು ಪರದು – ಸ್ಪೆನ್ಸರ್ ರಸ್ತೆ ಮೂಲಕ ಕೋಲ್ಡ್ ರಸ್ತೆ ತಲುಪಿ ವೀಲರ್ ರಸ್ತೆ ಮೂಲಕ ಹೆಣ್ಣೂರು, ಬಾಣಸವಾಡಿ, ಹಲಸೂರು ಕಡೆಗೆ ಸಂಚರಿಸಬಹುದಾಗಿದೆ.
  • ಆರ್.ಅ.ನಗರ ದಿಂದ ಮತ್ತು ಕಾವಲ್ ಬೈರಸಂದ್ರ ಮೂಲಕ ಬರುವ ವಾಹನಗಳು ಮುಷ್ಟಾಂಟಂ ಟಾಕೀಸ್ ಬಳಿ ಎಡ ತಿರುವು ವರದು ವೀರಣ್ಣ ಪಾಳ್ಯ ಅಂಕ್ಷನ್ ಕಡೆಗೆ ಬಲ ತಿರುವು ಪಡೆದು ನಾಗವಾರ ಅಂಗ್ಟನ್ ರಸ್ತೆ ಕಡೆಗೆ ಸಂಚರಿಸಬಹುದಾಗಿರುತ್ತದೆ.
  • ನೇತಾಜಿ ರಸ್ತೆ ಕಡೆಯಿಂದ ಟ್ಯಾನರಿ ರಸ್ತೆ ಮೂಲಕ ನಾಗವಾರ ಕಡೆಗೆ ಬರುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ನೇತಾಜಿ ಜಂಕ್ಷನ್‌ನಿಂದ – ಬಲತಿರುವು ಮಾಸ್ಕ್ ಜಂಕ್ಷನ್ ಲಾಟರ್ ರಸ್ತೆ ಎಂ.ಎಂ.ರಸ್ತೆ ಜಂಕ್ಷನ್ – ಎಡತಿರುವು – ನಾಟರಿ – – ರಸ್ತೆ ಹೆಣ್ಣೂರು ರಸ್ತೆ ಜಂಕ್ಷನ್ – ಬಲತಿರುವು – ಹಣ್.ಎಂ.ರಸ್ತೆ ಡೇವಿಸ್ ರಸ್ತೆ ಜಂಕ್ಷನ್‌ ಮೂಲಕ ಅಂಗರಾಜಮರಂ ಕೃಓವರ್ ಮುಖೇನ ಹಣ್ಣೂರು ಕಡೆಗೆ ಸಂಚರಿಸಬಹುದಾಗಿದೆ.
  • ಲಾಜರ್ ರಸ್ತೆ ಮತ್ತು ಎಂ.ಎಂ.ರಸ್ತೆ ಜಂಕ್ಷನ್‌ನಲ್ಲಿ ಮಾಸ್ಕ್ ಸರ್ಕಲ್ ಕಡೆಗೆ ಬರುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ಲಾಜರ್‌ ರಸ್ತೆಯಲ್ಲಿ ಮುಂದುವರೆದು ಸಿಂಧಿ ಕಾಲೋನಿ ಜಂಕ್ಷನ್ –ವೀಲರ್ ರಸ್ತೆ ಮೂಲಕ ಕೀರ್ತಿ ಸಾಗರ್ ಥಾಮಸ್ ಬೇಕರಿ – ಥಾಮಸ್ ಕಥೆ ಜಂಕ್ಷನ್ – ಬಲತಿರುವು – ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ಹನ್ಸ್ ಸರ್ಕಲ್ ಕಡೆಗೆ ಸಂಚರಿಸಬಹುದಾಗಿದೆ.
  • ಹೆಚ್.ಎಂ.ರಸ್ತೆ ಮೂಲಕ ವಾಟರಿ ರಸ್ತೆ ಕಡೆಗೆ ಬರುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ಹೆಚ್‌.ಎಂ.ರಸ್ತೆಯಲ್ಲಿ ‘ಕಡ್ಡಾಯವಾಗಿ ಎಡ ತಿರುವು ಪಡೆದು ಲಾಜರ್ ರಸ್ತೆ – ಸಿಂಧಿ ಕಾಲೋನಿ ಜಂಕ್ಷನ್ – ವೀಲರ್ ರಸ್ತೆ ಮೂಲಕ ಕೀರ್ತಿ – ಸಾಗರ್ – ಥಾಮಸ್ ಬೇಕರಿ – ಥಾಮಸ್ ಕಫ ಅಂಗ್ಟನ್ – ಬಲತಿರುವು ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ಹನ್ನ = ಸರ್ಕಲ್‌ ಕಡೆಗೆ ಸಂಚರಿಸಬಹುದಾಗಿದೆ

ಪಾರ್ಕಿಂಗ್ ನಿರ್ಬಂಧಿಸಿರುವ ಸ್ಥಳಗಳು

ಪಾಟರಿ ಸರ್ಕಲ್ ನಿಂದ ನಾಗವಾರ ಸಿಗ್ನಲ್, ಗೋವಿಂದಮರ ಜಂಕ್ಷನ್‌ನಿಂದ ಗೋವಿಂದಮಠ ಕಾ & ಸು ಮೊಅಸ್ ಠಾಣೆಯವರೆಗೆ ಮತ್ತು ಹೆಚ್.ಐ.ಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್‌ನಿಂದ ನರೇಂದ್ರ, ಟೆಂಟ್ ಜಂಕ್ಷನ್‌ವರೆಗೆ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ಅನ್ನು ನಿರ್ಬಂಧಿಸಲಾಗಿರುತ್ತದೆ.

ಇದನ್ನೂ ಓದಿ: Karnataka Bandh: ಕರ್ನಾಟಕ ಬಂದ್​​ ದಿನ ಏನೇನಿರುತ್ತೆ, ಏನೇನಿರಲ್ಲ? ಇಲ್ಲಿದೆ ವಿವರ

ನೇತಾಜಿ ಜಂಕ್ಷನ್‌ನಿಂದ ಹನ್ಸ್ ಸರ್ಕಲ್‌ವರೆಗೆ, ಹನ್ಸ್ ಸರ್ಕಲ್ ನಿಂದ ನ್ಯೂ ಬಂಬೂ ಬಹಾರ್ ಸರ್ಕಲ್‌ವರೆಗ, ಹನ್ಸ್ ಸರ್ಕಲ್‌ನಿಂದ ಹಜ್‌ ಕ್ಯಾಂಪ್‌ವರೆಗೆ ಮತ್ತು ಲಾಜರ್ ರಸ್ತೆಯಿಂದ ವೀಲರ್ ರಸ್ತೆಯ ಥಾಮಸ್ ಕಫೆ ಜಂಕ್ಷನ್‌ವರೆಗೆ ರಸ್ತೆಯ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ಅನ್ನು ನಿರ್ಬಂಧಿಸಲಾಗಿರುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ