AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Bandh: ಕರ್ನಾಟಕ ಬಂದ್​​ ದಿನ ಏನೇನಿರುತ್ತೆ, ಏನೇನಿರಲ್ಲ? ಇಲ್ಲಿದೆ ವಿವರ

Karnataka bandh on September 29: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಶುಕ್ರವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ನಡೆಯಲಿರುವ ಕರ್ನಾಟಕ ಬಂದ್‌ಗೆ ನೂರಾರು ಸಂಘಟನೆಗಳು ಬೆಂಬಲ ಸೂಚಿಸಿವೆ. ಬಂದ್ ದಿನ ಏನೇನು ಸೇವೆಗಳು ಲಭ್ಯವಿರುತ್ತವೆ? ಯಾವ ಸೇವೆಗಳು ಲಭ್ಯವಿರುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.

Karnataka Bandh: ಕರ್ನಾಟಕ ಬಂದ್​​ ದಿನ ಏನೇನಿರುತ್ತೆ, ಏನೇನಿರಲ್ಲ? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Sep 27, 2023 | 5:20 PM

ಬೆಂಗಳೂರು, ಸೆಪ್ಟೆಂಬರ್ 27: ತಮಿಳುನಾಡಿಗೆ ಕಾವೇರಿ ನೀರು (Cauvery Water) ಬಿಡುವುದನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕು ಎಂದು ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆಯೊಡ್ಡುವುದಾಗಿ ಕನ್ನಡ ಪಡ ಹೋರಾಟಗಾರ ವಾಟಾಳ್ ನಾಗರಾಜ್ ಬೆದರಿಕೆ ಹಾಕಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ನಡೆಯಲಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಸ್ಯಾಂಡಲ್ ವುಡ್ ನಟರಿಗೆ ಮನವಿ ಮಾಡಿದ್ದಾರೆ.

ವಾಟಾಳ್ ನಾಗರಾಜ್ ಮಾತನಾಡಿ, ಶುಕ್ರವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ನಡೆಯಲಿರುವ ಕರ್ನಾಟಕ ಬಂದ್‌ಗೆ ನೂರಾರು ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ಹೇಳಿದ್ದಾರೆ.

20 ದಿನಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಮೂರನೇ ಬಂದ್ ಇದಾಗಿದೆ. ಮೊದಲನೆಯ ಬಂದ್ ಸೆಪ್ಟೆಂಬರ್ 11 ರಂದು ಖಾಸಗಿ ಸಾರಿಗೆ ಒಕ್ಕೂಟಗಳು ಕರೆ ನೀಡಿದ್ದಾಗಿತ್ತು. ಎರಡನೆಯದು ಸೆಪ್ಟೆಂಬರ್ 26 ರಂದು ಕರ್ನಾಟಕ ಜಲ ಸಂರಕ್ಷಣಾ ಸಮಿತಿಯು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಆಚರಿಸಿತು.

ಕರ್ನಾಟಕ ಬಂದ್​ ದಿನ ಏನೇನಿರಲ್ಲ?

  • ಓಲಾ ಮತ್ತು ಉಬರ್ ಸೇವೆಗಳು
  • ಆಟೋರಿಕ್ಷಾಗಳು
  • ಕಾರ್ಮಿಕ ಆಧಾರಿತ ಕೆಲಸಗಳು
  • ಟ್ರಕ್ ಸಾರಿಗೆ
  • ಮಾರುಕಟ್ಟೆಗಳು
  • ಬೀದಿ ವ್ಯಾಪಾರಿಗಳು
  • ಹೋಟೆಲ್‌ಗಳು
  • ಚಿತ್ರಮಂದಿರಗಳು
  • ಮಾಲ್‌ಗಳು
  • ಖಾಸಗಿ ಬಸ್ಸುಗಳು
  • ಬೇಕರಿಗಳು

ಕರ್ನಾಟಕ ಬಂದ್ ದಿನ ಏನೇನಿರುತ್ತವೆ?

  • ಆಸ್ಪತ್ರೆ
  • ಔಷಧಾಲಯಗಳು
  • ಆಂಬ್ಯುಲೆನ್ಸ್ ಸೇವೆಗಳು
  • ಮೆಟ್ರೋ ಸೇವೆ
  • ಹಾಲಿನ ಪಾರ್ಲರ್‌ಗಳು

ಇನ್ನೂ ನಿರ್ಧಾರವಾಗದೇ ಇರುವುದು

  • ಶಾಲೆ ಮತ್ತು ಕಾಲೇಜುಗಳು
  • ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿ ಬಸ್ ಸೇವೆಗಳು

ಏತನ್ಮಧ್ಯೆ, ಮಕ್ಕಳಿಗೆ ನಡೆಯುತ್ತಿರುವ ಪರೀಕ್ಷೆಗಳಿಂದಾಗಿ ಖಾಸಗಿ ಶಾಲಾ ವ್ಯಾನ್ ಚಾಲಕರ ಸಂಘವು ಬಂದ್​ಗೆ ತಮ್ಮ ನೈತಿಕ ಬೆಂಬಲವನ್ನು ನೀಡಿದೆ.

18 ದಿನಗಳ ಕಾಲ ತಮಿಳುನಾಡಿಗೆ 3,000 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ರಾಜ್ಯಕ್ಕೆ ಮತ್ತೊಮ್ಮೆ ಆದೇಶ ನೀಡಿರುವುದರಿಂದ ಪ್ರತಿಭಟನೆಯು ಬೆಂಗಳೂರು ಮತ್ತು ಕರ್ನಾಟಕದ ಹಲವು ಭಾಗಗಳಲ್ಲಿ ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಆದೇಶವನ್ನು ಕರ್ನಾಟಕ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಕಾವೇರಿ ವಿವಾದ: ಕರ್ನಾಟಕ ಬಂದ್​ಗೆ 100ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ, ಹಲವೆಡೆ ರಸ್ತೆ ತಡೆ ಸಾಧ್ಯತೆ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಂದ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಪರ ಸಂಘಟನೆಗಳು ನಗರದಾದ್ಯಂತ ವಿವಿಧ ಹೋಟೆಲ್‌ಗಳು ಮತ್ತು ಮಾಲ್‌ಗಳಿಗೆ ಭೇಟಿ ನೀಡಿ ಸೆಪ್ಟೆಂಬರ್ 29 ರಂದು ಮುಚ್ಚುವಂತೆ ಮನವಿ ಮಾಡಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್