Bengaluru News: ಮಹಾಲಕ್ಷ್ಮಿ ಲೇಔಟ್​ನಲ್ಲಿ ವೃದ್ದೆ ಕೊಲೆ ಮಾಡಿ ಬಂಗಾರ ದೋಚಿದ್ದ ಪ್ರಕರಣ; ಮೂವರು ಅರೋಪಿಗಳು ಅರೆಸ್ಟ್

|

Updated on: Jun 02, 2023 | 8:37 AM

ನಗರದ ಮಹಾಲಕ್ಷ್ಮಿ ಲೇಔಟ್ ಫೋಸ್ಟ್​ ಆಫೀಸ್​ ಹತ್ತಿರದ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ 82 ವರ್ಷದ ಕಮಲಮ್ಮ ಎಂಬುವವರನ್ನ ಕೈ ಕಾಲು ಕಟ್ಟಿ ಹಾಕಿ ಮೇ.28ರಂದು ಕೊಲೆ ಮಾಡಿ, ಬಂಗಾರ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಅರೆಸ್ಟ್​ ಮಾಡಲಾಗಿದೆ.

Bengaluru News: ಮಹಾಲಕ್ಷ್ಮಿ ಲೇಔಟ್​ನಲ್ಲಿ ವೃದ್ದೆ ಕೊಲೆ ಮಾಡಿ ಬಂಗಾರ ದೋಚಿದ್ದ ಪ್ರಕರಣ; ಮೂವರು ಅರೋಪಿಗಳು ಅರೆಸ್ಟ್
ಮೃತ ಕಮಲಮ್ಮ
Follow us on

ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್(Mahalakshmi Layout) ಫೋಸ್ಟ್​ ಆಫೀಸ್​ ಹತ್ತಿರದ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ 82 ವರ್ಷದ ಕಮಲಮ್ಮ ಎಂಬುವವರನ್ನ ಕೈ ಕಾಲು ಕಟ್ಟಿ ಹಾಕಿ ಮೇ.28ರಂದು ಕೊಲೆ ಮಾಡಿ, ಬಂಗಾರ ದೋಚಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮೂವರು ಅರೋಪಿಗಳನ್ನ ಇದೀಗ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಿದ್ದರಾಜು, ಆಶೋಕ್ ಸೇರಿ ಮೂವರು ಬಂಧಿತ ಆರೋಪಿಗಳು. ಮೂರು ತಿಂಗಳ ಹಿಂದೆ ಪ್ಲಂಬರ್ ಕೆಲಸ ಮಾಡ್ತಿದ್ದ ಸಿದ್ದರಾಜು, ಮೃತ ವೃದ್ದೆ ಮನೆಯಲ್ಲಿ ಕೆಲಸ ಮಾಡಿದ್ದ. ಬಳಿಕ ಮನೆಯಲ್ಲಿ ವೃದ್ದೆ ಒಬ್ಬರೆ ಇದ್ದು, ಅವರ ಬಳಿ ಬಂಗಾರವಿದೆ. ಅದನ್ನ ದೋಚಿದರೇ ಸೆಟಲ್​ ಆಗಬಹುದು ಎಂದು ಯೋಚಿಸಿದ್ದ ಆರೋಪಿ ಸಿದ್ದರಾಜು.

ಇನ್ನು ಈ ವಿಷಯವನ್ನ ಸಿದ್ದರಾಜು ತನ್ನ ಗೆಳೆಯ ಆಶೋಕ್ ಬಳಿ ಪ್ರಸ್ತಾಪ ಮಾಡಿ ಪ್ಲಾನ್ ಮಾಡಿದ್ದರು. ಕೊಲೆ ನಡೆದ ದಿನ ಎರಡು ಬಾರಿ ಮನೆ ಹತ್ತಿರ ಹೋಗಿದ್ದಾರೆ. ಮೊದಲು ಸಂಜೆ ನಾಲ್ಕು ಘಂಟೆಗೆ ಹೋಗಿ, ಖಾಲಿ ಇದ್ದ ಒಂದು ಮನೆ ಬಾಡಿಗೆ ಕೊಡ್ತಿರಾ ಬಿಸ್ಕಟ್ ಗೋಡನ್ ಮಾಡ್ತಿವಿ ಎಂದು ಕೇಳಿದ್ದಾರೆ. ಅಜ್ಜಿ ಇಲ್ಲವೆಂದು ಬಾಗಿಲು ತೆಗೆದಿಲ್ಲ. ಮತ್ತೆ ಸಂಜೆ ಆರು ಘಂಟೆಗೆ ವಾಪಸ್ಸು ಹೋಗಿದ್ದಾರೆ. ಈ ವೇಳೆ ಈ ಹಿಂದೆ ಬಂದಿದ್ದವರೆ ಅಲ್ಲವಾ ಎಂದು ಅಜ್ಜಿ ಬಾಗಿಲು ತೆಗೆದಿದ್ದಾರೆ. ಬಾಗಿಲು ತೆಗೆಯುತಿದ್ದಂತೆ ಅಜ್ಜಿಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ನಂತರ ಅಜ್ಜಿ ಬಳಿಯಿದ್ದ ಎರಡು ಚಿನ್ನದ ಸರ ಮತ್ತು ಎರಡು ಬಂಗಾರದ ಬಳೆ ದೋಚಿ ಎಸ್ಕೇಪ್ ಆಗಿದ್ದರು.

ಇದನ್ನೂ ಓದಿ:ನನ್ನ ಹೆಂಡತಿಯನ್ನು ಕೊಂದಿರುವೆ, ನೀನೂ ಸಾಯಿ! ಅದರಿಂದ ನಿನ್ನ ಹೆಂಡತಿ ನನ್ನವಳಾಗುತ್ತಾಳೆ- ಎಂದು ಜೋಡಿ ಕೊಲೆ ಮಾಡಿದ ಆರೋಪಿ

ಇನ್ನು ಈ ವಿಷಯ ಗೊತ್ತಾಗುತ್ತಿದ್ದಂತೆ ಮಹಾಲಕ್ಷ್ಮೀ ಲೇಔಟ್​ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಸೆರೆಗೆ ಬಲೆ ಬಿಸಿದ್ದರು. ಈ ಕೊಲೆ ಪಾತಕಿಗಳ ಜಾಡು ಹಿಡಿದು ಹೊರಟ ಪೊಲೀಸರಿಗೆ ಆರೋಪಿಗಳು ಮೈಸೂರಿನಲ್ಲಿ ಇರುವ ಮಾಹಿತಿ ಆಧಾರದ ಮೇಲೆ ಮೈಸೂರಿಗೆ ಹೋಗಿ ಅಲ್ಲಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಮೂವರು ಅರೋಪಿಗಳನ್ನ ಬಂಧಿಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ